ವೇಷಭೂಷಣ ಸ್ಪರ್ಧೆ : ಮನಸೆಳೆದ ಚಿಣ್ಣರು

ಕೊಪ್ಪಳ ನ. ೨೬ : ಕೊಪ್ಪಳ ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಶಾಲಾ ಚಿಣ್ಣರು ವಿವಿಧ ವೇಷಗಳನ್ನು ಧರಿಸಿ, ಗಮನ ಸೆಳೆದರು.
  ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಬೌದ್ಧಿಕ ವಿಕಾಸದ ಜೊತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುವ ಉದ್ದೇಶದಿಂದ ವಚನ ಗಾಯನ ಸ್ಪರ್ಧೆ, ಸಂಗೀತ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.  ಇದರ ಮುಂದುವರೆದ ಭಾಗವಾಗಿ ಇದೀಗ ಶಾಲೆಯಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು.  ಮಕ್ಕಳು ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಛದ್ಮ ವೇಷಧಾರಿಗಳಾಗಿ ಸ್ಪರ್ಧೆಯಲ್ಲಿ ಗಮನ ಸೆಳೆದರು.  ಮಹರ್ಷಿ ವಾಲ್ಮೀಕಿ, ರಾಘವೇಂದ್ರ ಸ್ವಾಮೀಜಿ, ಸಾಯಿಬಾಬ, ಅಘೋರಿ, ತರಕಾರಿ ಮನುಷ್ಯ, ವೇಷ, ಶಕುಂತಲಾ, ಲಂಬಾಣಿ ವೇಷ, ಕೃಷ್ಣ ವೇಷ, ಒನಕೆ ಓಬವ್ವ ಸುಭಾಶ್ಚಂದ್ರ ಭೋಸ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ಮಹಾನ್ ನಾಯಕರು ಮುಂತಾದ ವೇಷಗಳನ್ನು ಧರಿಸಿದ್ದ ಚಿಣ್ಣರು ನೋಡುಗರ ಗಮನ ಸೆಳೆದರು.  ಶಾಲೆಯ ಎಲ್‌ಕೆಜಿ, ಯುಕೆಜಿ, ಸೇರಿದಂತೆ ಒಟ್ಟು ೬೮ ವಿದ್ಯಾರ್ಥಿಗಳು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
  ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ರೋಜ್‌ಮೇರಿ, ಶಾಲೆಯ ಆಡಳಿತಾಧಿಕಾರಿ ವಿಜಯಾ ಹಿರೇಮಠ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕರಾದ ಎಂ. ಸುಮಹಿತ್, ಡಾ. ಸತೀಶ್ ಅವರು ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದರು.  ಶಿಕ್ಷಕರಾದ ವಿದ್ಯಾವತಿ, ವಿಜಯ ಒಡೆಯರ್, ಮಹಾಲಕ್ಷ್ಮಿ ಉಪಸ್ಥಿತರಿದ್ದರು.

Leave a Reply