ದಕ್ಷ ಆಡಳಿತಗಾರ ಅಭಿನಂದನಾ ಗ್ರಂಥ ಬಿಡುಗಡೆ

ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಕತ್ವ
ಕೊಪ್ಪಳ: ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಎಂ.ಹನಮನಾಳರ ೮೩ನೇ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಕುರಿತು ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಕತ್ವದ ೧೩ನೇ ಕೃತಿ ದಕ್ಷ ಆಡಳಿತಗಾರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಬವನ್ನು ೧೨-೦೫-೨೦೧೨ ರಂದು ಶನಿವಾರ ಬೆಳಿಗ್ಗೆ ೧೧-೦೦ ಘಂಟಗೆ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. 
ಪಂಚಮಸಾಲಿ ಸಮಾಜದ ಹರಿಹರದ ಸ್ಥಿರಪೀಠಾಧಿಪತಿಗಳಾದ ಶ್ರೀ ಶ್ರೀ ೨೦೦೮ ಜಗದ್ಗುರು ಡಾ|| ಮಹಾಂತಸ್ವಾಮಿಗಳು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳದ ಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಪಂಚಮಸಾಲಿ ಸಮಾಜದ ಹರಿಹರದ ಚರಪೀಠಾಧಿಪತಿಗಳಾದ ಶ್ರೀ ಶ್ರೀ ೨೦೦೮ ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. 
ಶಾಸಕರಾದ ಸಂಗಣ ಕರಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡದ ಖ್ಯಾತ ವಿಮರ್ಶಕರಾದ ಡಾ.ಗಿರಡ್ಡಿ ಗೋವಿಂದರಾಜ ಅವರು ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಕತ್ವದ ೧೩ನೇ ಕೃತಿ ದಕ್ಷ ಆಡಳಿತಗಾರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. 
ಲೋಕಸಭಾ ಸದಸ್ಯರಾದ ಶಿವರಾಮೇಗೌಡ ಎಸ್, ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ  ಅಧ್ಯಕ್ಷರಾದ ಬಸವರಾಜ ದಿಂಡೂರ, ಗೌರವಾಧ್ಯಕ್ಷರಾದ ಬಾವಿಬೆಟ್ಟಪ್ಪ, ಲೋಕಸಭಾ ಮಾಜಿ ಸದಸ್ಯರಾದ ಮಂಜುನಾಥ ಕುನ್ನೂರ, ಕಲಘಟಗಿ ಮಾಜಿ ಶಾಸಕರಾದ ಪಿ.ಸಿ.ಸಿದ್ದನಗೌಡ್ರ, ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಉಪಾಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ, ಹರಿಹರ ಪಂಚಮಸಾಲಿ ಪೀಠದ ಧರ್ಮದರ್ಶಿಗಳಾದ ಬಿ.ಸಿ.ಉಮಾಪತಿ, ಲಾಯನ್ಸ ಕ್ಷಬ್ ಮಾಜಿ ಅಧ್ಯಕ್ಷರಾದ ಚಂಪಾಲಾಲಜಿ ಮೆಹತಾ, ಪುರಸಭಾ ಮಾಜಿ ಅಧ್ಯಕ್ಷರಾದ ಮುದಿಯಪ್ಪ ಕವಲೂರ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಗಾಣಿಗೇರ ಸಮಾಜದ ಜಿಲ್ಲಾಧ್ಯಕ್ಷರಾದ ವೀರಣ್ಣ ಗಾಣಗೇರ, ವೀರಶೈವ ಪಂಚಮಸಾಲಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಎಂ.ವಿ.ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೀರಣ್ಣ ನಿಂಗೋಜಿ, ವೀರಶೈವ ಪಂಚಮಸಾಲಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸೋಮನಗೌಡ ಎಂ. ಪಾಟೀಲ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ವೀರಶೈವ ಪಂಚಮಸಾಲಿ ಸಮಾಜದ ಕೊಪ್ಪಳ ತಾಲೂಕಾಧ್ಯಕ್ಷರಾದ ಗಿರೀಶ ಕಣವಿ, ಸಾಹಿತಿಗಳಾದ ಟಿ.ವಿ.ಮಾಗಳದ, ಎಚ್.ಎಸ್.ಪಾಟೀಲ, ಡಾ. ಕೆ.ಬಿ.ಬ್ಯಾಳಿ, ರವಿತೇಜ ಅಬ್ಬಗೇರಿ, ಡಾ.ಮಹಾಂತೇಶ ಮಲ್ಲನಗೌಡ, ಬಸವರಾಜ ಆಕಳವಾಡಿ, ಮುನಿಯಪ್ಪ ಹುಬ್ಬಳ್ಳಿ, ನಿವೃತ್ತ ಪ್ರಾಚಾರ್ಯರಾದ ಎಸ್.ಮಲ್ಲಿಕಾರ್ಜುನ, ಜಿ.ಎಂ. ನಿಂಗೋಜಿ, ವೈದ್ಯರಾದ ಡಾ|| ಎಂ.ಬಿ.ರಾಂಪೂರ, ನಿವೃತ್ತ ಶಿಕ್ಷಕ ಎಂ.ಎಸ್.ಸವದತ್ತಿ, ಯಲಬುರ್ಗಾ ತಾಲೂಕಾ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ನಿರ್ದೇಶಕರಾದ ಶ್ರೀಪಾದಪ್ಪ ಅಧಿಕಾರಿ, ವೀರಶೈವ ಪಂಚಮಸಾಲಿ ಸಮಾಜದ ಯುವ ಘಟಕದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಗವಿಸಿದ್ದಪ್ಪ ಕರ್ಕಿಹಳ್ಳಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಡಾ|| ವಿನೋದ ಜಿ. ಕುಲಕರ್ಣಿ ಅಭಿನಂದನಾ ಗ್ರಂಥಕ್ಕೆ ಲೇಖನ ಆಹ್ವಾನ.
ಕೊಪ್ಪಳ: ಹುಬ್ಬಳ್ಳಿಯಲ್ಲಿ ಮಾನಸ ಮನೋವೈದ್ಯಕೀಯ ಸಂಸ್ಥೆಯನ್ನು ಹುಟ್ಟುಹಾಕಿದ ಮನೋವೈದ್ಯರು, ಮಿದುಳು, ನರರೋಗತಜ್ಞರು ಹಾಗೂ ಮದ್ಯವ್ಯಸನ ಚಿಕಿತ್ಸಕರಾಗಿ ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿರುವ ಡಾ|| ವಿನೋದ ಜಿ. ಕುಲಕರ್ಣಿಯವರ ಅಭಿನಂದನಾ ಗ್ರಂಥವನ್ನು ಹೊರತರಲು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಡಾ|| ವಿನೋದ ಜಿ. ಕುಲಕರ್ಣಿಯವರು ವ್ಯಕ್ತಿತ್ವ ವಿಕಸನಕಾರರು, ದಾಸರ ಪದಗಳ ಉತ್ತಮ ಹಾಡುಗಾರರು, ವಾಗ್ಮಿಗಳು ಹಾಗೂ ಲೇಖಕರು. ಮಾನಸಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಕಳೆದ ೩೦ ವರ್ಷಗಳಿಂದ ಹೆಸರಾಂತ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಲೇಖನ ಬರೆದಿದ್ದಾರೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನೂತನ ನಿರ್ದೇಶಕರು ಕೂಡ ಆಗಿದ್ದಾರೆ. 
ಡಾ|| ವಿನೋದ ಜಿ. ಕುಲಕರ್ಣಿಯವರ ಅಭಿಮಾನಿಗಳು, ಅವರ ಒಡನಾಡಿಗಳು, ಗೆಳೆಯರು, ಸಾಹಿತಿಗಳು, ವೈದ್ಯರು ಅವರ ಕುರಿತು ಲೇಖನ, ಕವನಗಳನ್ನು ಮತ್ತು ಅವರು ಭಾಗವಹಿಸಿದ ಕಾರ್ಯಕ್ರಮಗಳ ಅಪರೂಪದ ಭಾವ ಚಿತ್ರಗಳನ್ನು, ಅವರು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನು ಮೇ ೧೫ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. 
ಲೇಖನ ಕಳುಹಿಸುವ ವಿಳಾಸ: ಹನುಮಂತಪ್ಪ ಅಂಡಗಿ ಚಿಲವಾಡಗಿ ಅಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ:೩೦ ಕೊಪ್ಪಳ-೫೮೩೨೩೧ ಸನಿಹವಾಣಿ: ೯೦೦೮೯೪೪೨೯೦
Please follow and like us:
error

Related posts

Leave a Comment