fbpx

ರಾಷ್ಟ್ರ ಪದಕ ವಿಜೇತ ಶಿಕ್ಷಕ ಜಯರಾಜ ಬೂಸದ್‌ರವರಿಗೆ ಜಿಲ್ಲಾಢಳಿತದಿಂದ ಸನ್ಮಾನ

ಕೊಪ್ಪಳ, ಜ.೨೬ : ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ಜಯರಾಜ ಬೂಸದ್‌ರವರು ಕಳೆದ ೨೫ ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಸ್ಕೌಟಿಂಗ್ ಗೈಡನಲ್ಲಿ ಮಕ್ಕಳ ಶ್ರೇಯೋಭೀವೃದ್ಧಿ ಪ್ರಗತಿಗೆ, ಜಿಲ್ಲಾ ಸಂಸ್ಥೆಯ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದ ಪರವಾಗಿ ನೂರಾರು ರಾಜ್ಯ ಪೂರಸ್ಕಾರಗಳು, ರಾಜ್ಯಪಾಲರ ಪ್ರಶಸ್ತಿ ರಾಷ್ಟ್ರಪತಿ ಪೂರಸ್ಕಾರ ಮಕ್ಕಳು ಪಡೆಯಲು ಕಾರಣೀಭೂತರಾದ ಇವರು ತಾಲೂಕ, ಜಿಲ್ಲಾ ಸಂಘ, ಜಿಲ್ಲಾ ತರಬೇತಿ ಕೇಂದ್ರದ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದಾರೆ. 
ಜಯರಾಜ ಬೂಸದ್ ರವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸ್ಕೌಟ್‌ಗೈಡಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿರುವ ಕಾರಣ ಜಿಲ್ಲಾಢಳಿತದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಡಾ. ಆರ್.ಆರ್. ಜನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಪಿ.ರಾಜಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾ ಉದುಪುಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ  ನಡೆದ ಗಣಾರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
Please follow and like us:
error

Leave a Reply

error: Content is protected !!