fbpx

ಶಿರಡಿ ಭಿಕ್ಷಾ ಕೇಂದ್ರದಿಂದ ಸಚಿವ ತಂಗಡಗಿ ಶಾಸಕ ಹಿಟ್ನಾಳರಿಗೆ ಸನ್ಮಾನ.

ಕೊಪ್ಪಳ, ಆ. ೭. ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವತಿಯಿಂದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳರಿಗೆ ಸನ್ಮಾನಿಸಲಾಯಿತು. ಕೊಪ್ಪಳ ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಆಗುತ್ತಿರುವ ಆರೋಗ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಗೆ ಹೆಗಲುಕೊಟ್ಟು ದುಡಿಯುತ್ತಿರುವ ಅವರು ಶಿರಡಿ ಸಾಯಿ ಭಿಕ್ಷಾ ಕೇಂದ್ರದಿಂದ ಸುಕ್ಷೇತ್ರ ಕನಕಗಿರಿಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ, ದತ್ತ ಪಾದುಕಾ ಪೂಜೆ ಹಾಗೂ ಲಕ್ಷ್ಮೀನರಸಿಂಹ ಯಾಗದ ಯಶಸ್ವಿಗೆ ಸಹಕರಿಸಿದ ಅವರನ್ನು ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮನ ಸನ್ನಿಧಿಯಲ್ಲಿ ಈಚೆಗೆ ಕೇಂದ್ರದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿಒ ಜಿ. ಪಂ. ಅಧ್ಯಕ್ಷ ಟಿ. ಜನಾರ್ಧನ, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ಕಾಂಗ್ರೇಸ್ ಮುಖಂಡ ನಾಗರಾಜ ತಂಗಡಗಿ, ಯುವ ಮುಖಂಡರಾದ ಬಸವರಾಜ ದೇಸಾಯಿ, ರಾಮಣ್ಣ ಕಲ್ಲನವರ ಅನೇಕರಿದ್ದರು.

Please follow and like us:
error

Leave a Reply

error: Content is protected !!