ಕಾರ್ಯನಿರತ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ – ವೆಂಕಟ್ ಸಿಂಗ್.

ಕೊಪ್ಪಳ- 06- ಸೆ.೧೦ ರಂದು ಬೆಂಗಳೂರಿನಲ್ಲಿ ಪತ್ರಕರ್ತರಿಂದ ಬೃಹತ್ ಪ್ರತಿಭಟನೆ, ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಆಯುಕ್ತರನ್ನು ನೇಮಿಸಲು ಒತ್ತಾಯಿಸಿ ರಾಜ್ಯದ ಸಣ್ಣ ಪತ್ರಿಕೆಗಳ ವಿರೋಧಿ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ ತೋಲಗಲಿ ಕನ್ನಡ ಭಾಷೆ, ಸಣ್ಣ ಪತ್ರಿಕೆಗಳು ಉಳಿಯಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಸೆ.೧೦ ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಭಗವಾನ್ ಮಹಾವೀರ ರಸ್ತೆ ನಂ.೧೭ ಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಛೇರಿ ಮುಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ವೆಂಕಟ್‌ಸಿಂಗ್ ಹೇಳಿದರು.
     ಅವರು  ಕೊಪ್ಪಳದ ಪತ್ರಿಕಾ ಭವನದಲ್ಲಿ ರವಿವಾರ ಏರ್ಪಡಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಬಳಿಕ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ  ರಾಜ್ಯದ ಸಣ್ಣ ಪತ್ರಿಕೆಗಳನ್ನು ಧಮನ ಮಾಡಲು ಹೊರಟಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಹಾಗೂ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಸುಮಾರು ೩೫೦ ಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳನ್ನು ಧಮನ ಮಾಡಲು ತಂದಿರುವ ಮರಣ ಶಾಸನ ಜಾಹೀರಾತು ನೀತಿಗೆ ತಂದಿರುವ ತಿದ್ದುಪಡಿ ವಿರೋಧಿಸಿ ಈ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
     ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿನ ಸಣ್ಣ ಪತ್ರಿಕೆಗಳಿಗೆ ತನ್ನದೇಯಾದ ಜವಾಬ್ದಾರಿಗಳಿವೆ. ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಧ್ವನಿ ಇಲ್ಲದ ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿ ಸದಾ ಸರಕಾರ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕಾಳಜಿಯೊಂದಿಗೆ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಅಧಿಕೃತವಾಗಿ ಜಾರಿಯಾಗಿದ್ದ ಜಾಹೀರಾತು ನೀತಿಯಿಂದ ರಾಜ್ಯ ಮಟ್ಟದ ಪತ್ರಿಕೆಗಳಿಗೆ, ಪ್ರಾದೇಶಿಕ ಪತ್ರಿಕೆಗಳಿಗೆ, ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ, ಟ್ಯಾಬ್ಲೆಟ್ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮ ಮತ್ತು ಇ-ಪತ್ರಿಕೆಗಳಿಗೆ ಸಹ ನ್ಯಾಯ ಒದಗಿಸಿದಂತಾಗಿತ್ತು. ಆದರೆ ಇಂತಹ ಐತಿಹಾಸಿಕ ಜಾಹೀರಾತು ನೀತಿಗೆ ತಿದ್ದುಪಡಿ ತರುವುದರ ಮೂಲಕ ಸಂಪೂರ್ಣವಾಗಿ ಜಾಹೀರಾತು ನೀತಿಯ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಲಾಗಿದೆ. ಇದನ್ನು ವಿರೋಧಿಸಿ ಹಾಗೂ ಎಂಸಿಎ ಸೇರಿದಂತೆ ಯಾವುದೇ ಜಾಹೀರಾತು ಏಜೆನ್ಸಿಗಳು ನೇರವಾಗಿ ಸರಕಾರದ ಟೆಂಡರ್ ಪಡೆಯದನ್ನು ತಕ್ಷಣ ನಿಲ್ಲಿಸಬೇಕು, ಜಾಹೀರಾತು ಬಿಲ್ ಪಾವತಿಸದಿರುವ ಚೆಕ್ ಬೌನ್ಸ್ ಮಾಡಿದ ಖಾಸಗಿ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಸರಕಾರದ ಆಕರ್ಷಕ ಜಾಹೀರಾತು ಸಣ್ಣ ಪತ್ರಿಕೆಗಳಿಗೂ ಬಿಡುಗಡೆ ಮಾಡಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಭಾಗ್ಯ ಯೋಜನೆ ಶೀಘ್ರ ಜಾರಿಯಾಗಬೇಕು, ವಾರ್ತಾ ಇಲಾಖೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ತುಂಬಬೇಕು ಎನ್ನುವ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಂಗಳೂರಿನ ವಾರ್ತಾ ಇಲಾಖೆ ಕಛೇರಿ ಮುಂದೆ ಸೆ.೧೦ ರಂದು ಬೃಹತ್ ಪ್ರತಿಭಟನೆ
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೊಪ್ಪಳಜಿಲ್ಲೆಯಿಂದ ಎಲ್ಲಾ ಕಾರ್ಯನಿರತ ಪತ್ರಕರ್ತರ ಎಲ್ಲಾ ಪತ್ರಿಕೆಗಳ ಪತ್ರಕರ್ತರು, ಪದಾಧಿಕಾರಿಗಳು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯದರ್ಶಿ ಬಿ.ವೆಂಕಟ್‌ಸಿಂಗ್ ಮನವಿಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ ಅಲಿ, ರಾಜ್ಯ ಕಾರ್ಯಕಾರಿಣಿ ಹರೀಶ್ ಹೆಚ್.ಎಸ್. ಜಿಲ್ಲಾ ಪ್ರಧಾನಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ಉಪಸ್ಥಿತರಿದ್ದರು.
 ಇದಕ್ಕೂ ಮುನ್ನ ನಡೆದಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ನಾಗರಾಜ್ ಇಂಗಳಗಿ, ಬಸವರಾಜ್ ಗುಡ್ಲಾನೂರ್, ಜಿಲ್ಲಾ ಕಾರ್ಯದರ್ಶಿಗಳಾದ ವೈ.ಬಿ.ಜೂಡಿ, ರವಿಕುಮಾರ್ ನಾಯಕ, ಬಸವರಾಜ್ ಪಲ್ಲೇದ್, ಗಂಗಾವತಿ ತಾಲುಕಾ ಅಧ್ಯಕ್ಷ ಪ್ರಸನ್ನ ದೇಸಾಯಿ, ತಾಲುಕಾ ಪ್ರಧಾನಕಾರ್ಯದರ್ಶಿ ಜೆ.ರಂಗನಾಥ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕಳಕಪ್ಪ ಚಿಕ್ಕಗಡ,  ರಾಜಾಸಾಬ್ ತಾಳಕೇರಿ, ಪವನ್ ದೇಶಪಾಂಡೆ, ಫಕೀರಪ್ಪ ಗೋಟೂರ್, ಬದರಿನಾಥ್ ಪುರೋಹಿತ್, ರವಿ ಬಡಿಗೇರ್, ಗುರುರಾಜ್ ಡಂಬಳ, ಪ್ರಕಾಶ ಪಾಟೀಲ್, ರುದ್ರಗೌಡ ಪಾಟೀಲ್ ಸೇರಿದಂತೆ  ವೃಷಭೇಂದ್ರ ಸ್ವಾಮಿ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ವಿವರಿಸಿದರು.

Please follow and like us:
error