ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ : ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಕೊಪ್ಪಳ ಜೂ. : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಂಗವಾಗಿ ಜೂ. ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆಗಳು ಹಾಗೂ ನಗರದ ಸಾಹಿತ್ಯ ಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತ ಸರ್ಕಾರಿ ನೌಕರರು ಭಾಗವಹಿಸಬಹುದಾಗಿದೆ.
ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ಕ್ರೀಡಾಪಟುಗಳು, ಸಂಗೀತ, ನೃತ್ಯ ಕಲಾವಿದರು ಆಸಕ್ತಿಯಿ೯ಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಲು ಇದು ಸುವರ್ಣಾವಕಾಶವಾಗಿದೆ. ಜೂ. ೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಸಂಸದ ಶಿವರಾಮಗೌಡ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಸೇರಿದಂತೆ ಶಾಸಕರುಗಳು, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಭಾಗವಹಿಸುವರು.
ಕ್ರೀಡಾ ಸ್ಪರ್ಧೆಗಳಲ್ಲಿ ೪೫ ವರ್ಷದೊಳಗಿನ ಪುರುಷರಿಗೆ ಅಥ್ಲೆಟಿಕ್ಸ್- ೧೦೦ ಮೀ, ೪೦೦ ಮೀ., ೧೫೦೦೦ ಮೀ. ಓಟದ ಸ್ಪರ್ಧೆ, ಲಾಂಗ್ ಜಂಪ್, ಹೈ ಜಂಪ್, ತಟ್ಟೆ ಎಸೆತ, ಜಾವೆಲಿನ್ ಎಸೆತ, ೪*೧೦೦ ಮೀ. ರಿಲೇ, ಕುಸ್ತಿ, ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಗುಂಡು ಎಸೆತ, ಉತ್ತಮ ದೇಹಧಾರ್ಢ್ಯ ಸ್ಪರ್ಧೆ, ಗುಂಪು ಆಟಗಳ ಪೈಕಿ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಚೆಸ್ ಮತ್ತು ಕೇರಂ ಆಯೋಜಿಸಲಾಗಿದೆ. ೪೫ ವರ್ಷ ಮೇಲ್ಪಟ್ಟ ಪುರುಷರಿಗೆ ಅಥ್ಲೆಟಿಕ್ಸ್- ೧೦೦ ಮೀ., ೨೦೦ ಮೀ., ೪೦೦ ಮೀ., ೮೦೦ ಮೀ. ಓಟ, ತಟ್ಟೆ ಎಸೆತ, ಗುಂಡು ಎಸೆತ ಸ್ಪರ್ಧೆಗಳಿವೆ. ಗುಂಪು ಆಟಗಳಡಿ ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನಿಸ್ ಸ್ಪರ್ಧೆ ಇದೆ. ೪೫ ವರ್ಷದೊಳಗಿನ ಮಹಿಳೆಯರಿಗೆ ಅಥ್ಲೆಟಿಕ್ಸ್- ೧೦೦ ಮೀ., ೨೦೦ ಮೀ., ೮೦೦ ಮೀ., ಓಟ, ಲಾಂಗ್‌ಜಂಪ್, ಹೈಜಂಪ್, ಶಾಟ್‌ಪುಟ್, ತಟ್ಟೆ ಎಸೆತ, ಜಾವಲಿನ್ ಎಸೆತ ೪*೧೦೦ ಮೀ. ರಿಲೇ, ೪*೪೦೦ ಮೀ., ರಿಲೇ, ಗುಂಪು ಆಟಗಳಡಿ ಟೇಬಲ್ ಟೆನಿಸ್ (ಸಿಂಗಲ್ ಮತ್ತು ಡಬಲ್ಸ್), ಶಟಲ್ ಬ್ಯಾಡ್ಮಿಂಟನ್, ಕೇರಂ, ಟೆನ್ನಿಕಾಯಿಟ್, ಬಾಲ್ ಬ್ಯಾಡ್ಮಿಂಟನ್. ೪೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಥ್ಲೆಟಿಕ್ಸ್- ೧೦೦ ಮೀ., ೪೦೦ ಮೀ., ೮೦೦ ಮೀ. ಓಟ, ತಟ್ಟೆ ಎಸೆತ, ಶಾಟ್‌ಪುಟ್, ಗುಂಪು ಆಟಗಳಡಿ ಟೇಬಲ್ ಟೆನಿಸ್, ಶಟಲ್ ಬ್ಯಾಡ್ಮಿಂಟನ್, ಕೇರಂ, ಟೆನ್ನಿಕ್ವಾಯಿಟ್ರ ಆಯೋಜಿಸಲಾಗಿದೆ.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ ಶಾಸ್ತೀಯ, ಜಾನಪದ, ಕಥಕ, ಭರತನಾಟ್ಯ, ಮಣಿಪುರಿ, ವಾದ್ಯ ಸಂಗೀತ, ಸ್ಟ್ರಿಂಗ್ ವಾದ್ಯಗಳು, ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ವಿಂಡ್ ವಾದ್ಯಗಳು, ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ, ಹಿಂದುಸ್ತಾನಿ, ಜಾನಪದ ಗೀತೆ, ಕರಕುಶಲ ವಸ್ತುಪ್ರದರ್ಶನ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಕೇವಲ ೦೩ ವಯಕ್ತಿಕ ಹಾಗೂ ೦೧ ಗುಂಪು ಆಟಗಳಲ್ಲಿ ಮಾತ್ರ ಭಾಗವಹಿಸಬಹುದು. ಸ್ಪರ್ಧಾಳುಗಳು ತಮ್ಮ ಇಲಾಖೆಯಿಂದ ಜನ್ಮದಿನಾಂಕದೊಂದಿಗೆ ತಮ್ಮ ಗುರುತಿನ ಪತ್ರ ತರಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವಿರುತ್ತದೆ.
ಕ್ರೀಡಾಸಕ್ತರು ಹೆಚ್ಚಿನ ಮಾಹಿತಿಗಾಗಿ ೯೯೮೦೮೫೨೭೩೫, ೯೮೮೦೬೭೦೯೨೫, ೮೯೫೧೭೬೨೯೩೩ ಅಥವಾ ೯೩೪೨೩೮೭೯೩೫ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Please follow and like us:
error