ಕಗ್ಗತ್ತಲಲ್ಲಿ ಕರ್ನಾಟಕ – ಅಸಮರ್ಥ ಬಿಜೆಪಿ ಸರಕಾರ

ಕೊಪ್ಪಳ: ದಿನಾಂಕ ೨೨-೧೦-೨೦೧೧ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಅಶೋಕ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಬಟನಾ ರ್‍ಯಾಲಿಯಲ್ಲಿ ಬಿಜೆಪಿ ಸರಕಾರದ ಆಡಳಿತ ಯಂತ್ರ ಕುಸಿದಿದ್ದು, ರಾಜ್ಯದಲ್ಲಿ ಸರಕಾರವು ಸಂಪೂರ್ಣ ಕುಸಿದಿದ್ದು ಬಿಜೆಪಿ ಆಡಳಿತದಲ್ಲಿ ವೈಪಲ್ಯ ಕಂಡಿರುತ್ತದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ, ಸಚಿವರು ಕಾರಾಗೃಹ ಸೇರಿರುತ್ತಾರೆ. ಗೃಹ ಸಚಿವರ ವಿರುದ್ದವು ಎಪ್.ಐ.ಆರ್ ದೂರು ದಾಕಲಾಗಿದ್ದು. ಕೈಗಾರಿಕ ಸಚಿವರಿಗೂ ಡಿ.ನೋಟಿಪಿಕೇಶನ್ ಬೂತವು ಕಾಡುತ್ತಿದೆ. ಶೀಘದಲ್ಲೆ ಇವರು ಸಹ ಜೈಲು ಸೇರುತ್ತಾರೆ. ಆದ ಕಾರಣ ರಾಜ್ಯ ಪಾಲರು ಈ ಸರಕಾರವನ್ನು ವಜಾ ಗೋಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೋಳಿಸಬೇಕೆಂದು ಪ್ರತಿಬಟನೆ ಮಾಡಿ ಮಾನ್ಯ ತಹಶಿಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಬದಲ್ಲಿ ಜಿಲ್ಲಾಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದರಿ, ಡಾ.ಸೀತಾ ಗೂಳಪ್ಪ ಹಲಗೇರಿ, ಹೆಚ್.ಎಲ್.ಹೀರೆಗೌಡ್ರ, ರಾಘವೇಂದ್ರ ಹಿಟ್ನಾಳ, ಈರಪ್ಪ ಕುಡಗುಂಟಿ, ಅಮರೇಶ ಉಪಲಾಪೂರ, ಎಸ್.ಎ.ಪಟೇಲ, ಕಾಟನ ಪಾಷಾ, ಶಂಕುಂತಲಾ ಹುಡೇಜಲಿ, ಇಂದಿರಾ ಬಾವಿಕಟ್ಟಿ, ಸುಮಾ ಕಟ್ಟಿಮನಿ, ಸಿದ್ದು ಮ್ಯಾಗೇರಿ, ಬಸವರಡ್ಡಿ ಹಳ್ಳಿಕೇರಿ, ಗವಿಸಿದ್ದಪ್ಪ ಮುದಗಲ್, ಕೃಷ್ಣ ಇಟ್ಟಂಗಿ, ದ್ಯಾಮಣ್ಣ ಚಿಲವಾಡಗಿ, ಅಜ್ಜಪ್ಪಸ್ವಾಮಿ, ನಾಗರಾಜ ಬಳ್ಳಾರಿ, ಅಶೋಕ ಕಾಂಬ್ಳಿ, ಶಿವಾನಂದ ಹುದ್ಲೂರ, ಮುನೀರ ಸಿದ್ದಿಕಿ, ಗೋಲಿ ಮಹಮ್ಮದ, ನೂರಜಾನ ಬೇಗಂ, ಚನ್ನಮ್ಮ ಇನ್ನು ಅನೇಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆಂದು ಪಕ್ಷದ ವಕ್ತಾರ ಅಕ್ಬರಪಾಷ ಪಲ್ಟನ ತಿಳಿಸಿದರು.  
ಬಿಜೆಪಿ ಸರಕಾರವನ್ನು ವಜಾಗೋಳಿಸಲು ರಾಜ್ಯಪಾಲರಿಗೆ ಅಪ್ಪರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುತ್ತಿರುವುದು. 
ಬಿಜೆಪಿ ಸರಕಾರವನ್ನು ವಜಾಗೋಳಿಸಲು ರಾಜ್ಯಪಾಲರಿಗೆ ಅಪ್ಪರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುತ್ತಿರುವ ಕುಷ್ಟಗಿ ಶಾಸಕರಾದ ಅಮರೇಗೌಡ ಬೈಯಾಪೂರ. ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಹೆಚ್.ಎಲ್. ಹಿರೇಗೌಡರ, ಕೃಷ್ಣಾ ಇಟ್ಟಂಗಿ, 
Please follow and like us:
error

Related posts

Leave a Comment