ಯಜ್ಞವಲ್ಕ ಗುರುಕುಲ ವೇದಪಾಠ ಶಾಲೆಯಲ್ಲಿ ಪ್ರವೇಶ

  ತಾಲೂಕಿನ ಆನೆಗುಂದಿಯ ಯಜ್ಞವಲ್ಕ ಗುರುಕುಲ ವೇದಪಾಠ ಶಾಲೆಯಲ್ಲಿ ಪ್ರವೇಶ ಪ್ರಾರಂಭಿಸಿದ್ದು  ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
ಈ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಪೌರಾಹಿತ್ಯ, ಸಂಸ್ಕೃತ ಅಧ್ಯಯನ, ಜೋತಿಷ್ಯಶಾಸ್ತ್ರ ಅಧ್ಯಯನ ವಿಷಯಗಳಿದ್ದು, ಆರು ವರ್ಷಗಳ ಅಧ್ಯಯನವಿದ್ದು, ೯ ರಿಂದ ೧೮ನೇ ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ.
ವಿದ್ಯಾರ್ಥಿಗಳಿಗೆ ಉಚಿತ ವಸತಿ ಊಟ ಮತ್ತು ವಿದ್ಯಾಭ್ಯಾಸ ಒದಗಿಸಲಾಗುತ್ತಿದ್ದು, ಆಸಕ್ತರು ಮೇ. ೧೦ ರಿಂದ ಜೂನ್ ೧೦ರೊಳಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ರೇಶಆಚಾರ್ಯ ಅಗ್ನಿಹೊತ್ರಿ ದೂ.ಸಂ. ೦೮೩೯೪-೩೨೧೫೭೦, ಮೊ : ೯೪೪೮೪೨೭೬೬೪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error