fbpx

ಮೂರು ಗ್ರಂಥಗಳ ಲೋಕಾರ್ಪಣೆ.

ಕೊಪ್ಪಳ- ಡಿ.೧೩. ರವಿವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ  ಸ್ನೇಹಸ್ಪರ್ಶ ಪ್ರಕಾಶನ ಹಾಗೂ ವಿರಂಚಿ ಕಲಾ ಬಳಗದ ವತಿಯಿಂದ ಮೂರು ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಸ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವ
     ನಿವೃತ್ತ ಉಪನ್ಯಾಕರಾದ ಲಿಂಗಣ್ಣ ಮೇಟಿ,ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು,ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಬಿ.ರಡ್ಡೇರ,ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ರು. ಕವಯಿತ್ರಿ ವಿಜಯಲಕ್ಷ್ಮಿ ಕೊಟಗಿಯವರ ಕೆಂಡದ ಉಡಿಯಕ್ಕಿ ಕವನ ಸಂಕಲನವನ್ನು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಬಿಡುಗಡೆಗೊಳಿಸುವರು.ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮುತ್ತಿನ ಕುಂಚಿಗೆ ಶಿಶು ಗೀತೆಗಳ ಸಂಕಲನವನ್ನು ಬಿಡುಗಡೆಗೊಳಿಸುವರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೨೫ನೇ ಗ್ರಂಥ ಸದಭಿರುಚಿಯ ಸರದಾರ(ಲಿಂಗಣ್ಣ ಮೇಟಿಯವರ ಅಭಿನಂದನ ಗ್ರಂಥ)ಗ್ರಂಥವನ್ನು ಭಾಗ್ಯನಗರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ರಾಜಶೇಖರ ಪಾಟೀಲ ಬಿಡುಗಡೆಗೊಳಿಸುವರು.

Please follow and like us:
error

Leave a Reply

error: Content is protected !!