ಭಾಗ್ಯನಗರ ಜಾಮಿಯಾ ಮಜೀದ್ ಪಂಚ ಕಮೀಟಿಯಿಂದ ಸನ್ಮಾನ

ಭಾಗ್ಯನಗರದ ಜಾಮಿಯಾ ಮಜೀದ್ ಪಂಚ ಕಮೀಟಿ ವತಿಯಿಂದ ದಿ.೨೩-೧೨-೨೦೧೨ ರವಿವಾರ ಬೆಳಿಗ್ಗೆ ೧೦-೩೦ಕ್ಕೆ ಜಾಮಿಯಾ ಮಜೀದ್ ಆವರಣದಲ್ಲಿ ರಾಘವೇಂದ್ರ ಹಿಟ್ನಾಳ ಅಧ್ಯಕ್ಷರು ಜಿ.ಪಂ.ಕೊಪ್ಪಳ, ಶ್ರೀನಿವಾಸ ಗುಪ್ತಾ ವಾಣಿಜ್ಯೋಧ್ಯಮಿಗಳು ಭಾಗ್ಯನಗರ, ಕೆ.ಎಂ.ಸಯ್ಯದ್ ಅಧ್ಯಕ್ಷರು ಸಯ್ಯದ್ ಪೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕೊಪ್ಪಳ, ಹೊನ್ನೂರಸಾಬ ಬೈರಾಪೂರ ಅಧ್ಯಕ್ಷರು ಗ್ರಾಮ ಪಂಚಾಯತ್ ಭಾಗ್ಯನಗರ, ಶ್ರೀಮತಿ ಹುಲಿಗೆಮ್ಮ ಎಚ್.ನಾಯಕ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಭಾಗ್ಯನಗರ ಇವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕಾರ್‍ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ವನಿತಾ ಗಡಾದ ಜಿ.ಪಂ.ಸದಸ್ಯರು, ಶ್ರೀನಿವಾಸ ಹ್ಯಾಟಿ ತಾಲೂಕ ಪಂಚಾಯತ್ ಸದಸ್ಯರು ಭಾಗ್ಯನಗರ,ದಾನಪ್ಪ ಕವಲೂರು ತಾಲೂಕ ಪಂಚಾಯತ್ ಸದಸ್ಯರು ಭಾಗ್ಯನಗರ ಹಾಗೂ ಅತಿಥಿಗಳಾಗಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಆಗಮಿಸಲಿದ್ದಾರೆ.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಇಬ್ರಾಹಿಂಸಾಬ ಬಿಸರಳ್ಳಿ ಅಧ್ಯಕ್ಷರು ಜಾಮೀಯಾ ಮಜೀದ್ ಪಂಚ್ ಕಮೀಟಿ  ಭಾಗ್ಯನಗರ ವಹಿಸಿಕೊಳ್ಳಲಿದ್ದಾರೆ.
ಕಾರ್‍ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮೌಲಾಹುಸೇನ್ ಹಣಗಿ,ಕಬೀರಸಾಬ ಬೈರಾಪೂರ, ಮಂಜೂರಸಾಬ ಟಾಂಗಾ,ಎಫ್.ಎ.ನೂರಬಾಷಾ ಸೇರಿದಂತೆ ಜಾಮಿಯಾ ಮಜೀದ್ ಪಂಚ್ ಕಮಿಟಿ, ನೌಜವಾನ್ ಕಮಿಟಿ ಪದಾಧಿಕಾರಿಗಳು ಹಾಗೂ ಭಾಗ್ಯನಗರದ ಸರ್ವ ಮುಸ್ಲಿಂ ಬಾಂಧವರು ಕೋರಿದ್ದಾರೆ. 

Leave a Reply