fbpx

ಕೊಪ್ಪಳ ಶರಣ ಹುಣ್ಣಿಮೆ- ಯೋಗದಿಂದ ಯೋಗ್ಯತೆ ಹೆಚ್ಚುತ್ತದೆ – ಬಸವಾನಂದ ಶ್ರೀಗಳು

ಇಂದಿನ ಆಧುನಿಕ ಯುಗದ ಒತ್ತಡವ, ಖಿನ್ನತೆಗಳನ್ನು ದೂರ ಮಾಡಬೇಕಾದರೆ ಯೋಗ ಮಾಡಬೇಕು. ಯೋಗದಿಂದ ಮನುಷ್ಯನ ವ್ಯಕ್ತಿಯ ಯೋಗ್ಯತೆ ಹೆಚ್ಚುತ್ತದೆ ಎಂದು ಧಾರವಾಡದ ಮನಗುಂಡಿಯ ಗುರುಬಸವ ಮಹಾಮನೆಯ ಪೂಜ್ಯ ಶ್ರೀ ಬಸವಾನಂದ ಶ್ರೀಗಳು ಹೇಳಿದರು. 
ನಗರದ ಮಹೇಶ್ವರ ದೇವಸ್ಥಾನದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟನ ಮಾಸಿಕ ಕಾರ್ಯಕ್ರಮ ಶರಣ ಹುಣ್ಣಿಮೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಬಸವಾನಂದ ಶ್ರೀಗಳು, ತಮ್ಮ ಆಶಿರ್ವಚನದಲ್ಲಿ ಹೇಳಿದರು. ಮುಂದುವರೆದು ಮಾತನಾಡಿದ ಶ್ರೀಗಳು ವಚನಗಳಲ್ಲಿ ಆರೋಗ್ಯ ಪರಿಕಲ್ಪನೆ ತಿಳಿಸುತ್ತಾ ಶರಣರು ಮೊದಲು ತಾವು ಸದೃಡವಾದ ಆರೋಗ್ಯ ಉತ್ತಮ ಸಾಧನೆಮಾಡಿ ನಂತರ ಇತರರಿಗೆ ಹೇಳಿ ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದರು. ಜೀವ-ಜೀವನವು ದೇವರು ನಮಗೆ ಕೊಟ್ಟ ಅಮೂಲ್ಯ ವರ ಅದನ್ನು ಹಾಳಾಗದಂತೆ ಎಚ್ಚರವಹಿಸಬೇಕೆ ಹೊರತು ಆರೋಗ್ಯ ಹಾಳು ಮಾಡಿಕೊಂಡು ನಂತರ ಪರಿತಪಿಸಬಾರದು. ಉಪವಾಸದಿಂದ ಮನುಷ್ಯನ ದೇಹ & ಮನಸ್ಸುನ್ನು ನಿಯಂತ್ರಿಸಲು ಸಾಧ್ಯ. ಆದರೆ ಉಪವಾಸ ಕ್ರಮಬದ್ದವಾಗಿರಬೇಕು ಎಂದು ಹೇಳಿದರು. ಸಂಪತ್ತು ಕಳಕೊಂಡರೆ – ಹಾಳಾದರೆ ಪುನಃ ಗಳಿಸಬಹುದು ಆರೋಗ್ಯ ಹಾಳಾದರೆ ಸರಿಪಡಿಸಬಹುದು ಕಷ್ಟ ಅದಕ್ಕೆ ಆರೋಗ್ಯವಂತರಾಗಬೇಕೆಂದು ಹೇಳಿದರು. 
ಕಾರ್ಯಕ್ರಮದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟನ, ಶ್ರೀ ಪಂಪಾಪತಿ ಹೊನ್ನಳ್ಳಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಪ್ಪ ಶೆಟ್ಟರ, ಲಿಂಗಾಯತ ಸಮಾಜದ ಗಣ್ಯರಾದ ನಾಗರಾಜ ಬಳ್ಳಾರಿ ಉಪಸ್ಥಿತರಿದ್ದರು. 
ಶರಣ ಹನುಮೇಶ ಕಲ್ಮಂಗಿ ಕಾರ್ಯಕ್ರಮ ನಿರೂಪಿಸಿದರು. ಗವಿಸಿದ್ದಪ್ಪ ಪಲ್ಲೆದ ಸ್ವಾಗತಿಸಿದರು, (ರಾಜೇಶ ಸಸಿಮಠ) ಪ್ರಾಸ್ತಾವಿಕವಾಗಿ ಮಾತನಾಡದಿರು. (ಸುನೀಲ ಹಾದಿಮನಿ ಶರಣು ಸಮರ್ಪಿಸಿದರು. ಕು. ಚೈತ್ರಾ ವೀರಾಪೂರ ಕು. ವರ್ಷಣಿ ಸಾಕ್ಲಾಪೂರ ವಚನ ಪ್ರಾರ್ಥನೆ ಗೈದರು. 
Please follow and like us:
error

Leave a Reply

error: Content is protected !!