ರಾಜ್ಯ ದಸರಾ ಕರಾಟೆ ಕ್ರೀಡಾಕೂಟಕ್ಕೆ ಚಾಲನೆ.

ಕೊಪ್ಪಳ, ಸೆ.೨೨. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟಕ್ಕೆ

ಅಯ್ಕೆಗೊಂಡ ಕರಾಟೆ ಪಟುಗಳನ್ನು ರಾಜ್ಯ ಮಟ್ಟ ದಸರಾ ಕರಾಟೆ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಯಿತು. ಕರಾಟೆ ಪಂದ್ಯಾವಳಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವ್ಯೆ.ಸುದರ್ಶನ ರಾವ್ ರವರು ಕರಾಟೆ ಪಟುಗಳ ಗ್ಲೌಜ್‌ಗಳನ್ನು ಪರಸ್ಪರ ಮುಟ್ಟಿಸುವ ಮುಖಾಂತರ ಕರಾಟೆ ಸ್ಪರ್ಧೆಗೆ ಚಾಲನೆ ನೀಡಿದರು, ನಾಲ್ಕು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕರಾಟೆ ಸ್ಪರ್ಧಾಳುಗಳನ್ನು ನಗರದ ಅಂತರ್‌ರಾಷ್ಟ್ರೀಯ ಕರಾಟೆ ಕ್ರಿಡಾಪಟು ಶ್ರೀನಿವಾಸ ಪಂಡಿತ ರೆಫ್ರೀ ಆಗಿ ಕಾರ್ಯನಿರ್ವಹಿಸಿ ರಾಜ್ಯ ಮಟ್ಟದ ದಸರಾ ಕರಾಟೆ ಕ್ರೀಡಾಕೂಟಕ್ಕೆ ಆಯ್ಕೆ ಮಾಡಿದರು

Leave a Reply