ಫೆ. ೨೩ ರಂದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು

 ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಫೆ. ೨೩ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಮತದಾನ : ಫೆ. ೨೦ ರಂದು ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪುರುಷ-೩೯೪೬೨೨, ಮಹಿಳೆ- ೩೮೯೫೧೮, ಒಟ್ಟು- ೭೮೪೧೪೦ ಮತದಾರರ ಪೈಕಿ, ಪುರುಷ- ೨೮೨೨೧೦, ಮಹಿಳೆ- ೨೭೨೪೩೩, ಒಟ್ಟು- ೫೫೪೬೪೩ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ. ೭೦. ೭೩ ರಷ್ಟು ಮತದಾನವಾಗಿದೆ.  ಕಳೆದ ೨೦೧೦ ರಲ್ಲಿ ಜರುಗಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಶೇ. ೬೬. ೨೮ ರಷ್ಟು ಮತದಾನವಾಗಿತ್ತು.  ಈ ಬಾರಿ ಶೇ. ೭೦. ೭೩ ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ. ೪. ೪೫ ರಷ್ಟು ಮತದಾನ ಹೆಚ್ಚಳವಾಗಿದೆ.  ಕರ್ನಾಟಕ ರಾಜ್ಯ ಪಂಚಾಯತಿ ರಾಜ್ ಕಾಯ್ದೆಗೆ ಮತದಾನ ಕಡ್ಡಾಯದ ತಿದ್ದುಪಡಿ ಹಾಗೂ ಮತದಾನದ ಮಹತ್ವದ ಬಗ್ಗೆ ಮತದಾರ ಜಾಗೃತರಾಗಿರುವ ಸಾಧ್ಯತೆ ಕಾರಣವಾಗಿರಬಹುದಾಗಿದೆ.
  ಕೊಪ್ಪಳ ತಾಲೂಕಿನಲ್ಲಿ ಪುರುಷ- ೧೦೪೩೮೦, ಮಹಿಳೆ-೧೦೨೩೧೧, ಒಟ್ಟು- ೨೦೬೬೯೧ ಮತದಾರರ ಪೈಕಿ ಪುರುಷ- ೭೮೮೪೨, ಮಹಿಳೆ- ೭೪೪೧೩, ಒಟ್ಟು- ೧೫೩೨೫೫, ಶೇ. ೭೪.೧೫ ರಷ್ಟು ಅತಿ ಹೆಚ್ಚು ಮತದಾನವಾಗಿದೆ.  ಗಂಗಾವತಿ ತಾಲೂಕಿನಲ್ಲಿ ಪುರುಷ- ೧೦೮೯೪೪, ಮಹಿಳೆ-೧೧೧೨೦೫, ಒಟ್ಟು- ೨೨೦೧೪೯ ಮತದಾರರ ಪೈಕಿ ಪುರುಷ- ೭೯೩೩೯, ಮಹಿಳೆ- ೭೮೫೩೬, ಒಟ್ಟು- ೧೫೭೮೭೫, ಶೇ. ೭೧.೭೧ ರಷ್ಟು ಮತದಾನವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ- ೮೭೭೫೮, ಮಹಿಳೆ-೮೪೮೮೯, ಒಟ್ಟು- ೧೭೨೬೪೭ ಮತದಾರರ ಪೈಕಿ ಪುರುಷ- ೬೧೫೨೭, ಮಹಿಳೆ- ೫೮೮೪೩, ಒಟ್ಟು- ೧೨೦೩೭೦, ಶೇ. ೬೯.೭೨ ರಷ್ಟು ಮತದಾನವಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ- ೯೩೫೪೦, ಮಹಿಳೆ-೯೧೧೧೩, ಒಟ್ಟು- ೧೮೪೬೫೩ ಮತದಾರರ ಪೈಕಿ ಪುರುಷ- ೬೨೫೦೨, ಮಹಿಳೆ- ೬೦೬೪೧, ಒಟ್ಟು- ೧೨೩೧೪೩, ಶೇ. ೬೬.೬೯ ರಷ್ಟು ಅತಿ ಕಡಿಮೆ ಮತದಾನವಾಗಿದೆ.
ಮತ ಎಣಿಕಾ ಕೇಂದ್ರಗಳ ವಿವರ : ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದಲ್ಲಿ ಎಸ್.ಎಫ್.ಎಸ್ ಪ್ರೌಢಶಾಲೆ, ಗಂಗಾವತಿಯಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಯಲಬುರ್ಗಾದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ಫೆ. ೨೩ ರಂದು ಬೆಳಿಗ್ಗೆ ೦೮ ಗಂಟೆಯಿಂದ ಪ್ರಾರಂಭವಾಗಲಿದೆ.
ಜಿಲ್ಲಾ ಪಂಚಾಯತಿ ಮತ ಎಣಿಕೆ : ಜಿಲ್ಲಾ ಪಂಚಾಯತಿಯ ಒಟ್ಟು ೨೯ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು ೧೯೬ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
  ಕುಷ್ಟಗಿ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ ೦೭ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.  ಇಲ್ಲಿ ೦೨ ಕೊಠಡಿಗಳಲ್ಲಿ ಜಿ.ಪಂ. ೦೭ ಕ್ಷೇತ್ರಗಳ ಮತ ಎಣಿಕೆ ಜರುಗಲಿದ್ದು, ೨೧ ಟೇಬಲ್‌ಗಳನ್ನು ಇರಿಸಲಾಗಿದೆ.  ಎಣಿಕೆ ಮೇಲ್ವಿಚಾರಕರು-೨೪, ಎಣಿಕೆ ಸಹಾಯಕರು-೨೪ ಸೇರಿದಂತೆ ೪೮ ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಅದೇ ರೀತಿ ಕೊಪ್ಪಳ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ ೦೮ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಎಸ್.ಎಫ್.ಎಸ್ ಪ್ರೌಢಶಾಲೆಯ ೦೨ ಕೊಠಡಿಗಳಲ್ಲಿ ಜರುಗಲಿದ್ದು, ೨೪ ಟೇಬಲ್ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-೨೭, ಎಣಿಕೆ ಸಹಾಯಕರು-೨೭ ಸೇರಿದಂತೆ ೫೪ ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಗಂಗಾವತಿ ತಾಲೂಕಿನಲ್ಲಿ ಜಿ.ಪಂ.ನ ೦೮ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ೨೪ ಟೇಬಲ್ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-೨೭, ಎಣಿಕೆ ಸಹಾಯಕರು-೨೭ ಸೇರಿದಂತೆ ೫೪ ಸಿಬ್ಬಂದಿ ಕಾರ್ಯ ನಿರ್ವಹಿಸುವರು.  ಯಲಬುರ್ಗಾ ತಾಲೂಕಿನಲ್ಲಿ ಜಿಲ್ಲಾ ಪಂಚಾಯತಿಯ ೦೬ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಲಿದ್ದು, ೧೮ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.  ಎಣಿಕೆ ಮೇಲ್ವಿಚಾರಕರು-೨೦, ಎಣಿಕೆ ಸಹಾಯಕರು-೨೦ ಸೇರಿದಂತೆ ೪೦ ಸಿಬ್ಬಂದಿ ಕಾರ್ಯ ನಿರ್ವಹಿಸುವರು.  
ತಾಲೂಕಾ ಪಂಚಾಯತಿ ಮತ ಎಣಿಕೆ : ಜಿಲ್ಲೆಯ ನಾಲ್ಕು ತಾಲೂಕಾ ಪಂಚಾಯತಿಯ ಒಟ್ಟು ೧೦೯ ಕ್ಷೇತ್ರಗಳ ಮತ ಎಣಿಕೆಯು ೧೬ ಕೊಠಡಿಗಳ ೧೦೯ ಟೇಬಲ್‌ಗಳಲ್ಲಿ ನಡೆಯಲಿದ್ದು, ೧೨೧ ಜನ ಎಣಿಕೆ ಮೇಲ್ವಿಚಾರಕರು ಹಾಗೂ ೧೨೧ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು ೨೪೨ ಸಿಬ್ಬಂದಿ ಪಾಲ್ಗೊಳ್ಳುವರು.
    ಕುಷ್ಟಗಿ ತಾಲೂಕಿನ ೨೫ ಕ್ಷೇತ್ರಗಳ ಮತ ಎಣಿಕೆಯು ೦೪ ಕೊಠಡಿಗಳಲ್ಲಿ ೨೫ ಟೇಬಲ್‌ಗಳಲ್ಲಿ ನಡೆಯಲಿದೆ. ತಲಾ ೨೮ ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು ೫೬ ಸಿಬ್ಬಂದಿ ಪಾಲ್ಗೊಳ್ಳುವರು.  ಕೊಪ್ಪಳ ತಾಲೂಕಿನ ೨೯ ಕ್ಷೇತ್ರಗಳ ಮತ ಎಣಿಕೆಯು ೦೪ ಕೊಠಡಿಗಳಲ್ಲಿ ೨೯ ಟೇಬಲ್‌ಗಳಲ್ಲಿ ನಡೆಯಲಿದೆ. ತಲಾ ೩೨ ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು ೬೪ ಸಿಬ್ಬಂದಿ ಭಾಗವಹಿಸುವರು.   ಗಂಗಾವತಿ ತಾಲೂಕಿನ ೩೧ ಕ್ಷೇತ್ರಗಳ ಮತ ಎಣಿಕೆಯು ೦೪ ಕೊಠಡಿಗಳಲ್ಲಿ ೩೧ ಟೇಬಲ್‌ಗಳಲ್ಲಿ ನಡೆಯಲಿದೆ. ತಲಾ ೩೪ ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು ೬೮ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಯಲಬುರ್ಗಾ ತಾಲೂಕಿನ ೨೪ ಕ್ಷೇತ್ರಗಳ ಮತ ಎಣಿಕೆಯು ೦೪ ಕೊಠಡಿಗಳಲ್ಲಿ ೨೪ ಟೇಬಲ್‌ಗಳಲ್ಲಿ ನಡೆಯಲಿದೆ. ತಲಾ ೨೭ ಜನ ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರು ಸೇರಿದಂತೆ ೫೪ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
  ಮತ ಎಣಿಕಾ ದಿನದಂದು ಪ್ರತಿ ತಾಲೂಕಿಗೆ ಒಬ್ಬ ವಿಡಿಯೋಗ್ರಾಫರ್ ನೇಮಿಸಿ, ಚುನಾವಣಾ ಸಂಬಂಧ ಮುಖ್ಯ ಘಟನೆಗಳನ್ನು ಚಿತ್ರೀಕರಿಸಲು ನೇಮಿಸಲಾಗಿದೆ.
ಭದ್ರತಾ ವ್ಯವಸ್ಥೆ : ಫೆ. ೨೩ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಜರುಗುವ ಮತ ಎಣಿಕಾ ಕಾರ್ಯ ಸುಗಮವಾಗಿ ನಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ.  ಪ್ರತಿಯೊಂದು ಮತ ಎಣಿಕೆ ಕೇಂದ್ರಕ್ಕೆ ೦೧ ಸಿಪಿಐ, ೧೫ ಜನ ಪಿಎಸ್‌ಐ/ಎಎಸ್‌ಐ, ಹಾಗೂ ೧೦೦ ಜನ ಹೆಚ್‌ಸಿ/ಪಿಸಿ, ೭೫- ಗೃಹರಕ್ಷಕದಳದ ಸಿಬ್ಬಂದಿಯನ್ನು ಅಲ್ಲದೆ ೦೨ ಡಿಎಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.  ಪ್ರತಿ ಎರಡು ಮತ ಎಣಿಕಾ ಕೇಂದ್ರಕ್ಕೆ ೦೧ ಡಿವೈಎಸ್‌ಪಿ ಅವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ ೦೨- ಡಿವೈಎಸ್‌ಪಿ, ೦೬-ಪಿಎಸ್‌ಐ/ಸಿಪಿಐ, ೪೦೦-ಹೆಚ್‌ಸಿ/ಪಿಸಿ, ೩೦೦- ಗೃಹರಕ್ಷಕದಳ ಸಿಬ್ಬಂದಿ ಹಾಗೂ ೦೮-ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ತಿಳಿಸಿದ್ದಾರೆ.
  ಒಟ್ಟಾರೆ ಫೆ. ೨೩ ರಂದು ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕಾ ಕಾರ್ಯ ಸುಗಮವಾಗಿ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಎಲ್ಲ ರಾಜಕೀಯ ಪಕ್ಷದವರು, ಅಭ್ಯರ್ಥಿಗಳು, ಏಜೆಂಟರು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮನವಿ ಮಾಡಿಕೊಂಡಿದ್ದಾರೆ. 
Please follow and like us:
error