ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ೬೮ ನೇ ಸ್ವಾತಂತ್ರ್ಯೋತ್ಸವ

 ಪ್ರತಿಯೊಬ್ಬರಲ್ಲೂ ದೇಶ ಸೇವೆ ಮಾಡುವ ಮನೋಭಾವ ತಾನಾಗಿಯೇ ಹುಟ್ಟಬೇಕು. ನಾವೆಲ್ಲರೂ ಭಾರತ ಮಾತೆಯ ಋಣ ತೀರಿಸುವ ಕಾರ್ಯ ಮಾಡಬೇಕಾಗಿದೆ ಎಂದು ಜಲವರ್ದಿನಿ ಬೋರವೆಲ್ ಮಾಲಿಕರಾದ ಹನುಮಂತಪ್ಪ ಕಿಡದಾಳ ದ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಕರೆ ನೀಡಿದರು.
        ಅವರು ನಗರದ ಗವಿಮಠ ರಸ್ತೆಯಲ್ಲಿರುವ

ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ೬೮ ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ನಿಮಿತ್ಯ ಮಾತನಾಡುತ್ತಿದ್ದರು.

        ಶಾಲೆಯ ಪ್ರತಿ ಮಗು ತಾನು ಬೆಳೆಯುವದರ ಜೊತೆಗೆ ದೇಶಪ್ರೇಮ,ದೇಶಭಕ್ತಿ ಬೆಳೆಸಿಕೊಳ್ಳುವದರ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕೆಂದು ಕರೆ ನೀಡಿದರು.
       ನಟರಾಜ ಓಜನಹಳ್ಳಿ, ಮಲ್ಲಪ್ಪ ತುಬಾಕಿ, ಬಸವರಡ್ಡಿ ರಕರಡ್ಡಿ, ಶಾಲಾ ಪಾಲಕರ ಪ್ರತಿನಿಧಿಗಳಾದ ಗವಿಸಿದ್ದಪ್ಪ ಪಲ್ಲೇದ್,ಸಂಗಪ್ಪ ಬೀರಾದಾರ ವೇದಿಕೆಯಲ್ಲಿ ಇದ್ದರು.
       ವೇದಿಕೆಯ ಮೇಲೆ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು 
        ಶಾಲಾ ಮುಖ್ಯೋಪಾಧ್ಯಾಯರಾದ ಪರಶುರಾಮ ಮ್ಯಾಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ, ಆದರ್ಶಗಳನ್ನು ಪಾಲಿಸಿಕೊಳ್ಳುವಂತೆ ಹೇಳಿದರು. ಶಾಲಾ ವಿದ್ಯಾರ್ಥಿಗಳಾದ ಕೌಶಲ್ಯ ಮತ್ತು ಪವಿತ್ರ ಪಾರ್ಥಿಸಿದರು, ಶಿಕ್ಷಕಿ ಪಾರ್ವತಿ ನಿಡಶೇಸಿ ಸ್ವಾಗತಿಸಿದರು, ವಿನಿತಾ ಬೆಟಗೇರಿ ನಿರೂಪಿಸಿದರು, ಹೀನಾ ಕೌಸರ್ ಪಲ್ಡನ್ ವಂದಿಸಿದರು ಹಾಗೂ ಶಾಲಾ ಅಧ್ಯಕ್ಷರಾದ ಹುಲಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು.

Leave a Reply