ಆದೇಶ ಪಾಲಿಸದ ಪ್ರಭಾರಿ ಉಪನಿರ್ದೇಶಕರು :ಪ್ರತಿಭಟನೆಗೆ ನಿರ್ಧಾರ

 ಸೆ.೫ರಂದು ನಗರ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯ ಎಸ್.ಸಿ.ಹಾಗೂ ಎಸ್.ಟಿ.ಪ್ರಾಥಮಿಕ,ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳ ಹೆಸರುಗಳನ್ನು ಸೇರಿಸದೆ ಸರ್ಕಾರವು ಮಾಡಿದ ಆದೇಶವನ್ನು ಪಾಲಿಸದೆ ಶಿಷ್ಟಾಚಾರವನ್ನು ಮುರಿದ ಪ್ರಭಾರಿ ಉಪನಿರ್ದೇಶಕರಾದ ಶರಣಪ್ಪ ಗುಡ್ಲಾನೂರವರು ಕೈಗೊಂಡಿರುವ ನಿರ್ಧಾರಕ್ಕೆ ಸಂಘದ ವತಿಯಿಂದ ಕಾರ್ಯಕ್ರಮದ ಸಮಯದಲ್ಲಿ ಸಾಹಿತ್ಯ ಭವನದ ಮುಂದೆ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಲಾಗಿದೆ.
   ರಾಜ್ಯ ಸರ್ಕಾರವು ಎಸ್,ಸಿ.ಹಾಗೂ ಎಸ್.ಟಿ.ಪ್ರಾಥಮಿಕ,ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಪಾದಾಧಿಕಾರಿಗಳನ್ನು ಸಭೆ,ಸಮಾರಂಭ,ಪೂರ್ವ ಭಾವಿ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಆಹ್ವಾನಿಸುವಂತೆ ದಿನಾಂಕ:೨೪.೦೫.೨೦೧೪ರಂದು ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಎಸ್.ಬಿ.ಪಟಗಾರ್ ಆದೇಶ ಹೊರಡಿಸಿದ್ದಾರೆ.ಈ ಆದೇಶವನ್ನು ಕೊಪ್ಪಳ ಜಿಲ್ಲೆಯ ಉಪನಿರ್ದೇಶಕರಿಗೆ ಜಿಲ್ಲಾ ಘಟಕದ ಪದಾಧಿಕಾರಿಗಳ ವಿವರಗಳೊಂದಿಗೆ ದಿನಾಂಕ.೨೪.೦೬.೨೦೧೪ರಂದು ಮನವಿಯನ್ನು ನೀಡಲಾಗಿತ್ತು.ಜೊತೆಗೆ ಈ ವಿಚಾರದ ಕುರಿತು ಪ್ರಭಾರಿ ಉಪನಿರ್ದೇಶಕರಾದ ಶರಣಪ್ಪ ಗುಡ್ಲಾನೂರವರಿಗೆ ದಿನಾಂಕ.೦೧.೦೯.೨೦೧೪ ಆದೇಶಗಳ ಜೊತೆಯಲ್ಲಿ ಪದಾಧಿಕಾರಿಗಳ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಯಿತು.ಆದರೂ ಕೂಡಾ ಕೇವಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿ.ಎಸ್.ಸಿ.ಹಾಗೂ ಎಸ್.ಟಿ.ಪ್ರಾಥಮಿಕ,ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳ ಹೆಸರುಗಳನ್ನು ಹಾಕಿಸದೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಇರುವ ಕ್ರಮವನ್ನು ಸಂWದ ಜಿಲ್ಲಾಧ್ಯಕ್ಷರಾದ ಭರಮಪ್ಪ ಕಟ್ಟಿಮನಿ ಖಂಡಿಸುವುದರ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   ಎಲ್ಲಾ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿ ಕೇವಲ ಎಸ್.ಸಿ.ಮತ್ತು ಎಸ್.ಟಿ.ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಸಂವಿಧಾನಿಕ ಅವಮಾನವಾಗಿದೆ.ಇಂತಹ ಬೇಜವ್ದಾರಿಯ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 
Please follow and like us:

Related posts

Leave a Comment