ಕಿನ್ನಾಳ ರೈಲ್ವೆ ಗೇಟ್ ಸೇತುವೆ ಕಾಮಗಾರಿ : ಸಂಚಾರ ನಿಷೇಧ

ಕೊಪ್ಪಳ ಏ.  : ಕೊಪ್ಪಳ ನಗರದ ಕಿನ್ನಾಳ ರಸ್ತೆ ರೈಲ್ವೆ ಗೇಟ್ ಸಂಖ್ಯೆ ೬೪ ಕ್ಕೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ನಿಮಿತ್ಯ ಕಿನ್ನಾಳ ರಸ್ತೆ ರೈಲ್ವೆ ಗೇಟ್ ಮೂಲಕ ವಾಹನ ಸಂಚಾರವನ್ನು ಏ. ೦೬ ರಿಂದ ಅನ್ವಯವಾಗುವಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
  ಕಿನ್ನಾಳ ರಸ್ತೆ ರೈಲ್ವೆ ಗೇಟ್ ಸಂಖ್ಯೆ ೬೪ ಕ್ಕೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ನಿಮಿತ್ಯ ರೈಲ್ವೆ ಗೇಟ್ ಸಂಖ್ಯೆ ೬೪ ರ ಮೂಲಕ ಹಾದು ಹೋಗುವ ಎಲ್ಲ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು,  ಕೊಪ್ಪಳ ನಗರದಿಂದ ಕಿನ್ನಾಳ ಕಡೆಗೆ ವಾಹನ ಸಂಚಾರಕ್ಕಾಗಿ ಮಾರ್ಗವನ್ನು ಬದಲಾಯಿಸಲಾಗಿದೆ.  ಈ ರೈಲ್ವೆ ಗೇಟ್ ಮೂಲಕ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಕೊಪ್ಪಳ ನಗರಕ್ಕೆ ಸಂಪರ್ಕ ಪಡೆಯಲು ಭಾಗ್ಯನಗರದ ರೈಲ್ವೆ ಗೇಟ್ ಸಂಖ್ಯೆ ೬೨ ರ ಮೂಲಕ ಹಾಗೂ ಭಾಗ್ಯನಗರ ಕ್ರಾಸ್ ನಿಂದ ಕುಷ್ಟಗಿ ಪಟ್ಟಣಕ್ಕೆ ಸಂಪರ್ಕ ಪಡೆಯುವ ಅಂದರೆ ರೈಲ್ವೆ ಗೇಟ್ ಸಂಖ್ಯೆ ೬೬ ರ ಮೂಲಕ ಕೊಪ್ಪಳ ನಗರಕ್ಕೆ ಸಂಪರ್ಕ ಪಡೆಯಲು ಸಂಚಾರವನ್ನು ಮಾರ್ಗಪಲ್ಲಟ (Diversion)  ಮಾಡಲಾಗಿದೆ.  ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ, ಮಾಹಿತಿಗಾಗಿ ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಗೊಳಿಸುವಂತೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದ್ದು, ವಾಹನ ಸಂಚಾರ ನಿಷೇಧ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ತಿಳಿಸಿದ್ದಾರೆ.

Leave a Reply