fbpx

ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್

ದೀಪಾಯನ ಶಾಲೆಯ ವಿದ್ಯಾರ್ಥಿನಿ ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಅಭಿನಂದಿಸಿದ ಶಾಲಾ ಆಡಳಿತ ಮಂಡಳಿ
ಹೊಸಪೇಟೆ: ನಗರದ ದೀಪಾಯನ್ ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ರಜನಿ ಎಸ್. ಆಚಾರ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ರಾಜ್ಯಕ್ಕೆ ಎರಡನೇಯ ರ‍್ಯಾಂಕ್ ಪಡೆದಿದ್ದಾರೆ. 
ಶೇಕಡಾ ೯೯.೫೨ ಅಂಕಗಳನ್ನು ಪಡೆದು ರಾಜ್ಯದಲ್ಲಿಯೇ ಎರಡನೇಯ ರ‍್ಯಾಂಕ್ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾಳೆ. ಇದು ವಿದ್ಯಾರ್ಥಿಯ ಪೋಷಕರಿಗೆ ಹಾಗೂ ಶಾಲೆ ಆಡಳಿತ ಮಂಡಳಿಗೆ ಸಂತಸ ತಂದಿದೆ ಎಂದು ಎಂದು ಶಾಲೆಯ ಮುಖ್ಯಶಿಕ್ಷಕ ರಾಘವೇಂದ್ರರಾವ್ ಸಂಭ್ರಮಿಸಿದರು. ದೀಪಾಯನ್ ಅಂಗ್ಲ ಮಾಧ್ಯಮ ಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದಿದೆ ಎಂದು ಶಾಲೆಯ ಫಲಿತಾಂಶ ಪ್ರಕಟಿಸಿದರು. 
Please follow and like us:
error

Leave a Reply

error: Content is protected !!