fbpx

ಕೆಎಸ್‌ಆರ್‌ಟಿಸಿ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಹೋರಾಟ

ಶಾಸಕರ ಮಧ್ಯಸ್ಥಿಕೆಯಲ್ಲಿ ಮಾತುಕತೆಯಲ್ಲಿ ಮುಕ್ತಾಯ
ಕೊಪ್ಪಳ, ಜೂ. ೧೯. ಕೆಎಸ್‌ಆರ್‌ಟಿಸಿಯ ಭ್ರಷ್ಟ ಅಧಿಕಾರಿಗಳ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಇಂದು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಶಾಸಕರ ಮ

ಧ್ಯಸ್ಥಿಕೆಯಲ್ಲಿ ಮುಕ್ತಾಯವಾಯಿತು.

ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ, ಹಿರಿಯ  ಹೋರಾಟಗಾರ, ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರ ಮುಖಂಡತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಧರಣಿ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರಿಂದ ಮಾಹಿತಿ ಪಡೆದರು, ನಂತರ ಅಲ್ಲಿಗೆ ಬಂದ ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಮೀನುಲ್ಲಾಸಾಬ್‌ಗೆ ಪ್ರಸ್ತುತ ಹೋರಾಟ ಹಮ್ಮಿಕೊಂಡಿರುವ ನಿರ್ವಾಹಕ ರವೀಂದ್ರಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಯಾವುದೇ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು. ಯಾವುದೇ ನೌಕರರಿಗೆ ತೊಂದರೆ ಕೊಡಬಾರದು ಎಂದು ಸೂಚಿಸಿದರು. ಕೆಎಸ್‌ಆರ್‌ಟಿಸಿಯ ನಿವೃತ್ತ ನೌಕರರಿಗೆ ಮತ್ತು ಅಂಗವಿಕಲರಿಗೆ ಪಾಸ್ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ಸೇರಿದಂತೆ ಸರಕಾರ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಪರಿಹರಿಸುವದಾಗಿ ಸಹ ಸಭೆಗೆ ಭರವಸೆ ನೀಡಿದರು.                 
       ಕೊಪ್ಪಳದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕೆಎಸ್‌ಆರ್‌ಟಿಸಿಯ ನೌಕರ ಹಾಗೂ ಕಾರ್ಮಿಕ ಮುಖಂಡ ವೈ. ರವೀಂದ್ರರಿಗೆ ಮತ್ತು ಅಲ್ಲಿಯೇ ಉತ್ತಮವಾಗಿ ಕೆಲಸ ಮಾಡುತ್ತಿರುವ ಅವರ ಪತ್ನಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂಬ ಹೋರಾಟಗಾರರ ಮನವಿಗೆ ಸ್ಪಂದಿಸಿದ ಶಾಸಕರು ಈ ಕುರಿತು ಮೇಲಿನ ಅಧಿಕಾರಿಗಳ ಜೊತೆ ಕೂಡಲೆ ಮಾತನಾಡುವದಾಗಿ ಭರವಸೆ ನೀಡಿದರು. ಮುಂದಿನ ೧೫ ದಿನಗಳಲ್ಲಿ ನ್ಯಾಯ ದೊರಕದಿದ್ದಲ್ಲಿ, ತೀವ್ರ ಸ್ವರೂಪದ ಹೋರಾಟವನ್ನು ಮಾಡುವದಾಗಿ ಕೊಪ್ಪಳ ಜಿಲ್ಲಾ ಬಚಾವೋ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎಐಟಿಯುಸಿಯ ಬಸವರಾಜ ಶೀಲವಂತರ, ಟಿಯುಸಿಯ ಡಿ.ಹೆಚ್. ಪೂಜಾರ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕನ್ನಡ ಸಾಹಿತ್ಯ ಪರಿಷತ್ತಿನ ಹುಸೇನ ಪಾಷಾ, ದಲಿತ ಮುಖಂಡ ಡಾ|| ಜ್ಞಾನಸುಂದರ, ರಾಮಣ್ಣ ಕಂದಾರಿ, ಜಿಂಕೆ ಹಾವಳಿ ಹೋರಾಟ ಸಮಿತಿಯ ಜಗದೀಶಗೌಡ ತೆಗ್ಗಿನಮನಿ, ಕೋಕಾಕೋಲಾ ಕಾರ್ಮಿಕ ಸಂಘಟನೆಯ ರಾಘವೇಂದ್ರ, ಕೆಎಸ್‌ಆರ್‌ಟಿಸಿಯ ವಿವಿಧ ಕಾರ್ಮಿಕ ಮುಖಂಡರಾದ ಎ.ಬಿ. ದಿಂಡೂರ, ಎ.ಜಿ. ಮಣ್ಣೂರ, ಸುರೇಶ ನಾಯ್ಕ, ಬಾಲಕೃಷ್ಣ, ಎಸ್. ರಾಜು, ಜಗದೀಶ ಗುಗ್ಗರಿ, ಚರಲಿಂಗಪ್ಪ, ನಾಗಯ್ಯಸ್ವಾಮಿ, ಮಂಜುನಾಥ ಬಂಡಿ, ವಿಠ್ಠಲ ಬಡಿಗೇರ, ಮಂಜುನಾಥ ಕಳ್ಳಿ, ಬಿ. ಎಸ್. ಕಟಗೇರಿ, ರಾಮಲಿಂಗಪ್ಪ, ರಾಜಶೇಖರ, ರುಖ್ಮಯ್ಯ ಪೂಜಾರಿ, ಶ್ರೀಶೈಲಪ್ಪ, ಶಿವಮೂರ್ತಿ ಅಳವಂಡಿ ಇತರರು ಇದ್ದರು. ಹೋರಾಟಕ್ಕೆ ಕಾಂಗ್ರೇಸ್ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಇಂದಿರಾ ಭಾವಿಕಟ್ಟಿ ಇತರರು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಿದರು.
Please follow and like us:
error

Leave a Reply

error: Content is protected !!