You are here
Home > Koppal News > ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ; ನಾಗರಾಜನಾಯಕ ಡೊಳ್ಳಿನಗೆ ಸತ್ಕಾರ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ; ನಾಗರಾಜನಾಯಕ ಡೊಳ್ಳಿನಗೆ ಸತ್ಕಾರ

ಕೊಪ್ಪಳ ನ ೨೧,ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಉ.ಕ.ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಇತ್ತೀಚೆಗೆ ಕಾರವಾರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಏರ್ಪಡಿಸಿತ್ತು.ರಾಜ್ಯ ಮಟ್ಟದ ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡಿ ಡೊಳ್ಳಿನ  ಅವರಿಗೆ ಸಿಬ್ಬಂದಿ ಸೇವಾ ವಿಶೇಷ ಪುರಸ್ಕಾರ ನೀಡಿ ಸತ್ಕರಿಸಲಾಯಿತು . 

ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನವೆಂಬರ ೧೯ ರಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನೆಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ . ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ರಾಜ್ಯದ ೬೦ ಜನ ಸಿಬ್ಬಂದಿಗೆ ಸೇವಾ ಪುರಸ್ಕಾರ ನೀಡಲಾಯಿತು.
ಕೊಪ್ಪಳದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜನಾಯಕ ಡಿ ಡೊಳ್ಳಿನ ಅವರ ಸೇವೆಯನ್ನು ಗುರುತಿಸಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ.ಎಸ್.ಹೊಸಮನಿ ಅವರು ವಿಶೇಷ ಸೇವಾ ಪುರಸ್ಕಾರ ಪ್ರಕಟಿಸಿದರು.ಇದೇ ಸಂದರ್ಭದಲ್ಲಿ ಮುನಿರಾಬಾದಿನ ಸಹಾಯಕ ಗ್ರಂಥಪಾಲಕ  ಕೆ ಶ್ರೀಕಂಠಮೂರ್ತಿ ಅವರಿಗೂ ಸಿಬ್ಬಂದಿ ಸೇವಾ ಪುರಸ್ಕಾರ ನೀಡಲಾಯಿತು.
ಸಾಹಿತಿ ಶೂದ್ರ ಶ್ರೀನಿವಾಸ, ಮಾಜಿ ಗ್ರಂಥಾಲಯ ಸಚಿವ ಪ್ರಭಾಕರ ರಾಣೆ,ಇಲಾಖೆ ನಿರ್ದೇಶಕ ಡಾ ಸತೀಶಕುಮಾರ.ಎಸ್.ಹೊಸಮನಿ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಇಲಾಖೆಯ ನಿವೃತ್ತ ನಿರ್ದೇಶಕರಾದ ಟಿ.ಮಲ್ಲೇಶಪ್ಪ, ಕೆ.ಜಿ.ವೆಂಕಟೇಶ,ಕಾರವಾರ ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ, ಉ.ಕ.ಜಿ ಪಂ ಅಧ್ಯಕ್ಷೆ ಸರಸ್ವತಿ ಶಂಕರಗೌಡ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಮುಖ್ಯ ಗ್ರಂಥಾಲಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಸತ್ಕಾರಕ್ಕೆ ಭಾಜನಾಗಿರುವ ಕೆ ಶ್ರೀಕಂಠಮೂರ್ತಿ ಹಾಗೂ ನಾಗರಾಜನಾಯಕ ಡೊಳ್ಳಿನ ಅವರ ಸಾಧನೆಗೆ ಕೊಪ್ಪಳದ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಗೌಡ, ನರಸಿಂಹಮೂರ್ತಿ, ಶಿವನಗೌಡ ಪಾಟೀಲ ಮತ್ತಿತರ ಸಿಬ್ಬಂದಿ ಹರ್ಷ ವ್ಯಕ್ತ ಪಡಿಸಿದ್ದಾರೆ. 

Leave a Reply

Top