You are here
Home > Koppal News > ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಸಮಾನತೆ ಕೊಟ್ಟವರು: ಡಾ. ಅಂಬೇಡ್ಕರ್: ಸಂಸದ ಸಂಗಣ್ಣ ಕರಡಿ

ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಸಮಾನತೆ ಕೊಟ್ಟವರು: ಡಾ. ಅಂಬೇಡ್ಕರ್: ಸಂಸದ ಸಂಗಣ್ಣ ಕರಡಿ

ಕೊಪ್ಪಳ,ಎ.೧೪: ಭಾರತದ ಸಂವಿಧಾನ ಶಿಲ್ಪಿ ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾನ್ ಮಾನವತವಾದಿ ದಲಿತ ಜನಾಂಗದ ಕ್ರಾಂತಿಕಾರಿ ನಾಯಕನಾಗಿ ಶೋಷಿತ ಜನಾಂಗದ ಸಮಾನತೆಯ ಸ್ವಾತಂತ್ರ್ಯ, ಸ್ವಾಲಂಬನೆ, ಆತ್ಮವಿಶ್ವಾಸ ವಿದ್ಯೆಯ ಅಗತ್ಯತೆಯನ್ನು ಸಾರಿದವರು. ಸಮಾನತೆಯ ಸಹೋದರತ್ವಗಳ ತಳಹದಿಯ ಮೇಲೆಯೇ ಮಾತ್ರವೇ ಆದರ್ಶವಾದ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯವೆಂದು ದೃಢ ನಂಬಿಕೆಯಿಂದ ಹೋರಾಡಿದ ಡಾ. ಅಂಬೇಡ್ಕರರವರು ಆಧಾನಿಕ ಭಾರತ ಕಂಡ ಮಹಾಪುರುಷರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರವರ ೧೨೪ ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಅಂಬೇಡ್ಕರರವರು ಕೂಡ ಮೂಲ ಕಾರಣಿಕರ್ತರರಾಗಿದ್ದಾರೆ. ಮನುಷ್ಯನಿಗೆ ಶಿಕ್ಷಣ ಇದ್ದರೆ ಯಾವುದೇ ಸ್ಥಾನಮಾನಗಳು ಸಿಗುವುದರಲ್ಲಿ ಅನುಮಾನವೇ ಇಲ್ಲ ಎಂಬುವುದಕ್ಕೆ ಅಂಬೇಡ್ಕರವರೇ ಸಾಕ್ಷಿಯಾಗಿದ್ದಾರೆ. ಅವರು ಕೇವಲ ಶೋಷಿತರ ಪರವಾಗಿ ಹೋರಾಟ ಮಾಡಿದವರಲ್ಲ. ಈ ದೇಶದ ರೈತರ ಬಗ್ಗೆ ಕೂಡ ಅಪಾರವಾದ ಗೌರವವಿಟ್ಟು ಅವರೊಂದಿಗೂ ಸಹ ಹೋರಾಟ ಮಾಡಿ ಅವರ ಎಳಿಗೆಗಾಗಿ ಶ್ರಮಿಸಿದ್ದಾರೆ. ಅಲ್ಲದೇ ಮಹಿಳೆಯರ ಪರವಾಗಿ ಧ್ವನಿ ಎತ್ತಿ ಅವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ರಚಿಸಿ ಸಂವಿಧಾನ ಕೇವಲ ಭಾರತಕಷ್ಟೇ ಸಿಮಿತವಲ್ಲದೇ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಮುಖಂಡರಾದ ಸಿದ್ಧಲಿಂಗಯ್ಯ ಸ್ವಾಮಿ ಹಿರೇಮಠ, ಗವಿಸಿದ್ಧಪ್ಪ ಕಂದಾರಿ. ಡಾ. ಮಲ್ಲಿಕಾರ್ಜುನ ರಾಂಪೂರ, ಜಿಲ್ಲಾಧ್ಯಕ್ಷ ಮಾರೇಶ ಮುಷ್ಟೂರು, ರಾಜು ಬಾಕಳೆ, ಡಾ. ಕೊಟ್ರೇಶ ಶೇಡ್ಮಿ,  ಕಳಕಪ್ಪ ಜಾದವ್, ಚಂದ್ರಶೇಖರ ಕವಲೂರು, ಸದಾಶಿವಯ್ಯ ಹಿರೇಮಠ, ಹಾಲೇಶ ಕಂದಾರಿ, ಪಕ್ಷದ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ನೀಲಕಂಠಯ್ಯ ಹಿರೇಮಠ, ಮಂಜುನಾಥ ಹಳ್ಳಿಕೇರಿ, ಬಸವರಾಜ ಭೋವಿ, ಭರತ್ ನಾಯಕ, ಧಶರಥ, ರಮೇಶ ಚೌಡಕಿ, ಬಸವರಾಜ ನೀರಲಗಿ, ಪ್ರಾಣೇಶ ಮಹೇಂದ್ರಕರ್, ಗಣೇಶ ಹೊರತಟ್ನಾಳ, ವಸಂತ ಮೆಳ್ಳಿಕೇರಿ, ನಾಗರಾಜ ಚಿತ್ರಗಾರ ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Top