ಉಚಿತ ಹೋಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ

          ಕೊಪ್ಪಳ ನಗರದ ಇಂದ್ರಕೀಲ ನಗರದಲ್ಲಿ ನಂದಾದೀಪ ಚಾರಿಟೇಬಲ್ ಟ್ರಸ್ಟ   ಉಚಿತ ಹೋಲಿಗೆ ತರಬೇತಿ ಕೇಂದ್ರದ ೫ನೇ ಬ್ಯಾಚ್ ವಿದ್ಯಾರ್ಥಿಗಳುಗೆ ಅರ್ಹತಾ ಪತ್ರ ನೀಡಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಮಹೇಂದ್ರ ಚೊಪ್ರ ವಹಿಸಿದ್ದರು ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಿದರು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಆಯೋಜಿಸಲಾಗಿತ್ತು ಸುಮಾರು ೨೦೦ ಮಹಿಳೆಯರು ಭಾಗವಹಿಸಿದ್ದರು, ಮತ್ತು ಟ್ರಸ್ಟಿನ ಹಿತೈಷಿಗಳಾದ ಗ.ರಾ.ಸುರೇಶ, ವಸಂತ ಜೋಷಿ ಪೂಜೆಯನ್ನು ಆಯೋಜಿಸಿದರು, ಇದೇ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕರಾದ ಮತ್ತು ನಗರಸಭಾ ಸದಸ್ಯರಾದ ಪ್ರಾಣೇಶ ಮಹೇಂದ್ರಕರ್ ಮಾತನಾಡಿದರು, ಮಹಿಳೆಯರು ಕೈಕೆಲಸವನ್ನು ಕಲಿಯಬೇಕು ಮತ್ತು ಕುಟುಂಬದ ಪ್ರಗತಿಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಬೇಕು ಎಂದು ಕರೆನೀಡಿದರು,ಉಚಿತ ಹೋಲಿಗೆ ತರಬೇತಿ ಪಡೆಯಲು ಇಚ್ಚಿಸುವ ಮಹಿಳೆಯರು ೯೯೦೦೪೩೩೪೧೪ ಗೆ ಸಂಪರ್ಕ ಮಾಡಿ ತಮ್ಮ ಹೆಸರನ್ನು ನೊಂದಾಯಿಸಬೇಕು, ಎಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಉಚಿತ ಹೋಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ರೇಣುಕಾ ಮಹೇಂದ್ರಕರ್, ಮತ್ತು ಉಚಿತ ಟ್ಯೂಶನ್ ಕೇಂದ್ರದ ಶಿಕ್ಷಕಿಯರು ಭಾಗವಹಿಸಿದ್ದರು.

Leave a Reply