ಅ.೨೭ ರಂದು ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ

  ಬಕ್ರೀದ ಹಬ್ಬಕ್ಕಾಗಿ ಅಕ್ಬೋಬರ್ ೨೬ ರ ಶುಕ್ರವಾರದ ಬದಲಿಗೆ ೨೭ ರ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

೨೦೧೨ನೇ ವರ್ಷಕ್ಕೆ ಮಂಜೂರು ಮಾಡಿದ ಸಾರ್ವತ್ರಿಕ ರಜಾಪಟ್ಟಿಯಲ್ಲಿ ದಿ.೨೬-೧೦-೨೦೧೨ ರಂದು ಬಕ್ರೀದ ಹಬ್ಬವೆಂದು ಘೋಷಿಸಿ ನೆಗೋಸಿಯೇಬಲ್ ಇನ್ಸ್ಟ್ರೂಮೆಂಟ್ ಆಕ್ಟ್ ೧೮೮೧ರಡಿ ರಜೆ ಘೋಷಿಸಲಾಗಿತ್ತು. ಆದರೆ ರಾಜ್ಯ ವಕ್ಫ್ ಮಂಡಳಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ದಿ: ೨೭-೧೦-೨೦೧೨ ರಂದು ಆಚರಿಸಲಾಗುತ್ತಿದ್ದು, ದಿ: ೨೬-೧೦-೨೦೧೨ ರಂದು ನೀಡಿರುವ ಸಾರ್ವತ್ರಿಕ ರಜೆಯನ್ನು ದಿ: ೨೭-೧೦-೨೦೧೨ ಕ್ಕೆ ನೀಡುವಂತೆ ಕೋರಿರುವ ಹಿನ್ನಲೆಯಲ್ಲಿ ಸರ್ಕಾರ ಈ ಆದೇಶವನ್ನು ಹೊರಡಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ಹೊರಡಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಅವರು ತಿಳಿಸಿದ್ದಾರೆ.
Please follow and like us:
error