ಗ್ರಂಥಾಲಯ ಇಲಾಖೆ : ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.   : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ, ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಯೋಜನೆಯಡಿ  ೨೦೧೧ ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 
       ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ , ಪಠ್ಯ, ಸಾಂದರ್ಭಿಕ,ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತರ ವಿಷಯಗಳ ಕನ್ನಡ ಆಂಗ್ಲ, ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ – ಪ್ರದರ್ಶಕ, ಪ್ರಕಾಶಕರು , ಸಂಸ್ಥೆಗಳು ವಿತರಕರಿಂದ ಪುಸ್ತಕಗಳನ್ನು  ಆಯ್ಕೆ ಮಾಡಲಾಗುವುದು. ೩೨ ಕ್ಕಿಂತ ಹೆಚ್ಚಿನ  ಪುಟಗಳಲ್ಲಿ ಉತ್ತಮ ಗುಣಮಟ್ಟದ ಹಾಳೆಯಲ್ಲಿ ನಿಯಮಾನುಸಾರ ಪ್ರಕಟಗೊಂಡಿರಬೇಕು.  ರಾಜ್ಯ ಕೇಂದ್ರ ಗ್ರಂಥಾಲಯ, ಗ್ರಂಥಸ್ವಾಮ್ಯ ವಿಭಾಗ, ಕಬ್ಬನ್ ಉದ್ಯಾನವನ, ಬೆಂಗಳೂರು ಇವರಲ್ಲಿ  ಜನವರಿ ೧೬ ರೊಳಗೆ ಕಳುಹಿಸಿ, ನೊಂದಾಯಿಸಬೇಕು.    ಜಿಲ್ಲಾ ಅಥವಾ ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪುಸ್ತಕದ ಪ್ರತಿಯೊಂದಿಗೆ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, ೪ ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು ಇವರಿಗೆ ಫೆಬ್ರವರಿ ೧೫ ರೊಳಗೆ ಕಳುಹಿಸಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು  ತಿಳಿಸಿದ್ದಾರೆ.  
Please follow and like us:
error