ಡಿ.೨೬ ರಿಂದ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ : ಅರ್ಜಿ ಆಹ್ವಾನ

 ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯಿಂದ ಮಂಡ್ಯದಲ್ಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಡಿ.೨೬ ರಿಂದ ೨೭ ರವರೆಗೆ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಅತಿ ಕಿರಿಯರ, ಕಿರಿಯರ, ಹಿರಿಯರ ವಿಭಾಗಗಳಲ್ಲಿ ತಲಾ ೩ ಪ್ರಶಸ್ತಿ ನೀಡಲಾಗುವುದು, ಭರತನಾಟ್ಯ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ನಾಟ್ಯ ಮಂದಾರ, ನಾಟ್ಯ ವರ್ಷಿಣಿ ಹಾಗೂ ನಾಟ್ಯ ಸಮ್ಮೋಹಿನಿ ಎಂಬ ಬಿರುದು ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೂ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗುರುದೇವ ಕುಟೀರ, ೧೨೪೦/೦೧, ಅಶೋಕ ನಗರ, ಮಂಡ್ಯ-೫೭೧೪೦೧, #೪೫, ಶ್ರೀಧರ ನಿಲಯ, ೩ನೇ ಬ್ಲಾಕ್, ೬ನೇ ಮುಖ್ಯರಸ್ತೆ, ವಿಜಯಲಕ್ಷ್ಮಿಪುರಂ, ಮೈಸೂರು-೫೭೦೦೧೨ ಮೊ.೯೪೪೮೩೮೩೭೮೫, ೯೫೩೫೫೯೦೨೮೭, ೯೫೩೫೫೯೦೨೮೭, ವೆಬ್‌ಸೈಟ್ ÉÊmï www.gurudevdance.com ಸಂಪರ್ಕಿಸಬಹುದಾಗಿದೆ. ಇ-ಮೇಲ್ gurudevacademy@gmail.com  ಗೆ ಅರ್ಜಿ ಸಲ್ಲಿಸಬಹುದಾಗಿದೆ .

Leave a Reply