ರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆ

ಹೊಸಪೇಟೆ: ನಗರದಲ್ಲಿ ರಸ್ತೆ ಆಗಲೀಕರಣದ ಕಾಮಗಾರಿ ನಡೆಸಲು ಗುರುವಾರ ಶಾಸಕ ಆನಂದ್ ಸಿಂಗ್ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು, ಪೌರಾಯುಕ್ತರ ಜೊತೆ ರಸ್ತೆ ಅಗಲೀಕರಣವಾಗುವ ಪ್ರದೇಶ ವೀಕ್ಷಿಸಿದರು.
ವಾಲ್ಮೀಕಿ ವೃತ್ತದಿಂದ ರಾಮಾಟಾಕೀಸ್ ವೃತ್ತದವರೆಗೆ ಹಾಗೂ ರಾಮಾಟಾಕೀಸ್ ವೃತ್ತದಿಂದ ಅಂಬೇಡ್ಕರ್ ವೃತ್ತದವರಗೆ ರಸ್ತೆ ಅಗಲೀಕರಣ ನಡೆಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಪರಿವೀಕ್ಷಣೆ ನಡೆಸಲಾಯಿತು ಎಂದು ಶಾಸಕ ಆನಂದ್ ಸಿಂಗ್ ತಿಳಿಸಿದರು. ನಗರೋತ್ಥಾನ ಯೋಜನೆಯಡಿ ನಗರಸಭೆಯಿಂದ ಈ ರಸ್ತೆ ವಿಸ್ತರಣೆಯನ್ನು ನಡೆಸಲು ಯೋಜಿಸಲಾಗಿತ್ತು. ಒಳಚರಂಡಿ ಕಾಮಗಾರಿಯಿಂದ ಈ ರಸ್ತೆ ಆಗಲೀಕರಣದ ಕಾರ್ಯ ನಿಂತಿತ್ತು. ಒಳಚರಂಡಿ ಕಾಮಾಗಾರಿ ಪೂರ್ಣಗೊಳ್ಳುತ್ತಿರುವುದರಿಂದ  ಈಗ ಇದಕ್ಕೆ ಚಾಲನೆ ಕೊಡಲಾಗುವುದು ಎಂದು ಶಾಸಕ ಆನಂದ್ ಸಿಂಗ್ ಹೇಳಿದರು. ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ, ಪೌರಾಯುಕ್ತ ಮಹಮದ್ ಮುನೀರ್, ನಗರಸಭೆ ಸದಸ್ಯರಾದ ಗುಜ್ಜಲ ನಿಂಗಪ್ಪ, ಗುಡಿಗುಂಟೆ ಮಲ್ಲಿಕಾರ್ಜುನ, ರಾಮಾಂಜನಿ, ಗೌಸ್, ಗೋವಿಂದರಾಜ್, ತ.ಚಿದಾನಂದ ಮತ್ತಿತರರು ಹಾಜರಿದ್ದರು. ಇದಕ್ಕೂ ಮುಂಚೆ ನಗರಸಭೆ ಸದಸ್ಯರ ಸಭೆ ನಡೆಸಿ ನಗರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು. ರಸ್ತೆ ಅಗಲೀಕರಣದಿಂದ ಕೆಲವರಿಗೆ ತೊಂದರೆಯಾಗಬಹುದು ಆದರೆ ಇದರಿಂದ ಆಗುವ ಅನುಕೂಲಗಳನ್ನು ಪರಿಗಣಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. 
Please follow and like us:
error