ಬಿಜೆಪಿಗೆ ಮತ್ತೆ ಹೋಗಲ್ಲ: ಶ್ರೀರಾಮುಲು ಸ್ಪಷ್ಟನೆ

ಬಳ್ಳಾರಿ, ನ : ಯಾವುದೇ ಕಾರಣಕ್ಕೂ ತಾನು ಬಿಜೆಪಿಗೆ ಮತ್ತೆ ಹೋಗುವುದಿಲ್ಲ ಎಂದು ಬಿಜೆಪಿಗೆ ಗುಡ್‌ಬೈ ಹೇಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ತನಗೆ ಬಹಳಷ್ಟು ಅನ್ಯಾಯವಾಗಿದೆ. ಇದನ್ನೆಲ್ಲ ಮತದಾರರ ಮುಂದಿಟ್ಟು ಮತ ಯಾಚಿಸುತ್ತೇನೆ ಎಂದರು.
ಯಾವುದೇ ನಾಯಕರು ತನ್ನನ್ನು ಒತ್ತಾಯಿಸಿದರೂ, ತಾನು ಮತ್ತೆ ಬಿಜೆಪಿಯೊಂದಿಗೆ ಸೇರುವುದಿಲ್ಲ. ತನ್ನನ್ನು ಎಲ್ಲ ರೀತಿಯಿಂದಲೂ ಬಳಸಿಕೊಂಡು ರಾಜಕೀಯವಾಗಿ ಮುಗಿಸಲು ಯತ್ನ ನಡೆದಿತ್ತು. ಇದರಿಂದ ತಾನು ತೀವ್ರವಾಗಿ ನೊಂದಿದ್ದೇನೆ. ಇನ್ನು ಅತ್ತ ಹೋಗುವುದಿಲ್ಲ ಎಂದು ಶ್ರೀರಾಮುಲು ಹೇಳಿದರು. ಪಕ್ಷ ಕಟ್ಟುವ ವೇಳೆ ತಮ್ಮ ಸಹಕಾರ ಪಡೆದ ಬಿಜೆಪಿ ನಾಯಕರು, ತಮಗೆ ಕಷ್ಟ ಬಂದಾಗ ತಮ್ಮನ್ನು ದೂರ ತಳ್ಳಿ, ರಾಜಕೀಯವಾಗಿ ನಮ್ಮನ್ನು ಮುಗಿಸಲು ಯತ್ನಿಸಿದ್ದು, ಅತೀವ ನೋವು ತಂದಿದೆ. ಜೊತೆಗೆ ತನ್ನ ಬೆಂಬಲಿಗರು ಕೂಡಾ ಬಿಜೆಪಿಗೆ ಹೋಗುವುದು ಬೇಡ ಎಂದು ಹೇಳಿದ್ದು, ಬಿಜೆಪಿಗೆ ಹೋಗುವ ಇರಾದೆ ತನ್ನ ಮುಂದಿಲ್ಲ ಎಂದರು.
Please follow and like us:

Leave a Reply