ನಗರಸಭೆಗೆ ಮುತ್ತಿಗೆ ಹಾಕಿ ಕರವೇ ಪ್ರತಿಭಟನೆ

 ಕೊಪ್ಪಳ ನಗರದ ೩೧ ನೇ ವಾರ್ಡನ ಸಾರ್ವಜನಿಕ ಮಹಿಳಾ ಶೌಚಾಲಯ, ತ್ಯಾಜ್ಯ ಶೇಖರಣಾ ಗುಂಡಿಯನ್ನು ಖಾಲಿ ಮಾಡಬೇಕು, ಹಾಗೂ ಎಲ್ಲಾ ವಾರ್ಡನಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರು, ರಸ್ತೆ ದುರಸ್ಥೀಕರಣ ಶೀಘ್ರವೇ ಪ್ರಾರಂಭಿಸಬೇಕೆಂದು.    
  ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ ಜಿಲ್ಲಾ ವಿದ್ಯಾರ್ಥಿ ಘಟಕ ಕನ್ನಡ ನೆಲ, ಜಲ, ಗಡಿ ಭಾಷೆಗೆ ಧಕ್ಕೆಯಾದಾಗ ಹೋರಾಟ ಮಾಡುತ್ತಿದ್ದು, ನಗರ ಸ್ವಚ್ಛತೆ ಸಲುವಾಗಿ ಹಾಗೂ ಅಭಿವೃದ್ದಿಗೋಸ್ಕರ ಅನೇಕ ಹೋರಾಟ ಮಾಡುತ್ತಾ ಬಂದಿದೆ. ಈಗ ೩೧ ನೇ ವಾರ್ಡಿನ ಸಾರ್ವಜನಿಕ  ಮಹಿಳಾ ಶೌಚಾಲಯ ೭ ದಿನಗಳಿಂದ ತ್ಯಾಜ ಶೇಕರಿಸಿರುವ ಗುಂಡಿ ತುಂಬಿ ಹರಿಯುತ್ತಿರುವುದರಿಂದ ಸುತ್ತ ಮುತ್ತಲಿನ ಪರಿಸರ ಮಲಿನವಾಗಿದೆ. ಇದರಿಂದ ಸಾರ್ವಜನಿಕರಿಗೆ ದುರ್ವಾಸನೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವ ಸಂಬವವಿದೆ ಈಗಾಗಲೇ ನಗರ ಸಭೆಯ ಗಮನಕ್ಕೆ ತಂದಿದ್ದು ತ್ಯಾಜ್ಯ ಶೇಕರಿಸಿದ ಗುಂಡಿಯನ್ನು ಖಾಲಿ ಮಾಡದ ನಗರಸಭೆಯ ಕಾರ್ಯ ವೈಖರಿಯನ್ನು ಕರವೇ ಬಲವಾಗಿ ಖಂಡಿಸುತ್ತದೆ. ಈ ಶೌಚಾಲಯವು ೧೩,೧೪,೩೦ ಮತ್ತು ೩೧ ಈ ನಾಲ್ಕು ವಾರ್ಡಿನ

ಮಧ್ಯ ಭಾಗದಲ್ಲಿರುವುದರಿಂದ ದಿನಕ್ಕೆ ೧೦೦೦ ರಿಂದ ೧೨೦೦ ಮಹಿಳೆಯರಿಗೆ ಶೌಚಕ್ಕೆ ಬಹಳ ತೊಂದರೆಯಾಗಿದೆ. ಈ ಕೂಡಲೆ ಇದನ್ನು ಸ್ವಚ್ಛಗೊಳಿಸಿ ಮಹಿಳೆಯರಿಗೆ ಶೌಚಾಲಯಕ್ಕೆ ಹೋಗಲು ಅನೂಕುಲ ಮಾಡಿ ಕೊಡಬೇಕೆಂದು ಹಾಗೂ ಶೌಚಾಲಯ ಸುತ್ತಮುತ್ತಲಿನ ಮಲಿನವನ್ನು ಶುಚಿಗೊಳಿಸಬೇಕು. ಶೀಥಲಗೊಂಡಿರುವ ಗುಂಡಿಯನ್ನು ದುರಸ್ಥಿ ಪಡಿಸಬೇಕು. ಮತ್ತು ಗುಂಡಿಗೆ ಪೈಪಲನ್ ವ್ಯವಸ್ಥೆ ಮಾಡಿ ಮುಖ್ಯ ಗುಂಡಿಯೂ ತುಂಬಿದ ನಂತರ ಹೆಚ್ಚಾದ ತ್ಯಾಜ್ಯಾ ಶೇಖರಣೆ ಹೊರಹೋಗಲು ಪೈಪಲೈನ್ ವ್ಯವಸ್ಥೆ ಮಾಡಬೇಕು. ತುಂಗಭದ್ರ ನದಿಯ ನೀರು ತುಂಬಿ ಹರಿಯುತ್ತಿದ್ದರು ಕೆಲವೊಂದು ವಾರ್ಡಗಳಿಗೆ ಕುಡಿಯುವ ನೀರನ್ನು ೮, ೯ ದಿನಗಳಿಗೊಮ್ಮೆ ನೀರು ಸರಭರಾಜು ಮಾಡುತ್ತಿರುವುದು ಖೇಧಕರ ಸಂಗತಿ ಸ್ಲಂ ನಿವಾಸಿಗಳಾಗಿರುವ ದೇವರಾಜ ಅರಸ ಕಲೋನಿಯವರಿಗೆ ೪ ದಿನಕ್ಕೋಮ್ಮೆ ನೀರು ಸರಬರಾಜು ಮಾಡಬೇಕು ಅದೇ ರೀತಿ ಮಳೆಗಾಲ ಆಗಿರುವುದರಿಂದ ನಗರದಲ್ಲಿ ಎಲ್ಲಾ ವಾರ್ಡಗಳ ಒಳ ರಸ್ತೆ, ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತೆಗ್ಗು ದಿನ್ನೆಗಳಾಗಿ ಮಾರ್ಪಟಿವೆ. ಈ ಕೂಡಲೆ ಇವುಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ. ಮುಂದಿನ ದಿನಗಳಲ್ಲಿ ಕರವೇ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಇದಕ್ಕೆ ನಗರ ಸಭೆ ನೇರ ಹೊಣೆಯಾಗುತ್ತದೆ ಎಂದು  ಕರವೇ ಎಚ್ಚರಿಸಿದೆ.

ಈ ಸಂದರ್ಭದಲ್ಲಿ  ಪ್ರವೀಣ ಕವಲೂರು ತಾಲೂಕ ಅಧ್ಯಕ್ಷರು ವಿ.ಘ, ಪೃಥ್ವಿರಾಜ ಚಾಕಲಬ್ಬಿ ತಾ.ಪ್ರ.ಕಾರ್ಯದರ್ಶಿ. ಜೀವನಕುಮಾರ ಹಿರೇಮಠ ಜಿ.ಪ್ರ. ಕಾರ್ಯದರ್ಶಿ, ಶಿವಾನಂದ ಬಿಡನಾಳ ನಗರಸಭೆ ಉಪಾಧ್ಯಕ್ಷರು, ಗವಿಸಿದ್ದಪ್ಪ ಹಂಡಿ, ಮಂಜುನಾಥ ಬೆಲ್ಲದ, ಮಲ್ಲಪ್ಪ ವಾರದ್, ಮಹಮ್ಮದ್ ಜುಬೇರ್, ರಮೇಶ ಜಮೇದಾರ, ಪ್ರತಾಪ ಬೆಲ್ಲದ, ಶಿವಕುಮಾರ.ಎಸ್.ಕೆ. ಬಸು ಬೇಲ್ಲದ, ಮಂಜುನಾಥ ಕಬ್ಬೇರ, ಶಿವಮ್ಮ ಬಡಿಗೇರ, ಸಾವಿತ್ರಿ, ಮಂಜುಳಾ ಅಬ್ಬಿಗೇರಿ ಇನ್ನೂ ಅನೇಕ ಕರ್ನಾಟಕ ರಕ್ಷಣಾ ವೆದಿಕೆ, ಕೊಪ್ಪಳ ವಿದ್ಯಾರ್ಥಿ ಘಟಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
Please follow and like us:
error