ಜನಪದ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳಸಬೇಕಿದೆ – ಜೀವನ್‌ಸಾಬ ವಾಲಿಕಾರ

ಯಲಬುರ್ಗಾ: ದೃಶ್ಯ ಮಾಧ್ಯಮಗಳಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡು ಜನಪದ ಕಲೆಯನ್ನು ಪ್ರತಿಯೊಬ್ಬರು ಉಳಿಸಿ, ಬೆಳಸಬೇಕಿದೆ ಎಂದು ಶಿಕ್ಷಕ, ಹಾಗೂ ಜನಪದ ಕಲಾವಿದ ಜೀವನ್‌ಸಾಬ ವಾಲಿಕಾರ(ಬಿನ್ನಾಳ) ಹೇಳಿದರು. 
ತಾಲೂಕಿನ ಕುದುರಿಮೋತಿಯಲ್ಲಿ ಹಮ್ಮಿಕೊಂಡಿದ್ದ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂರ್ಕೀಣ ಗೋಷ್ಠಿಯಲ್ಲಿ ’ಜನಪದ ಸಾಹಿತ್ಯದಲ್ಲಿ ಗ್ರಾಮೀಣ ಸೊಗಡು’ ಎಂಬ ವಿಯಷ ಕುರಿತು ಮಾತನಾಡಿದ ಅವರು. ರೈತಾಪಿ ವರ್ಗ ಹಿಂದಿನ ಕಾಲದಲ್ಲಿ ಕೋಳಿ ಕೂಗುವ ಮುನ್ನವೇ ಜಮೀಗೆ ತೆರಳಿ ಒಕ್ಕಣ ಮಾಡುವ ಸಂದರ್ಭದಲ್ಲಿ ಹಾಡುತ್ತಿದ್ದ ರಾಶಿ ಪದ, ಹಂತಿ ಪದ, ಗೀಗೀ ಪದಗಳು ಕಣ್ಮರೆಯಾಗುತ್ತಿವೆ. ಇನ್ನೂ ತಾಯಂದಿರುವ ಮನೆಯಲ್ಲಿ ದವಸ ಧಾನ್ಯಗಳ್ನು ಬಿಸು, ಕುಟ್ಟುವಾಗ ಹಾಡುತ್ತಿರುವ ಹಾಡುಗಳು ಧಾರವಾಹಿ ಹೊಡೆತಕ್ಕೆ ಮಾಯವಾಗುತ್ತಲಿವೆ. ಗ್ರಾಮೀಣ ಪ್ರದೇಶದಲ್ಲಿ ಇನ್ನು ಅಲ್ಪ-ಸ್ವಲ್ಪ ಜೀವಂತವಿರುವ ಜನಪದ ಸಾಹಿತ್ಯ, ಕಲೆಯನ್ನು ಉಳಿಸಿ, ಪೋಷಿಸಬೇಕು ಎಂದರು. 
 ಸಂಕೀರ್ಣ ಗೋಷ್ಠಿಯಲ್ಲಿ ನೆರದಿದ್ದ ಸಭೀಕರ ಮೇಲೆ ಜನಪದ ಸಾಹಿತ್ಯವನ್ನು ಕಟ್ಟಿ, ಪದ ಹಾಡಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನು ಕೆಲ ಕಾಲ ಬಿನ್ನಾಳ ರಂಜಿಸಿದರು. 
ಸಾಹಿತಿ ವೀರಣ್ಣ ವಾಲಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನಟರಾಜ ಸೋನಾರ ಆಶಯ ನುಡಿ ಹಾಡಿದರು. ಉಪನ್ಯಾಸಕ ಗಂಗಾಧರ ಕುರಟ್ಟಿ ಉಪನ್ಯಾಸ ನೀಡಿದರು. 
ಸಮ್ಮೇಳನಾಧ್ಯಕ್ಷ ಈರಪ್ಪ ಎಂ.ಕಂಬಳಿ, ನಿವೃತ್ತ ಪ್ರಾಚಾರ್ಯ ಜಿ.ಎಂ.ನಿಂಗೋಜಿ, ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ, ರುದ್ರಪ್ಪ ಭಂಡಾರಿ, ಪಾಪುಸಾಬ ಮಕಾಂದರ, ಸೇರಿ ಇತರರಿದ್ದರು. 
Please follow and like us:
error