fbpx

ಮುಂಬರುವ ದಿನಗಳಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡರಾಷ್ಟ್ರವಾಗಲಿದೆ: ಸಂಸದ ಸಂಗಣ್ಣ ಕರಡಿ

ಕೊಪ್ಪಳ, ಜ.೨೬ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಢಳಿತ ವೈಖರಿ ಗಮನಿಸಿದರೆ ಗಜತ್ತಿನಲ್ಲಿಯೇ ಭಾರತವು ಎರಡನೇ ಅತಿ ದೊಡ್ಡ ರಾಷ್ಟ್ರವಾಗಿ ಬೆಳೆಯಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಸೋಮವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ೬೬ ನೇ ಗಣಾರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡು ೧೦ ತಿಂಗಳಲ್ಲಿ ಜಗತ್ತೆ ನಿಬ್ಬೇರಗಾಗುವಂತೆ ಆಢಳಿತ ನಡೆಸುತ್ತಿದ್ದಾರೆ. ಇಂದೆಂದು ಕಾಣದಂತಹ ಆರ್ಥಿಕ ಪರಸ್ಥಿತಿ ಸುಧಾರಿಸಿ ಉತ್ತಮ ಆಢಳಿತ ನೀಡಿ ಇತರೇ ರಾಷ್ಟ್ರಗಳಿಗೆ ಮಾದರಿಯಾಗಿದ್ದಾರೆ. ಜಗತ್ತಿನ ರಾಷ್ಟ್ರಗಳನ್ನು ತನ್ನ ಕೈ ಹಿಡಿತದಲ್ಲಿಟ್ಟುಕೊಂಡ ಅಮೇರಿಕವು ಇಂದು ಭಾರತದ ನಡೆಗೆ ತಲೆ ತಗ್ಗಿಸಿದೆ ಎಂದರು. ವಿಶ್ವದ ಎಲ್ಲಾ ದೇಶಗಳ ಇತಿಹಾಸವನ್ನು ಅವಲೋಕಿಸಿದಾಗ ಭಾರತದ ಚರಿತ್ರೆ ವಿಭಿನ್ನ ಹಾಗೂ ಅಧ್ವೀತಿಯವಾಗಿ ಅವರ್ಣಿಯವಾಗಿ ಗೋಚರಿಸುತ್ತಿದೆ ಎಂದು ಹೇಳಿದರು. ಈಗಾಗಲೇ ರಾಷ್ಟ್ರವು ಆರ್ಥಿಕವಾಗಿ ಮುಂದುವರೆದುದುರೊಂದಿಗೆ ವೈಜ್ಞಾನಿಕವಾಗಿ, ಬಾಹಾಕಾಶದಲ್ಲಿ ತನ್ನದೇ ಆದ ಪಾರುಪತ್ಯ ಮೆರೆಯುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಸಂಗಪ್ಪ ವಕ್ಕಳದ, ಮಲ್ಲಿಕಾರ್ಜುನ ರಾಂಪುರಿ, ಗವಿಸಿದ್ದಪ್ಪ ಕಂದಾರಿ, ರಾಜು ಬಾಕಳೆ, ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಕಳಕಪ್ಪ ಜಾದವ್, ಮಂಜುನಾಥ ಅಂಗಡಿ, ಸದಾಶಿವಯ್ಯ ಹಿರೇಮಠ, ಡಾ. ಕೊಟ್ರೇಶ ಶೆಡ್ಮಿ, ರಾಘವೇಂದ್ರ ಪಾನಘಂಟಿ, ಪೀರಾಹುಸೇನ ಹೊಸಳ್ಳಿ, ಹಾಲೇಶ ಕಂದಾರಿ, ಪಕ್ಷದ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ಉಮೇಶ ಕುರಡಗಿ, ಮರಿಶಾಂತವೀರ ಸ್ವಾಮಿ, ಡಿಶ್ ಬಸವರಾಜ, ವಿಜಯಾ ಹಿರೇಮಠ, ಶಾಮಲಾ ಕೋನ್ನಾಪುರ, ಗಿವಿಸಿದ್ದಪ್ಪ ಚಿನ್ನೂರ, ಪ್ರಾಣೇಶ ಮಹೇಂದ್ರಕರ್, ಸುವರ್ಣ ನಿರಲಗಿ, ಶೋಭಾ ನಗರಿ, ಹೇಮಲತಾ ನಾಯಕ, ಮಾರುತಿ ಕಾರಟಗಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!