ಪ್ರತಿಭಾವಂತ ಕ್ರೀಡಾಪಟುಗಳಿಗೆ ಯಾವತ್ತೂ ಪ್ರೋತ್ಸಾಹ,ಸಹಾಯ – ಕೆ.ಎಂ.ಸಯ್ಯದ್


ಕೊಪ್ಪಳ : ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೇನೂ ಕೊರತೆಯಿಲ್ಲ . ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅಗತ್ಯವಿದೆ. ಕೊಪ್ಪಳದಲ್ಲಿ ನಡೆದಿರುವ ರಾಜ್ಯಮಟ್ಟದ ಈ ಕ್ರಿಕೆಟ್ ಟೂರ್ನಮೆಂಟ್ ನಿಂದ ಹೊಸ ಯುವ ಕ್ರೀಡಾಪುಟಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಿದೆ.ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವ ಸಂಘಟಕರು ಅಭಿನಂದನಾರ್ಹರು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಬೇಕಾದ ಎಲ್ಲ ರೀತಿಯ ಸಹಾಯ, ಸಹಕಾರವನ್ನು ನೀಡುವೆ ಎಂದು ಸಯ್ಯದ್ ಪೌಂಡೇಷನ್ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಹೇಳಿದರು. ಅವರು ನಗರದ ಸಾರ್ವಜನಿಕ ಮೈದಾನದಲ್ಲಿ ಕೆಪಿಎಲ್ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟಿನ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಮುಬರುವ ದಿನಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹಾಗೂ ಈ ರೀತಿಯ ಟೂರ್ನಮೆಂಟ್ ಗಳಿಗೆ ತಮ್ಮ ಪೌಂಡೇಶನ್ ನಿಂದ ಸಹಾಯ ಸಹಕಾರ ಎಂದೆಂದಿಗೂ ಇರುತ್ತದೆ ಎಂದರು.
ನಗರಸಭೆಯ ಅಧ್ಯಕ್ಷರಾದ ಸುರೇಶ ದೇಸಾಯಿ, ಸದಸ್ಯ ಅಮ್ಜದ್ ಪಟೇಲ ಬಹುಮಾನ ವಿತರಿಸಿ ಮಾತನಾಡಿದರು. ಕೊಪ್ಪಳದ ಕೊಪ್ಪಳ ಸೂಪರ್ ಕಿಂಗ್ ತಂಡಟ್ರೋಪಿಯನ್ನು ಗೆದ್ದುಕೊಂಡಿತು. ಗಂಗಾವತಿಯ ಗಂಗಾವತಿ ಎಲೆವನ್ ತಂಡ್ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ವೇದಿಕೆಯ ಮೇಲೆ ಮಲ್ಲಣ್ಣ ಬತ್ತಿ ಹಾಗೂ ಇತರರು ಉಪಸ್ಥಿತರಿದ್ದರು.ಕೆಪಿಎಲ್ ಟೂರ್ನಮೆಂಟ್ ಅಯೋಜಕರಾದ ಬಡ್ಡು, ಅದಿಲ್ ಪಟೇಲ್ ಹಾಗೂ ಅವರ ಸಂಗಡಿಗರು ಕ್ರಿಕೆಟ್ ತಂಡಗಳವರು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.
Please follow and like us:
error