You are here
Home > Koppal News > ಗಂಗಾವತಿ ವೀರ ಅಭಿಮನ್ಯು ಕಾಳಗ ಬಯಲಾಟ ತರಬೇತಿ ಆರಂಭ.

ಗಂಗಾವತಿ ವೀರ ಅಭಿಮನ್ಯು ಕಾಳಗ ಬಯಲಾಟ ತರಬೇತಿ ಆರಂಭ.

ಗಂಗಾವತಿ-20- ಸುಮಾರು ೬ ದಶಕಗಳಿಂದಲೂ ಬಯಲಾಟ ಮತ್ತು  ಪೌರಾಣಿಕ,  ಸಾಮಾಜಿಕ ನಾಟಕ ಪ್ರದರ್ಶಿಸುತ್ತಾ ಬಂದಿರುವ ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಭಾನುವಾರ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ೨೦೧೬ ರ ಬಸವ ಜಯಂತಿಯಂದು ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.ಬಳಿಕ ವೀರ ಅಭಿಮನ್ಯು ಕಾಳಗ ಬಯಲಾಟದ ಪುಸ್ತಕ ಪೂಜೆ ಮಾಡುವ ಮೂಲಕ ತರಬೇತಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ  ವೇದಿಕೆಯ ಗೌರವಧ್ಯಕ್ಷರಾದ ಮಾರುತಿ ಐಲಿ ಮಾತನಾಡಿ, ಹಿರಿಯರ ಕಾಲದಿಂದಲೂ ಪ್ರದರ್ಶಿಸುತ್ತಾ ಬಂದಿರುವ ಜಾನಪದ ಕಲೆ ಬಯಲಾಟ ಉತ್ತರ ಕರ್ನಾಟಕ ಭಾಗದ ಗಂಡು ಕಲೆಯಾಗಿದ್ದು, ಈ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಜವಬ್ದಾರಿ ನಮ್ಮಲ್ಲರ ಮೇಲಿದೆ ಯುವಕರು ಹೆಚ್ಚು ಆಸಕ್ತಿ ವಹಿಸಬೇಕೆಂದರು. ಅಧ್ಯಕ್ಷ ರಮೇಶ್ ಶೆಡ್ಡಿ ಮಾತನಾಡಿ, ಯಕ್ಷಗಾನದಂತೆ ಪ್ರಸಿದ್ದಿ ಪಡೆಯಬೇಕಿದ್ದ ಬಯಲಾಟ ಪ್ರೋತ್ಸಾಹದ ಕೊರತೆಯಿಂದ ಜನಪ್ರೀಯತೆ ಕಳೆದುಕೊಳ್ಳುತ್ತಿದೆ
ಎಂದು ಹೇಳಿದರು.  ಉಪಾಧ್ಯಕ್ಷರಾದ ಮೈಲಾರಪ್ಪ ಶ್ಯಾವಿ ಮಾತನಾಡಿ, ದೂರದರ್ಶನ ಟಿವಿ
ಮಾದ್ಯಮದ ಹಾವಳಿಯಿಂದ ಜಾನಪದ ಕಲೆ ಸೊರಗುತ್ತಿದ್ದು ಬಯಲಾಟ ಪ್ರದರ್ಶನಕ್ಕೆ ವೇದಿಕೆ
ಸಿದ್ದಪಡಿಸಿರುವುದು ಸ್ವಾಗತರ್ಹ ಎಂದರು. ಖಜಾಂಚಿ ಹಾಗೂ ಕಲಾವಿದ ಶಿರವಾರ ವಿರುಪಾಕ್ಷಪ್ಪ
ಮಾತನಾಡಿ, ದುಬಾರಿ ವೆಚ್ಚ ಬಯಲಾಟ ಪ್ರದರ್ಶನಕ್ಕೆ ಅಡ್ಡಿಯಾಗಿದೆ, ದಾನಿಗಳು ಹೆಚ್ಚು
ಹೆಚ್ಚು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕಿದ್ದು ಇದಕ್ಕೆ ಪೂರಕ ವಾತವರಣ
ನಿರ್ಮಿಸಬೇಕೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಅನ್ಮೋಲ್
ಟೈಮ್ಸ್ ಕನ್ನಡ ದಿನಪತ್ರಿಕೆಯ ಉಪ ಸಂಪಾದಕ ನಾಗರಾಜ್ ಇಂಗಳಗಿ ಮಾತನಾಡಿ, ಬಯಲಾಟಕ್ಕೆ
ದುಡಿಯುವ ಮನಸ್ಸುಗಳಿದ್ದು, ದುಡಿಸಿಕೊಳ್ಳುವ ಧಣಿಗಳು ಇಲ್ಲವಾಗಿದ್ದಾರೆ, ಬಯಲಾಟದ
ಪುಸ್ತಕಗಳ ಮುದ್ರಣಕ್ಕೆ ಸರಕಾರ ಮನಸ್ಸು ಮಾಡಬೇಕಿದೆ, ಜನಪ್ರತಿನಿಧಿಗಳ ಇಚ್ಛಾಸಕ್ತಿಯ
ಕೊರತೆ ಇದಕ್ಕೆ ಕಾರಣವಾಗಿದೆ. ಗಂಗಾವತಿಯಲ್ಲೊಂದು ಉತ್ತಮ ರಂಗ ಮಂದಿರ ಇಲ್ಲದಿರುವುದು
ಇದಕ್ಕೆ ನಿದರ್ಶನ. ಈ ನಿಟ್ಟಿನಲ್ಲಿ ಕುರುಹಿನ ಶೆಟ್ಟಿ ಸಮಾಜದ ಕಾರ್ಯ ಶ್ಲಾಘನೀಯ ಎಂದು
ಪ್ರಶಂಸಿದರು. ನಂತರ ವೀರ ಅಭಿಮನ್ಯು ಕಾಳಗ ಬಯಲಾಟದ ಪಾತ್ರಗಳನ್ನು ಹಂಚಿಕೆ ಮಾಡಲಾಯಿತು.

Leave a Reply

Top