You are here
Home > Koppal News > ಬಸವಣ್ಣ ಒಬ್ಬ ವಿಚಾರವಾದಿ ಕ್ರಾಂತಿ ಪುರುಷ – ಪವಾಡ ಪುರಷನಲ್ಲ-ಡಾ|| ಸಂಗನಬಸವ ಮಹಾಸ್ವಾಮಿ.

ಬಸವಣ್ಣ ಒಬ್ಬ ವಿಚಾರವಾದಿ ಕ್ರಾಂತಿ ಪುರುಷ – ಪವಾಡ ಪುರಷನಲ್ಲ-ಡಾ|| ಸಂಗನಬಸವ ಮಹಾಸ್ವಾಮಿ.

ಹೊಸಪೇಟೆ- ಬಸವಣ್ಣ ಒಬ್ಬ ವಿಚಾರವಾದಿ ಕ್ರಾಂತಿ ಪುರುಷ ಹೊರತು ಪವಾಡ ಪುರಷನಲ್ಲ ಎಂದು ಡಾ|| ಸಂಗನಬಸವ ಮಹಾಸ್ವಾಮಿಗಳು ನುಡಿದರು. ಅವರು ನಗರದ ಜಗದ್ಗುರು ಕೊಟ್ಟೂರುಸ್ವಾಮಿ ಮಠದಲ್ಲಿಂದು ಬಸವಜಯಂತಿ   ನಿಮಿತ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾ ಹದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಬಸವಣ್ಣನವರು ಮೂಲಭೂತ ಸೌಕರ್ಯ ಸಾಮಾಜಿಕ ನ್ಯಾಯದ ಕಳಕಳಿಯುಳ್ಳವ ರಾಗಿದ್ದು ಶೋಷಣೆಯ ವಿರೋಧಿಯಾಗಿದ್ದರು, ಸರ್ವ ರಲ್ಲೂ ಸಮಾನತೆ, ಜಾತ್ಯಾತೀತ ಭಾವನೆ, ಕಾಯಕದಿಂದ ಗಳಿಸಿದ್ದನ್ನು ದಾಸೋಹಕ್ಕೆ ವಿನಿಯೋಗವಾಗಬೇಕು ಎನ್ನುವ ಅವರ ವಿಚಾರಧಾರೆ ಸಾರ್ವಕಾಲಿಕ ಎಂದರು. ಅವರು ಮುಂದು ವರೆದು ಸರ್ಕಾರವು  ನಡೆಸುತ್ತಿ ರುವ ಜಾತಿ ಗಣತಿಯು ಜಾತ್ಯಾತೀತ ಭಾವನೆಗೆ ಧಕ್ಕೆ ತರಲಿದ್ದು, ಜಾತಿ ಜಾತಿಗಳ ಮಧ್ಯೆ ವೈಮನಸ್ಸನ್ನು ಮೂಡಿಸುವ ಹುನ್ನಾರ ಅಡಗಿದೆ ಹೊರತು ಈ ಗಣತಿಯಿಂದ  ಉನ್ನತ ಜಾತಿ ಗಳಿಗೆ ಯಾವುದೇ ರೀತಿಯ ವಿಶೇಷ ಮೀಸಲಾತಿಗಳು ಸಿಗು ವುದಿಲ್ಲ ಇದರಿಂದ ಜಾತ್ಯಾತೀತ ಭಾವನೆಯನ್ನು ತೊಲಗಿಸುವ ಬದಲಾಗಿ ಸ್ವತಃ ಸರಕಾರವೇ ಜಾತಿ-ಉಪಜಾತಿ ಗಣತಿಗೆ ನಿಂತಿರುವುದು ದೇಶದ ಸಾಮರಸ್ಯದಲ್ಲಿ ಒಡಕು ಮೂಡುವ ಸಂಭವವಿರುವುದು ಎಂದು ಖೇಧ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಯಾಗಿ ಪಾಲ್ಗೊಂಡಿದ್ದ ಡಿವೈಎಸ್ಪಿ ಮಾಳಗಿ ಮಾತ ನಾಡಿ ಗುಡಿ-ಗುಂಡಾರದ ಕಲ್ಪನೆಯನ್ನು ಬಿಟ್ಟು ಶೋಷಣೆಯ ವಿರುದ್ದ ಧ್ವನಿ ಎತ್ತಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಬಸವಾಧಿ ಪ್ರಮಥರ ಚಿಂತನೆ ಸರ್ವ ಶ್ರೇಷ್ಟ, ಬಸವಣ್ಣ ಒಬ್ಬ ಕ್ರಾಂತಿ ಪುರುಷನಾಗಿದ್ದು ಸಮಾಜಕ್ಕೆ ಹೊಸ ದಿಕ್ಕನ್ನು ತೋರಿದವರು, ಎಲ್ಲಾ ಧರ್ಮದವರು ಬಸವಣ್ಣನವರ ತತ್ವ ಸಿದ್ಧಾಂತ ಗಳನ್ನು ಅಳವಡಿಸಿಕೊಂಡಿದ್ದಾರೆ ಪ್ರಸಕ್ತ ಸಮಾಜದಲ್ಲಿ ಬಸವಣ್ಣ ನವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳು ವುದು ಅತಿಮುಖ್ಯವಾಗಿದ್ದು ವಚನ ಸಾಹಿತ್ಯವನ್ನು ಪ್ರತಿ ಯೊಬ್ಬರಿಗೂ ತಲುಪಿಸುವ ಕಾರ್ಯವಾಗಬೇಕು ಎಂದು ಆಶಿಸಿದರು.ಬಸವಜಯಂತಿಯ ಶುಭ ಅಭಿಜನ್ ಲಗ್ನದಲ್ಲಿ ಸುಮಾರು ೧೦ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಟುಗಳಿಗೆ ಲಿಂಗಧೀಕ್ಷೆಯನ್ನು ಈ ಶುಭ ಸಂದರ್ಭದಲ್ಲಿ ನೆರವೇರಿಸಲಾಯಿತು. ಗರಗನಾಗಲಾಪೂರದ ಶ್ರೀ ಮರಿಮಹಾಂತ ಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಮಾರಂಭ ದಲ್ಲಿ ಶಾಸಕ ಆನಂದ್ ಸಿಂಗ್‌ರ ಸಂದೇಶ ಪತ್ರವನ್ನು ಸಂದೀಪ್ ಸಿಂಗ್ ವಾಚಿಸಿ ದರು, ಅ.ಭಾ.ವೀ.ಮ.ಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಕೆ.ಕೊಟ್ರೇಶ್, ಕೆ.ಚಂದ್ರ ಶೇಖರಪ್ಪ, ಎಚ್.ವ್ಹಿ.ಶರಣ ಸ್ವಾಮಿ, ಸಿದ್ದರಾಜುಗೌಡ್ರು, ಜೀರ ವೀರೇಶಪ್ಪ, ದೀಪಕ್ ಸಿಂಗ್, ಗುಂಡಿ ರಾಘವೇಂದ್ರ,  ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್, ಕಾಕುಬಾಳು ಜಡೆಸಿದ್ದ ಶಿವಯೋಗಿ ಮಠದ ಷಡಕ್ಷರಯ್ಯ ಸ್ವಾಮಿ, ಭೂಪಾಳ ರಾಘವೇಂದ್ರ ಶೆಟ್ಟಿ, ಹೊನಗಿ ನಾರಣಪ್ಪ, ತಿಪ್ಪಾರೆಡ್ಡಿ, ಸೊಂಡೂರು ತಿಮ್ಮಪ್ಪ, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ, ಅಕ್ಕನ ಬಳಗದ ಅಧ್ಯಕ್ಷೆ ಕೋರಿಶೆಟ್ಟಿ ರತ್ನಮ್ಮ ಹಾಗೂ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಮೆರವಣಿಗೆ : ನಗರದ ಡ್ಯಾಂ ರಸ್ತೆಯ ಶ್ರೀ ಸಣ್ಣಕ್ಕಿ ವೀರ ಭದ್ರೇಶ್ವರಸ್ವಾಮಿ ದೇವಸ್ಥಾನ ದಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿಯ ಮೆರವಣಿಗೆಯು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿತ್ತು, ಈ ಸಂದರ್ಭ ದಲ್ಲಿ ಅಕ್ಕನ ಬಳಗದ ಸದಸ್ಯರು, ಹಸೆ ಮಣೆಯೇರಿದ ನವ ವಧು-ವರರು, ಸುಮಂಗಲಿ ಯರು, ಸಮಾಜದ ಹಿರಿಯ ಮುಖಂಡರು ಪಾಲ್ಗೊಂಡಿ ದ್ದರು,  ಗರಗ ನಾಗಲಾಪುರ, ಡಣಾಪುರ, ಮರಿಯಮ್ಮನಹಳ್ಳಿ, ದೇವಲಾಪುರ, ಸೋಮ ಸಮುದ್ರ, ಚಿಲಕನಹಟ್ಟಿ, ಹಾಗೂ ಇತರ ಗ್ರಾಮಗಳ ಭಜನಾ ಮಂಡಳಿಯವರು, ಡೊಳ್ಳು, ನಂದಿಕೋಲು ಕುಣಿತ ಜನಮನ ಸೆಳೆಯಿತು.  ಹಾದಿ ಉದ್ದಕ್ಕೂ ಧ್ವನಿ ಸುರಳಿಯಿಂದ ಹೊರ ಹೊಮ್ಮುತ್ತಿದ್ದ ಬಸವಣ್ಣನವರ ವಚನಗಳು ಮೆರವಣಿಗೆಯಲ್ಲಿ  ಭಕ್ತಿ ಪರವಶತೆಯನ್ನು ಮೂಡಿಸಿತ್ತು. ಪಿಹೆಚ್‌ಡಿ ಪದವಿ ಪುರಸ್ಕೃತ ಡಾ.ಗುಂಡಿ ಮಾರುತಿ ಇವರನ್ನು ಸನ್ಮಾನಿಸಲಾಯಿತು.ಬಸವ ಜಯಂತಿ ಯಂಗವಾಗಿ ಏರ್ಪಡಿಸಿದ್ದ ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಿತರಿಸಲಾಯಿತು.ಆಕಾಶವಾಣಿ ಕಲಾ ವಿದ ವಾಮದೇವ ಅಂಗಡಿ ಮತ್ತು ಸಂಗಡಿಗರು ಹಾಗೂ ಅಕ್ಕನ ಬಳಗದ  ಅನ್ನ ಪೂರ್ಣ, ಮೇಘನಾ ಹಾಗೂ ಇತರರು ವಚನ ಸಂಗೀತ ಸೇವೆ ಸಲ್ಲಿಸಿದರು. ಶರಣಯ್ಯ ಚರೇದ ನಿರ್ವಹಿಸಿದರು.

Leave a Reply

Top