ಭಾಗ್ಯನಗರದ ಸರಕಾರಿ ಸಂಯುಕ್ತ ಪದವಿ ಪೂರ್ವಕಾಲೇಜಿಗೆ ವಿದಾನ ಪರಿಷತ್ತ ಸದಸ್ಯ ಅಮರನಾಥ ಪಾಟೀಲ ಭೇಟಿ.

ಕೊಪ್ಪಳ-23- ನಗರದ ಭಾಗ್ಯನಗರದ ಸರಕಾರಿ ಸಂಯುಕ್ತ ಪದವಿ ಪೂರ್ವಕಾಲೇಜಿಗೆ ವಿದಾನ ಪರಿಷತ್ತ ಸದಸ್ಯ ಅಮರನಾಥ ಪಾಟೀಲ ಭೇಟಿನೀಡಿ ಶಾಲಾ ಶಿಕ್ಷಕರೊಂದಿಗೆ ಶಾಲಾ ಶೈಕ್ಷಣಿಕ ಪ್ರಗತಿ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಿದರು.
    ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಉಪ ಪ್ರಾಚಾರ್ಯರಾದ  ಶ್ರೀಮತಿ ಸುಜಾತ, ಎಸ್.ಡಿ.ಎಮ್.ಸಿ ಅಧ್ಯಕ್ಷ ವೀರಣ್ಣ ಬಳ್ಳಾರಿ ನೀಡಿದರು. ಶಿಕ್ಷಕರ ಬೇಡಿಕೆಗಳ ಕುರಿತು ಮಾದ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರು ಸೋಮಶೇಖರ ಹರ್ತಿ ಮಾತನಾಡಿದರು. ಈ ಸಂಧರ್ಬದಲ್ಲಿ ಜಿಲ್ಲಾ ಕಾರ್ಯದರ್ಶಿ ಎಮ್.ಎಸ್. ಪಾಟೀಲ, ಉಪಾಧ್ಯಕ್ಷ ಹುಸೇನ ಪಾಷಾ ಇಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಪಾಟೀಲ, ಎಮ್. ಎಮ್. ಮುಜಗೊಂಡ, ಸುರೇಂದ್ರಗೌಡ ಪಾಟೀಲ, ವೀರಯ್ಯ ಪೂಜಾರ, ಶ್ರೀಮತಿ ಮೇರಿ, ಶ್ರೀಮತಿ ಭಾರತಿ ಅರಳಿಕಟ್ಟಿ, ಶ್ರೀಮತಿ ಶಮಷದ್ ಬೇಗಂ ಉಪಸ್ಥಿತರಿದ್ದರು.
  

Please follow and like us:
error