ಸ್ಕೌಟ್ಸ್ ಗೈಡ್ಸ್ ತಾಲೂಕ ಸಮಾವೇಶ

ಕೊಪ್ಪಳ, ಸೆ. ೬. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ತಾಲೂಕ ಸಂಸ್ಥೆಯಿಂದ ತಾಲೂಕ ಮಟ್ಟದ ಸ್ಕೌಟರ್‍ಸ್ ಮತ್ತು ಗೈಡರ್‍ಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ನಗರದ ಪದಕಿ ಲೇಔಟನಲ್ಲಿರುವ ಶಾರದಾ ಪ್ರೌಢ ಶಾಲೆಯಲ್ಲಿ ಬೆಳಿಗ್ಗೆ ೯-೩೦ ರಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ವಹಿಸುವರು. ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ತಾ. ಪಂ. ಅಧ್ಯಕ್ಷ ದೇವಪ್ಪ ಮೆಕಾಳಿ, ಪ್ರಭಾರಿ ಡಿಡಿಪಿಐ ಬಿ. ವೈ. ದಾಸರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಹೆಚ್. ಎಂ. ಸಿದ್ದರಾಮಸ್ವಾಮಿ, ಜಿಲ್ಲಾ ಗೈಡ್ಸ್ ಆಯುಕ್ತೆ ಸಂಧ್ಯಾ ಬಿ. ಮಾದಿನೂರ, ಜಿಲ್ಲಾ ಕಾರ್ಯದರ್ಶಿ ವಿ. ಕೆ. ಜಾಗಟಗೇರಿ, ಶಾರದಾ ಪ್ರೌಢ ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ಚೌಕಿಮಠ, ಜಿಲ್ಲಾ ಸಹಾಯಕ ಕಾರ್ಯದರ್ಶಿ ಜಯರಾಜ ಬೂಸದ, ಜಿಲ್ಲಾ ತರಬೇತಿ ಆಯುಕ್ತ ಎ. ಯರಣ್ಣ, ತಾಲೂಕ ಕಾರ್ಯದರ್ಶಿ ಎಂ. ಕೆ. ಹಿರೇಮಠ ಇತರರು ಭಾಗವಹಿಸುವರು. ಸಮಾವೇಶದಲ್ಲಿ ತಾಲೂಕಿನ ಎಲ್ಲಾ ಶಾಲೆಯ ಸ್ಕೌಟರ್‍ಸ್ ಮತ್ತು ಗೈಡರ್‍ಸ್ ಶಿಕ್ಷಕರು ಭಗವಹಿಸುವರು ಎಂದು  ತಿಳಿಸಿದ್ದಾರೆ.

Leave a Reply