You are here
Home > Koppal News > ಸಹಕಾರ ಸಂಘಗಳ ಚುನಾವಣೆಯನ್ನು ಪಾರದರ್ಶಕತೆಯಿಂದ ಜರುಗಿಸಲು ಕರೆ..

ಸಹಕಾರ ಸಂಘಗಳ ಚುನಾವಣೆಯನ್ನು ಪಾರದರ್ಶಕತೆಯಿಂದ ಜರುಗಿಸಲು ಕರೆ..

:-

ಸಂವಿಧಾನದ ೯೭ನೇ ತಿದ್ದುಪಡಿ ಹಿನ್ನಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಲ್ಲಿ ಅಮೂಲಾಗ್ರಹ ಬದಲಾವಣೆಯಾಗಿದ್ದು, ವಿಶೇಷವಾಗಿ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು ಬದಲಾದ ಕಾಯ್ದೆಗೆ ಅನುಗುಣವಾಗಿ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಚುನಾವಣೆ ಜರುಗಿಸುವಲ್ಲಿ ಮುಖ್ಯಕಾರ್ಯನಿರ್ವಾಹಕರು ಹಾಗೂ ಚುನಾವಣಾ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು ಇಂದಿನ ಈ ತರಬೇತಿಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಂಡು ಚುನಾವಣಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕೆಂದು ಬಿ. ಸೇತುಮಾಧವರಾವ್ ಉಪನಿಬಂಧಕರು, ಸಹಕಾರ ಸಂಘಗಳು, ಕೊಪ್ಪಳ ಇವರು ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಹಾಗೂ ಸಹಕಾರ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸದರಿ ವರ್ಷದಲ್ಲಿ ಕೊಪ್ಪಳ ಜಿಲ್ಲೆಯ ಚುನಾವಣೆ ಜರುಗುವ ಸಹಕಾರ ಸಂಘಗಳ ಚುನಾವಣೆ ಅಧಿಕಾರಿಗಳಿಗೆ ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗೆ ಚುನಾವಣಾ ಪೂರ್ವ ಸಿದ್ಧತೆ ಕುರಿತು ತರಬೇತಿ ಕಾರ್ಯಾಗಾರವನ್ನು ಟಿ.ಎ.ಪಿ.ಸಿ.ಎಂ.ಎಸ್., ಗಂಗಾವತಿ ಇವರ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ,  ಹೆಚ್. ವೀರೇಶಪ್ಪ ಮಲ್ಲಪ್ಪ ಇವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರ ಸಂಘಗಳ ಚುನಾವಣೆಗಳು ಸುಸೂತ್ರವಾಗಿ ಜರುಗುವಲ್ಲಿ ಮುಖ್ಯಕಾರ್ಯನಿರ್ವಾಹಕರು ಹಾಗೂ ಚುನಾವಣಾ ಅಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ಕಾನೂನಿಗೆ ಅನುಗುಣವಾಗಿ ನಿಶ್ಪಕ್ಷಪಾತವಾಗಿ ಚುನಾವಣೆ ಜರುಗಿಸಲು ಈ ತರಬೇತಿ ಉಪಯುಕ್ತವಾಗಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ   ಬಿ.ಎಲ್. ಕೃಷ್ಣಪ್ಪ. ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ-ಪರಿಶೋಧನಾ ಇಲಾಖೆ, ಕೊಪ್ಪಳ., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ  ಎಸ್.ಕೆ. ಸಿದ್ನೇಕೊಪ್ಪ.,  ಎಲ್. ತಿಪ್ಪೇಸ್ವಾಮಿ. ಸಹಾಯಕ ನಿಬಂಧಕರು, ಕಾಡಾ.ಮನೋಹರ. ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಗಂಗಾವತಿ ಇವರುಗಳು ಉಪಸ್ಥಿತರಿದ್ದರು. 
ನಂತರ ಜರುಗಿದ ತರಬೇತಿ ಶಿಬಿರದಲ್ಲಿ ಉಪನಿಬಂಧಕರಾದ   ಬಿ. ಸೇತುಮಾಧವರಾವ್, ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕಾರದ   ಎಸ್.ಕೆ. ಸಿದ್ನೇಕೊಪ್ಪ. ರವರುಗಳು ಬದಲಾದ ಕಾಯ್ದೆಗೆ ಅನುಗುಣವಾಗಿ ಜರುಗಿಸಬೇಕಾದ ಚುನಾವಣಾ ಪ್ರಕ್ರೀಯೆ ಕುರಿತು ಹಾಗೂ ಚುನಾವಣೆಯಲ್ಲಿ ಮುಖ್ಯಕಾರ್ಯನಿರ್ವಾಹಕರ ಹಾಗೂ ಚುನಾವಣೆ ಅಧಿಕಾರಿಗಳ ಜವಾಬ್ದಾರಿ ಕುರಿತು ಹಾಗೂ ಪದಾಧಿಕಾರಿಗಳ  ಚುನಾವಣಾ ಪ್ರಕ್ರೀಯೆ ಕುರಿತು ಉಪನ್ಯಾಸ ನೀಡಿದರು. 
ಪ್ರಾರಂಭದಲ್ಲಿ ಪ್ರಾಸ್ತವಿಕವಾಗಿ ಶರಣಬಸಪ್ಪ ಕಾಟ್ರಳ್ಳಿ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ. ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Top