fbpx

ಫೆ.೨೨ ರಂದು ಚಿಕ್ಕವಂಕಲಕುಂಟಾದ ಮಾರುತೇಶ್ವರ ರಥೋತ್ಸವ

 ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶ್ರೀ ಮಾರುತೇಶ್ವರನ ಜಾತ್ರೆಯ ಅಂಗವಾಗಿ ಫೆ.೨೨ ರಂದು ಸಾಯಂಕಾಲ ೫.೩೦ ಕ್ಕೆ ಶ್ರೀ ಮಾರುತೇಶ್ವರ ಮಹಾರಥೋತ್ಸವ ಜರುಗಲಿದೆ.
  ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಷ್ಟಮಿ ವರ್ಷದ ರಥೋತ್ಸವಕ್ಕೆ ಕೊಪ್ಪಳ ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ ಅವರು ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಯಲಬುರ್ಗಾ ತಹಶೀಲ್ದಾರ್ ಎಂ.ಬಿ.ಬಿರಾದಾರ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಶಾಸಕರಾದ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ತ ಸದಸ್ಯ ಹಾಲಪ್ಪ ಆಚಾರ, ಬಿಎಸ್‌ಆರ್ ಮುಖಂಡ ನವೀನಕುಮಾರ ಗುಳಗಣ್ಣನವರ, ಜಿ.ಪಂ,ಸದಸ್ಯ ಅರವಿಂದಗೌಡ ಎಸ್.ಪಾಟೀಲ್, ತಾ.ಪಂ.ಸದಸ್ಯರಾದ ಜಯಶ್ರೀ ರಮೇಶ ವಾಲಿಕಾರ, ನಾರಾಯಣಮ್ಮ ಶ.ಕಜ್ಜಿ, ದೇವಮ್ಮ ಕು.ವಾಲಿಕಾರ, ಹೊಳೆಗೌಡ ಮು.ಪೋ|ಪಾ|, ಪ್ರಭು ನಿಂಗಪ್ಪ ಹವಾಲ್ದಾರ, ಹಿರೇವಂಕಲಕುಂಟಾ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಗಾಳೆಪ್ಪ ಓಜನಹಳ್ಳಿ, ಉಪಾಧ್ಯಕ್ಷ ಶಂಕ್ರಗೌಡ ಯಲ್ಲನಗೌಡ ಮಾ|ಪಾ| ಸೇರಿದಂತೆ ಗ್ರಾ.ಪಂ.ಸರ್ವ ಸದಸ್ಯರು, ಗಣ್ಯರು ಪಾಲ್ಗೊಳ್ಳುವರು. 
ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಫೆ.೧೭ ರಂದು ಅಂಕುರಾರ್ಪಣೆ, ಫೆ.೧೮ ರಂದು ಮದ್ವಜಸ್ಥಂಭಕ್ಕೆ ಧ್ವಜಾರೋಹಣ, ಫೆ.೧೯ ರಂದು ಪುಷ್ಪ ಮಂಟಪಾರೋಹಣ ಉತ್ಸವ, ಫೆ.೨೦ ರಂದು ಸಿಂಹಾರೋಹಣ ಉತ್ಸವ, ಫೆ.೨೧ ರಂದು ಪಲ್ಲಕ್ಕಿ ಉತ್ಸವ, ಕಾರ್ಣಿಕೋತ್ಸವ, ಫೆ.೨೨ ರಂದು ಸಂಜೆ ೫.೩೦ ಕ್ಕೆ ಮಹಾರಥೋತ್ಸವ, ಫೆ.೨೧ ಹಾಗೂ ೨೨ ರಂದು ಬೆಳಿಗ್ಗೆ ೮.೦೦ ಕ್ಕೆ ಪವಮಾನ ಹೋಮ ಹಾಗೂ ರಥಂಗ ಹೋಮ ಅಲ್ಲದೇ ಅಂದು ಸಂಜೆ ೭.೦೦ ರಿಂದ ೯.೦೦ ರವರೆಗೆ ಜಾನಪದ, ಪವಾಡ ಬಯಲು, ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ, ಫೆ.೨೩ ರಂದು ರಾತ್ರಿ ೯.೦೦ ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರೂ ಆದ ತಹಸಿಲ್ದಾರ್ ಎಂ.ಬಿ. ಬಿರಾದಾರ್  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!