fbpx

ದೇವದಾಸಿಯಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು- ನಿಡುಮಾಮಿಡಿ ಶ್ರೀ

ಕೊಪ್ಪಳ:  ಹಲವಾರು ದಶಕಗಳಿಂದ ಸರಕಾರದಿಂದ ಅಧಿಕೃತವಾಗಿ ನಿಷೇಧಿಸಲಾಗಿದ್ದರೂ ಸಹ ಇನ್ನೂ ದೇವದಾಸಿ ಪದ್ದತಿ ಜಾರಿಯಲ್ಲಿರುವುದು ಸಂವಿಧಾನ,ಕಾನೂನು,ಧರ್ಮ ಹಾಗೂ ನೈತಿಕತೆಗೆ ವಿರುದ್ದವಾಗಿದೆ. ಇಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು.  ಹಿರೇಸಿಂದೋಗಿಯಲ್ಲಿ ಇನ್ನೂ ಇರುವುದು ಬೆಳಕಿಗೆ ಬಂದಿದೆ. ಇದು ಗುಪ್ತವಾಗಿಯೇ ನಡೆಯುತ್ತಿದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇದನ್ನು ಇನ್ನೂ ನಡೆಸಿಕೊಂಡು ಬರುತ್ತಿರುವವರು ಮತ್ತು ಇದಕ್ಕೆ ಕಾರಣಿಭೂತರಾದವರು ಅತ್ಮಶೋಧನೆ  ಮಾಡಿಕೊಳ್ಳಬೇಕು. ಅವರಿಗೆ ಪಾಪಪ್ರಜ್ಞೆ ಕಾಡಲಿ . ತಮ್ಮ ಸ್ವಾರ್ಥ ಸಾಧನೆಗಾಗಿ ಅಸಹಾಯಕ ,ಅಮಾಯಕ ದಲಿತರನ್ನು ಬಲಿಪಶು ಮಾಡಲಾಗುತ್ತಿದೆ. ಅಮಾನವೀಯವಾದಂತಹ ಇಂತಹ ಆಚರಣೆಗಳು ನಿಲ್ಲಲಿ. ಬಲಿಪಶುಗಳಾಗಿರುವಂತಹವರಿಗೆ ನೈತಿಕ ಬಲ ಕೊಡುವ ಕೆಲಸ ನಾವು ಹಾಗೂ ಸ್ಥಳೀಯರೆಲ್ಲಾ ಮಾಡೋಣ. ಆಮೂಲಕ ಅವರನ್ನು ಮುಖ್ಯ ವಾಹಿನಿಗೆ ತಂದು ಗೌರವಯುತ ಬದುಕು ನಡೆಸಲು ಅವಕಾಶ ಮಾಡಿಕೊಡೋಣ ಎಂದು  ವೀರಭಧ್ರ ಚನ್ನಮಲ್ಲ ಸ್ವಾಮಿಜಿ ನಿಡುಮಾಮಿಡಿ ಮಠ  ಬೆಂಗಳೂರು ಹೇಳಿದರು. ಅವರು ರಾಜ್ಯದ ಪ್ರಗತಿಪರ ಮಠಾದೀಶರು ಹಾಗೂ ಕೊಪ್ಪಳ ವಿವಿಧ ಪ್ರಗತಿಪರ ಸಂಘಟನೆಯವರು ಹಿರೇಸಿಂದೋಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ನಿರ್ಮೂಲನಾ ಮತ್ತು ಜನಜಾಗೃತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು. 
ಕಾರ‍್ಯಕ್ರಮದಲ್ಲಿ ಡಿ.ಎಲ್ ಪಾಟೀಲ್, ಜ್ಞಾನಪ್ರಕಾಶ ಸ್ವಾಮಿಜಿ, ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಪ್ರಭು ಚನ್ನಬಸವ ಸ್ವಾಮಿ,ಡಾ.ಮಹಾಂತ ಶಿವಾಚಾರ‍್ಯ ಸ್ವಾಮಿ, ಡಿ.ಪಿ. ವಸಂತಪ್ರೇಮಾ,ಬಸಣ್ಣ ಗೋಡಿ, ರೇವಯ್ಯ ಮಠದ, ನಿಂಗಪ್ಪ ಯತ್ನಟ್ಟಿ, ಸಾವಿತ್ರಿ ಮುಜುಂದಾರ ಮಾತನಾಡಿದರು.
    ದೇವದಾಸಿ ಪದ್ದತಿ ಹಲವಾರು ವರ್ಷಗಳಿಂದ  ಈ ಭಾಗದಲ್ಲಿ ನಡೆದುಕೊಂಡು ಬಂದಿದ್ದು ಇತ್ತೀಚೆಗೆ ಮುತ್ತುಕಟ್ಟುವ ಕಾರ‍್ಯ ನಡೆದಿದೆ ಎಂಬ ವರದಿಯ ಹಿನ್ನೆಲೆಯಲ್ಲಿ  ದೇವದಾಸಿ ಪದ್ದತಿ ನಿರ್ಮೂಲನೆ ಮಾಡಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಪಣತೊಟ್ಟ ರಾಜ್ಯದ ವಿವಿಧ ಪ್ರಗತಿಪರ ಮಠಾಧೀಶರು ಹಾಗೂ ಪ್ರಗತಿಪರ ಸಂಘಟನೆಯವರು, ಸ್ವಯಂ ಸೇವಾ ಸಂಘಟನೆಗಳು ಒಟ್ಟಾಗಿ ಜಾಗೃತಿ ಕಾರ‍್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕೂ ಮೊದಲು ಗ್ರಾಮದ ವಿವಿದೆಡೆ ಪಾದಯಾತ್ರೆ ಮಾಡುವ ಮೂಲಕ ಸ್ವಾಮಿಜಿಗಳು ಜನಜಾಗೃತಿ ಮೂಡಿಸಿದರು. 
ವೇದಿಕೆಯ ಮೇಲೆ ಶ್ರೀ ಮಾರ್ಕಂಡಮುನಿ ಸ್ವಾಮಿಗಳು, ಆದಿಜಾಂಭವ ಬೃಹನ್ಮಠ ಕೋಡಿಹಳ್ಳಿ, ಶ್ರೀ ನಂಜುಂಡ ಸ್ವಾಮಿಗಳು,ಉರಿಲಿಂಗಪೆದ್ದಿ ಸಂಸ್ಥಾನಮಠ,ಕೊಡ್ಲಾ, ಡಾ.ಶ್ರೀ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಸುಲಫಲ ಮಠ,ಶ್ರೀ  ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳವರು ಶ್ರೀ ಗುರುಸಿದ್ದೇಶ್ವರ ಬೃಹನ್ಮಠ ಗುಳೇದಗುಡ್ಡ, ಡಾ. ಶಿವಾನಂದ ಮಹಾಸ್ವಾಮಿಗಳು, ದಾಸೊಹಮಠ ಸೊನ್ನ, ಶ್ರೀ ಶಾಂತಗಂಗಾಧರ ಮಹಾಸ್ವಾಮಿಗಳು ಶ್ರೀ ಗುರುದೇವಾಶ್ರಮ, ಶ್ರೀ ಪ್ರಭುಲಿಂಗ ಸ್ವಾಮಿಗಳು ಪದ್ಮಸಾಲಿ ಗುರುಪೀಠ, ಲಿರಾಂ ಮಹಾರಾಜರು ಸೇವಾಲಾಲ ಸಂಸ್ಥಾನಮಠ, ಶ್ರೀ ಸಿ.ಪುರುಷೋತ್ತಮಾನಂದ ಪುರಿ ಸ್ವಾಮಿಗಳು, ಭಗೀರಥಪೀಠ ಮಧುರೆ, ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಕನಕ ಗುರುಪೀಠ, ಶ್ರೀ ಬಸವನಾಗಿದೇವ ಶರಣರು ಛಲವಾದಿ ಗುರುಪೀಠ ಸಿಬಾರ, ಶ್ರೀ ಒಕ್ಕಲಿಗ ಮುದ್ದಣ್ಣ ಸ್ವಾಮಿಗಳು ನಿಡಸಾಲಿ ಉಪಸ್ಥಿತರಿದ್ದರು. 
ಕಾರ‍್ಯಕ್ರಮದಲ್ಲಿ  ನಾಗರಾಜ ದೇವದಾಸಿ ವಿಮೋಚನಾ ಸಂಘ, ಮೈಲಪ್ಪ ಬಿಸರಳ್ಳಿ ದಲಿತ ಒಕ್ಕೂಟ, ಡಾ.ಜ್ಞಾನಸುಂದರ, ಮಲ್ಲಮ್ಮ ಮಠದ, ಪ್ರೊ.ರಾಜೇಂದ್ರ , ಭರಮಪ್ಪ ಬೆಲ್ಲದ,ಎ.ಎಂ.ಮದರಿ, ರಾಜಾಬಕ್ಷಿ ಎಚ್.ವಿ., ರಾಜಶೇಖರ ಮುಳುಗುಂದ ಸೇರಿದಂತೆ ಇತರರು  ಉಪಸ್ಥಿತರಿದ್ದರು. ಕಾರ‍್ಯಕ್ರಮದ ಕೊನೆಯಲ್ಲಿ ಸ್ವಾಮಿಜಿಯವರು ಇಂತಹ ದೇವದಾಸಿ ಪದ್ದತಿ ನಿಲ್ಲಿಸಲು ಪ್ರತಿಜ್ಞಾ ವಿಧಿ ಭೋದಿಸಿದರು. ಸ್ವಾಗತವನ್ನು ಎಚ್.ಪಾಟೀಲ್ ಮಾಡಿದರೆ. ಕಾರ‍್ಯಕ್ರಮವನ್ನು ಅಲ್ಲಮಪ್ರಭು ಬೆಟ್ಟದೂರ ನಡೆಸಿಕೊಟ್ಟರು. 
Please follow and like us:
error

Leave a Reply

error: Content is protected !!