ಕಾಂಗ್ರೆಸ್ ಕಾರ್ಯಕರ್ತನೆಂಬುವುದೇ ಹೆಮ್ಮೆಯ ಸಂಗತಿ-ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ :- ದಿ  ೨೮  ರಂದು ಬೆಳಿಗ್ಗೆ ೯.೦೦ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ ೧೮೮೪ ರಲ್ಲಿ ಪ್ರಾರಂಭಗೊಂಡ ಕಾಂಗ್ರೆಸ್ ಪಕ್ಷವು ಭಾರತ ಸ್ವತಂತ್ರ ಸಂಗ್ರಾಮಕ್ಕೆ ನಾಂದಿಯಾಯಿತು. ಈ ದೇಶವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಸ್ವತಂತ್ರಗೊಳಿಸಿ ಆಧುನಿಕ ಭಾರತಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ, ಇಂತಹ ಪಕ್ಷದ ಕಾರ್ಯಕರ್ತನಾಗಿರುವುದೇ ಜೀವನದ ಬಹಳ ಹೆಮ್ಮೆಯ ಸಂಗತಿ ಎಂದು ಹೇಳಿದರು.
                    ಈ ಸಂದರ್ಭದಲ್ಲಿ ಜುಲ್ಲಾಖಾದ್ರಿ, ಮರ್ದಾನಅಲಿ ಅಡ್ಡೆವಾಲೆ, ಶಾಂತಣ್ಣ ಮುದುಗಲ್, ಜಾಕಿರ ಕಿಲ್ಲೇದಾರ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ, ದ್ಯಾಮಣ್ಣ ಚಿಲವಾಡಗಿ, ಅಪ್ಸರಸಾಬ, ವೈಜನಾಥ ದಿವಟರ, ಪ್ರಶಾಂತ ರಾಯಕರ, ಶಿವಾನಂದ ಹೊದ್ಲೂರ, ಮುನೀರ ಸಿದ್ದೀಕಿ, ಸುಮಂಗಲಾ ಕರ್ಲಿ, ನೂರಜಹಾಂ ಬೇಗಂ, ಧಾರವಾಡ ರಫೀ, ಮಹೆಬೂಬ ಅರಗಂಜಿ, ಗೋಲಿ ಮಹಮ್ಮದ್, ಚನ್ನಮ್ಮ, ಬಡೆಮ್ಮಾ ಗೌರಿಅಂಗಳ ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು , ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ಉಪಸ್ಥಿತರಿದ್ದರು. 

Leave a Reply