ವಿದೇಶಗಳನ್ನು ಸೆಳೆದು ಉದ್ಯೋಗ ಹೆಚ್ಚಳ: ಪ್ರಧಾನಿ

ಬೆಂಗಳೂರು, ಫೆ.18: ವಿದೇಶಗಳನ್ನು ಸೆಳೆದು ನಮ್ಮಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ಕೆಲಸವನ್ನು ಸರಕಾರ ಕೈಗೊಂಡಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು  ಬೆಂಗಳೂರಿನಲ್ಲಿ ಇಂದು “ಅಂತಾರಾಷ್ಟ್ರೀಯ ಏರ್ ಇಂಡಿಯಾ ಶೋ”  ಯಲಹಂಕ ವಾಯು ನೆಲೆಯಲ್ಲಿ 5 ದಿನಗಳ  ಕಾಲ ನಡೆಯಲಿರುವ ವಿಮಾನ ಹಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನದ ಉಪಯೋಗವನ್ನು ಪಡೆಯುವುದಕ್ಕಾಗಿ. ನಮ್ಮ ದೇಶದಲ್ಲಿ ಹಲವು ಕಂಪೆನಿಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ತೆರೆದು ವಸ್ತುಗಳ ಉತ್ಪಾದನೆ ಮಾಡುವುದು. ಇದರಿಂದ ಆಮದು ಕಡಿಮೆಯಾಗಿ ಉದ್ಯೋಗವು ಹೆಚ್ಚಲಿದೆ. ಅಲ್ಲದೆ ನಮ್ಮ ಸರಕಾರ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ಖಾಸಗಿ ಕಂಪನಿಗಳನ್ನು ಪ್ರೋತ್ಸಾಹಿಸುತ್ತದೆ.  ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ರಕ್ಷಣಾ ಕ್ಷೇತ್ರದ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಪ್ರಧಾನ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಯಲಹಂಕ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, 1,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 
Please follow and like us:
error