ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ವರುಣ ಜಪ.

ಕೊಪ್ಪಳ: ವಿವೇಕಜಾಗೃತ ಬಳಗ ಕೊಪ್ಪಳ ವತಿಯಿಂದ ದಿನಾಂಕ ೧೪-೦೭-೨೦೧೪ ರಂದು  ಮುಂಜಾನೆ ೫:೩೦ ಗಂಟೆಗೆ ಕೊಪ್ಪಳ ನಗರದ ಹೊರ ವಲಯದಲ್ಲಿರುವ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವರುಣ ಜಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಭದ್ರಯ್ಯ ಬಿ ಹಿತ್ತಲಮನಿಯವರು ಚಾಲನೆ ನೀಡಿದರು. ವಿವೇಕ ಜಾಗೃತ ಬಳಗದ ಅಧ್ಯಕ್ಷ ಸಿ. ವಿ ಮಡಿವಾಳರ, ಬಿ. ಈ. ಕರಿಗಾರ, ಸಿ ವಿ. ಕಟ್ಟಿ, ರವೀದ್ರ ರೆಡ್ಡಿ, ಎನ್.ಎ. ಕೆಂಚರಡ್ಡಿ, ಬಸವರಾಜ ಪಲ್ಲೇದ. ಕೆ.ವಿ. ಕಟ್ಟಿ, ನಿಜಗುಣಿ ವಿ. ಕೊರ್‍ಲಹಳ್ಳಿ, ಸಿ.ಎಸ್. ಹಿರೇಮಠ, ಕೊಟ್ರಪ್ಪ ಅಂಗಡಿ, ಪವಾಡೆಪ್ ಗಡಾದ, ಶಿವಾನಂದಯ್ಯ ಬೀಳಗಿಮಠ, ಚಂದ್ರಶೇಖರ ಪಾಟೀಲ, ಕೆ.ಎಸ್ ಕುಡಗುಂಟಿ ಮುಂತಾದವರು ಭಾಗವಹಿಸಿದ್ದರು. ಇಂದಿನಿಂದ ೧೧ ದಿನಗಳ ಕಾಲ ಈ ವರುಣ ಜಪ ನೆಡೆಯಲಿದೆ. ಆದ್ದರಿಂದ ವಿವೇಕ ಜಾಗೃತ ಭಳಗದ ಸರ್ವ ಜನರು ಮಳೆಗಾಗಿ ಈ ಪ್ರಾರ್ಥನೆಯಲ್ಲಿ ಭಾಗವಹಿಸಬೇಕೆಂದು ವಿವೆಕ ಜಾಗೃತ ಭಳಗದ ಜ್ಯೋತಿ ಸಂಚಾಲಕರಾದ ಗವಿಸಿದ್ದಪ್ಪ ಕರ್ಕಿಹಳ್ಳಿ ತಿಳಿಸಿದ್ದಾರೆ.

Please follow and like us:

Related posts

Leave a Comment