ಸೈನಿಕಹುಳು (ಲದ್ದಿಹುಳು)ವಿನ ನಿರ್ವಹಣಾ ಕ್ರಮಗಳು ರೈತರಿಗೆ ಸಲಹೆ.

ಕೊಪ್ಪಳ
ಅ. ೧೩ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಸಜ್ಜೆ, ನವಣೆ ಮತ್ತು ಮೆಕ್ಕೆಜೋಳ
ಬೆಳೆಗಳಿಗೆ ಸೈನಿಕ ಹುಳು (ಲದ್ದಿಹುಳು) ಬಾಧೆ ವ್ಯಾಪಕವಾಗಿ ಕಂಡುಬಂದಿದ್ದು, ಇದರ
ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು
ನೀಡಿದೆ.
     ಕೊಪ್ಪಳ ಜಿಲ್ಲೆಯ ಕಾಟ್ರಳ್ಳಿ, ಕೊಳೂರು, ಮೈನಳ್ಳಿ, ಉಪ್ಪಲಾಪುರ,
ಕಲಕೇರಿ, ಯಡ್ಡೋಣಿ, ಗುನ್ನಾಳ, ನಿಲೋಗಲ್, ಹುಣಿಸಿಹಾಳ, ಬೆಟಗೇರಿ ಇನ್ನೂ ಮುಂತಾದ
ಹಳ್ಳಿಗಳಲ್ಲಿ ಸೈನಿಕ ಹುಳುಗಳ ಬಾಧೆ ಹೆಚ್ಚಾಗಿದ್ದು ಸಜ್ಜೆ, ನವಣೆ ಮತ್ತು ಮೆಕ್ಕೆಜೋಳ
ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಸೈನಿಕ ಮರಿಹುಳುಗಳು ರಾತ್ರಿಯ ಸಮಯದಲ್ಲಿ ಅಧಿಕವಾಗಿ
ಎಲೆ ಮತ್ತು ತೆನೆಯ ದೇಟುಗಳನ್ನು ತಿಂದು ಲದ್ದಿಹಾಕುತ್ತವೆ. ಹಗಲಿನಲ್ಲಿ ಸಸಿಗಳ
ಬುಡದಲ್ಲಿ ಅವಿತುಕೊಳ್ಳುತ್ತವೆ. ಇತ್ತೀಚಿಗೆ ಮೆಕ್ಕೆಜೋಳದಲ್ಲಿ ತೀವ್ರವಾಗಿ
ಕಾಣಿಸಿಕೊಂಡು ಬೆಳೆಯನ್ನು ಹಾಳುಮಾಡುತ್ತಿವೆ.
ನಿರ್ವಹಣಾ ಕ್ರಮಗಳು :  ಬೆಳೆಯ
ಸುತ್ತಮುತ್ತಲಿನ ಕಳೆ ಮತ್ತು ಕಸ ಇರದಂತೆ ಸ್ವಚ್ಛಗೊಳಿಸಬೇಕು.  ನಂತರ ಪಾಷಾಣ ಬಳಸುವುದು
ಮುಖ್ಯವಾಗಿದ್ದು,  ಪಾಷಾಣ ತಯಾರಿಸುವ ವಿಧಾನ ಇಂತಿದೆ.  ೪ ಕಿ. ಗ್ರಾಂ ಬೆಲ್ಲ ೨೫೦
ಮಿ.ಲೀ ಮೊನೋಕ್ರೋಟೊಫಾಸ್ ೩೬ ಎಸ್ ಎಲ್ ೫-೮ ಲೀಟರ್ ನೀರು ಹಾಗೂ ೫೦ ಕಿ. ಗ್ರಾಂ ಅಕ್ಕಿ
ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ ೪೮ ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು
ಇಡಬೇಕು.  ಕಳಿತ ಪಾಷಾಣವನ್ನು ಹೆಕ್ಟೇರಿಗೆ ೫೦ ಕಿ. ಗ್ರಾಂ ದಷ್ಟು ಹೊಲದ ಸುತ್ತ, ಸುಳಿ
ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು. 
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ
ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್ P. ಎ (೯೮೪೫೧೯೪೩೨೮) ಇವರನ್ನು
ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯).

೦.೩ ಮಿ.ಲೀ ಇಂಡಾಕ್ಸಕಾರ್ಬ್ ೧೫ ಎಸ್.ಸಿ
ಅಥವಾ ೦.೧ ಮಿ.ಲೀ ಸ್ಪೈನೋಸ್ಯಾದ್ ಅಥವಾ ರೈನಾಕ್ಷಿಪೈರ್ ೦.೧೫ ಮಿ.ಲೀ ಅಥವಾ ೨.೫ ಮಿ.ಲೀ
ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್
ನೀರಿನಲ್ಲಿ ಬೆರೆಸಿ  ಸಾಯಂಕಾಲ ಸಿಂಪಡಿಸಬೇಕು.  ನೀರು ಲಭ್ಯವಿಲ್ಲದ ಕಡೆ ಎಕರೆಗೆ ೭-೮
ಕೆ.ಜಿ ಶೇ.೫ರ ಮೆಲಾಥಿಯಾನ್ ಅಥವಾ ಶೇ ೧.೫ರ ಕ್ವಿನಾಲ್‌ಫಾಸ್ ಪುಡಿಯನ್ನು
ಧೂಳೀಕರಿಸಬೇಕು.  ವಿಷ ಪಾಷಾಣ ಹಾಕಿದ ಹೊಲಗಳಲ್ಲಿ ಕೋಳಿ, ದನಕರು ಹಾಗೂ ಇತರೆ ಪ್ರಾಣಿಗಳು
ಪಾಷಾಣ ತಿನ್ನದಂತೆ ಎಚ್ಚರ ವಹಿಸಬೇಕು.

Please follow and like us:
error