ಮೈಸೂರು- ಶಿರಡಿ ವಿಶೇಷ ರೈಲು

ಕೊಪ್ಪಳ : ನೈಋತ್ಯ ರೈಲ್ವೆ ವಲಯವು ಮೈಸೂರು- ಶಿರಡಿ ಸಾಯಿನಗರ ಮಾರ್ಗದಲ್ಲಿ ವಾರದ ವಿಶೇಷ ರೈಲು ಜು. ೨೫ ರಿಂದ ಪ್ರಾರಂಭವಾಗಲಿದ್ದು, ಮೈಸೂರು ನಗರಕ್ಕೆ ಈ ಭಾಗದಿಂದ ನೇರ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಸೇವೆಯನ್ನು ಪ್ರಾರಂಭಿಸಿದ್ದಕ್ಕಾಗಿ ಸಂಸದ ಶಿವರಾಮಗೌಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರು-ಶಿರಡಿ ಸಾಯಿನಗರ ಮಾರ್ಗವಾಗಿ ೧೫ ಟ್ರಿಪ್ ವಾರದ ವಿಶೇಷ ರೈಲು (ರೈಲು ಸಂಖ್ಯೆ ೦೬೨೦೧) ಸಂಚರಿಸಲಿದ್ದು, ಜು. ೨೫ ರಿಂದ ಪ್ರತಿ ಸೋಮವಾರ ಬೆಳಿಗ್ಗೆ ೭-೧೫ ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಮೈಸೂರು, ಮಂಡ್ಯ, ರಾಮನಗರ, ಕೆಂಗೇರಿ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ಚಳ್ಳಕೆರೆ, ರಾಯದುರ್ಗ ಮಾರ್ಗವಾಗಿ ಬಳ್ಳಾರಿಗೆ ರಾತ್ರಿ ೮-೩೦ ಕ್ಕೆ ಆಗಮಿಸಲಿದೆ. ನಂತರ ೯-೪೮ಕ್ಕೆ ಹೊಸಪೇಟೆ, ೧೦-೧೮ಕ್ಕೆ ಕೊಪ್ಪಳ, ೧೧-೨೫ಕ್ಕೆ ಗದಗ, ರಾತ್ರಿ ೧೨-೧೮ಕ್ಕೆ ಬಾದಾಮಿ, ೧೨-೫೩ಕ್ಕೆ ಬಾಗಲಕೋಟೆ, ಬಿಜಾಪುರ, ಸೊಲ್ಲಾಪುರ ಮಾರ್ಗವಾಗಿ ಮಂಗಳವಾರ ಮಧ್ಯಾಹ್ನ ೨-೧೫ ಗಂಟೆಗೆ ಶಿರಡಿ ಸಾಯಿನಗರ ಸೇರಲಿದೆ. ಶಿರಡಿ ಸಾಯಿನಗರ-ಮೈಸೂರು ವಾರದ ವಿಶೇಷ ರೈಲು (೦೬೨೦೨) ಜು. ೨೬ ರಿಂದ ಪ್ರತಿ ಮಂಗಳವಾರ ಮಧ್ಯಾಹ್ನ ೩-೩೦ ಗಂಟೆಗೆ ಶಿರಡಿ ಸಾಯಿನಗರ ನಿಲ್ದಾಣದಿಂದ ಹೊರಟು ಬಾಗಲಕೋಟೆಗೆ ಬುಧವಾರ ಬೆಳಿಗ್ಗೆ ೫.೦೮, ಬಾದಾಮಿ- ೫.೩೮, ಗದಗ-೬.೫೫, ಕೊಪ್ಪಳ-೭.೩೦, ಹೊಸಪೇಟೆ-೮.೩೮, ಬಳ್ಳಾರಿ-೧೦.೧೫, ರಾಯದುರ್ಗ-೧೧.೩೮, ಚಿತ್ರದುರ್ಗ- ೨.೦೮ ಮಾರ್ಗವಾಗಿ ರಾತ್ರಿ ೧೦. ೫೫ ಗಂಟೆಗೆ ಮೈಸೂರು ತಲುಪಲಿದೆ. ಈ ವಿಶೇಷ ವಾರದ ರೈಲು ಅಕ್ಟೋಬರ್ ೩೧ ರವರೆಗೆ ಓಡಾಟ ನಡೆಸಲಿದೆ. ಉತ್ತರ ಕರ್ನಾಟಕ ಭಾಗದಿಂದ ಚಿತ್ರದುರ್ಗ, ಬೀರೂರು, ಅರಸೀಕೆರೆ ಮಾರ್ಗವಾಗಿ ಮೈಸೂರಿಗೆ ನೇರವಾಗಿ ಸಂಪರ್ಕಿಸುವ ಯಾವುದೇ ರೈಲ್ವೆ ಸೇವೆ ಇದುವರೆಗೂ ಇರಲಿಲ್ಲ. ಸದ್ಯ ನೈಋತ್ಯ ರೈಲ್ವೆ ವಲಯವು ಮೈಸೂರು- ಶಿರಡಿ ಸಾಯಿನಗರ ಮಾರ್ಗಕ್ಕೆ ನೂತನ ವಾರದ ವಿಶೇಷ ರೈಲು ಸೇವೆ ಒದಗಿಸುವುದರ ಮೂಲಕ ಈ ಭಾಗದ ಜನರ ಬೇಡಿಕೆಗೆ ಮನ್ನಣೆ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error