ಕಾರಟಗಿ ಪುರಸಭೆ ವಾರ್ಡುಗಳ ವ್ಯಾಪ್ತಿ ನಿಗದಿ ಆಕ್ಷೇಪಣೆಗಳಿಗೆ ಆಹ್ವಾನ.

ಕೊಪ್ಪಳ,
ನ. ೦೨ (ಕ ವಾ) ಕಾರಟಗಿ ಪುರಸಭೆಯ ಎಲ್ಲಾ ೨೩ ವಾರ್ಡುಗಳ ಪ್ರಸ್ತಾವಿತ
ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ವಿಂಗಡಣೆಯನ್ನು
ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಕಾರಟಗಿ ಪುರಸಭೆಗೆ ೨೦೧೧ ರ ಜನಗಣತಿ ಆಧಾರದ ಮೇರೆಗೆ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ವಿಂಗಡಣೆ ಮಾಡಲಾಗಿರುವ ವಿವರ ಈ ಕೆಳಗಿನಂತಿದೆ.
ಕಾರಟಗಿಯ
ವಾರ್ಡ್ ನಂ.೦೧ ರ ವ್ಯಾಪ್ತಿಯಲ್ಲಿ ಉಪ್ಪಾರ ಓಣಿ, ವಾರ್ಡ್ ನಂ.೦೨- ದಾಸರ ಓಣಿ, ಛಲವಾದಿ
ಓಣಿ, ಉಪ್ಪಾರ ಓಣಿ, ಹರಿಜನ ಓಣಿ, ವಾರ್ಡ ನಂ.೦೩ ರಲ್ಲಿ ಬಿಲ್ಲಾರ ಓಣಿ, ಭವಾಜಿಯವರ
ಓಣಿ, ವಾರ್ಡ್ ನಂ.೦೪ ರಲ್ಲಿ ಸಾಲೋಣಿ ಮತ್ತು ಹೆಚ್.ಬಿ.ಕಾಲೋನಿ, ವಾರ್ಡ್ ನಂ.೦೫ ರಲ್ಲಿ
ಸಾಲೋಣಿ ಓಣಿ, ಕಬ್ಬೇರ ಓಣಿ, ವಾರ್ಡ್ ನಂ.೦೬ ರಲ್ಲಿ ಶೀಲವಂತರ ಓಣಿ, ಗದ್ದೇರ ಓಣಿ,
ಮಜ್ಜಿಗಾಂಬ್ರ ಓಣಿ, ಚೌಕಿ ಮಠ, ವಾರ್ಡ್ ನಂ.೦೭ ರಲ್ಲಿ ಭಜಂತ್ರಿ ಓಣಿ, ಡಾ||ರಾಜಕುಮಾರ
ಬಯಲು ರಂಗಮಂದಿರ, ಆರೇರ ಓಣಿ, ಗಣಾಚಾರಿಯವರ ಓಣಿ, ವಾರ್ಡ್ ನಂ.೦೮ ರಲ್ಲಿ ಪನ್ನಾಪೂರ
ಕ್ಯಾಂಪ್, ರಾಘವೇಂದ್ರ ಕ್ಯಾಂಪ್, ಸಿದ್ಧಲಿಂಗನಗರ, ಸಾಕ್ಷಿ ಮಿಲ್ ಏರಿಯಾ, ವಾರ್ಡ್
ನಂ.೦೯ ಬಸವೇಶ್ವರ ನಗರ, ಕೆ.ಇ.ಬಿ ಏರಿಯಾ, ಕನಕಾಚಲ ಮಿಲ್ ಏರಿಯಾ, ವಾರ್ಡ್ ನಂ.೧೦ ರಲ್ಲಿ
ಸಿದ್ಧಪರ್ವತನಗರ, ಶಿವಶಕ್ತಿ ನಗರ, ಪೋತಪ್ಪನಕಟ್ಟಿ ಏರಿಯಾ, ಎ.ಪಿ.ಎಂ.ಸಿ ಏರಿಯಾ,
ವಾರ್ಡ್ ನಂ.೧೧ ರಲ್ಲಿ ಕೋಟೆ, ಪನ್ನಾಪುರ, ರಸ್ತೆಯ ದಕ್ಷಿಣ ಭಾಗದ ಸಿ.ಬಿ.ಎಸ್ ನಗರ
ಮತ್ತು ವಲಿಸಾಬ ದರ್ಗಾ, ವಾರ್ಡ್ ನಂ.೧೨ ರಲ್ಲಿ ವಸುಂಧರ ನಗರ, ರಾಜೀವ್‌ಗಾಂಧಿ ನಗರ,
ವಾರ್ಡ್ ನಂ.೧೩ ರಲ್ಲಿ ದಲಾಲಿ ಬಜಾರ, ಕೆರೆ ಬಸವೇಶ್ವರ ದೇವಸ್ಥಾನದ ಏರಿಯ ಮತ್ತು ರಾಜೀವ್
ಗಾಂಧಿ ನಗರದ ಎಸ್.ಸಿ.ಕಾಲೋನಿ ಏರಿಯಾವನ್ನು ಸೇರಿಸಲಾಗಿದೆ. 
     ವಾರ್ಡ್ ನಂ.೧೪
ರಲ್ಲಿ ರಾಮನಗರ ಮೇಲ್ಭಾಗ, ಕೆ.ಹೆಚ್.ಬಿ ಕಾಲೋನಿ, ರಾಮನಗರ ಕೆಳಭಾಗ, ವಾರ್ಡ್ ನಂ.೧೫
ರಲ್ಲಿ ರಾಮನಗರ ಕೆಳಭಾಗ, ಟೀಚರ್‍ಸ್ ಕಾಲೋನಿ, ವಾಸವಿ ನಗರ, ಗುಡಿತಿಮ್ಮಪ್ಪ ಕ್ಯಾಂಪ್
ಏರಿಯಾ, ವಾರ್ಡ್ ನಂ.೧೬ ರಲ್ಲಿ ಜೆ.ಪಿ.ನಗರ, ಶ್ರೀದೇವಿ ಗುಡಿ ಏರಿಯಾ, ವಾರ್ಡ್ ನಂ.೧೭
ರಲ್ಲಿ ಜೆ.ಪಿ.ನಗರ ಮತ್ತು ಪದ್ಮಾ ಟಾಕೀಸ್ ಏರಿಯಾ, ವಾರ್ಡ್ ನಂ.೧೮ ರಲ್ಲಿ ಇಂದಿರಾ ನಗರ,
ಸರ್ಕಾರಿ ಆಸ್ಪತ್ರೆಯ ಏರಿಯಾ, ವಾರ್ಡ್ ನಂ.೧೯ ರಲ್ಲಿ ಇಂದಿರಾ ನಗರ, ಬನ್ನಿಮಹಾಕಾಳಿ
ದೇವಸ್ಥಾನದ ಏರಿಯಾ, ೩೧ ನೇ ಕಾಲುವೆಯ ಉತ್ತರ ಭಾಗದ ಏರಿಯಾ, ವಾರ್ಡ್ ನಂ.೨೦ ರಲ್ಲಿ
ಜೆ.ಪಿ.ನಗರ ಮತ್ತು ಶಿವನಗರ, ವಾರ್ಡ್ ನಂ.೨೧ ರಲ್ಲಿ ಶಿವನಗರ, ಅಬ್ದುಲ್ ನಜೀರ್‌ಸಾಬ್
ಕಾಲೋನಿ, ಅಬ್ದುಲ್ ನಜೀರ್‌ಸಾಬ್ ಕಾಲೋನಿ, ಭಜಂತ್ರಿಯವರ ಏರಿಯಾ, ವಾಲ್ಮೀಕಿ ನಗರ (ಕಲ್
ಮಿಷನ್ ಏರಿಯಾ), ಬಸವ ನಗರ, ಬೂದಗುಂಪಾ ರಸ್ತೆಯ ಶಿವಪ್ರಸಾದ ಮಿಲ್ ಏರಿಯಾ ಹಾಗೂ ವಾರ್ಡ್
ನಂ.೨೩ ರ ವ್ಯಾಪ್ತಿಯಲ್ಲಿ ದೇವಿಕ್ಯಾಂಪ್ ಮತ್ತು ಬೀರಪ್ಪ ಕ್ಯಾಂಪ್ ಪ್ರದೇಶಗಳನ್ನು
ಸೇರಿಸಿ, ಈ ರೀತಿಯಾಗಿ ಕ್ಷೇತ್ರ ವಿಂಗಡಗಣೆ ಮಾಡಲಾಗಿದೆ.
     ಕರಡು
ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಕೊಪ್ಪಳ,
ತಹಸಿಲ್ದಾರರ ಕಚೇರಿ, ಗಂಗಾವತಿ ಹಾಗೂ ಕಾರಟಗಿ ಪುರಸಭೆ ಕಚೇರಿಯ ನೋಟಿಸ್ ಫಲಕದಲ್ಲಿ
ಪ್ರಚುರಪಡಿಸಲಾಗಿದೆ. ವಾರ್ಡುಗಳ ವಿಂಗಡಣೆ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ
ವ್ಯಾಪ್ತಿಯಲ್ಲಿರುವ ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆ, ಸೂಚನೆಗಳು
ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ತಮ್ಮ ಪೂರ್ಣ ವಿಳಾಸದೊಂದಿಗೆ
ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಗೆ ನವೆಂಬರ್.೧೫ ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ
ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಭಾರಿ ಜಿಲ್ಲಾಧಿಕಾರಿ ಡಾ||
ಪ್ರವೀಣ ಕುಮಾರ ಜಿ.ಎಲ್. ಅವರು ತಿಳಿಸಿದ್ದಾರೆ.  
ಡಿ.೧೨ ರಂದು ಮೆಗಾ ಲೋಕ ಅದಾಲತ್ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ.
ಕೊಪ್ಪಳ,
ನ. ೦೨ (ಕ ವಾ) ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರುಗಳ ವತಿಯಿಂದ  ನ್ಯಾಯಾಲಯಗಳಲ್ಲಿ
ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಡಿ.೧೨ ರಂದು
ಮೆಗಾ ಲೋಕ ಅದಾಲತ್‌ನ್ನು ಏರ್ಪಡಿಸಲಾಗಿದೆ.
     ಸಾರ್ವಜನಿಕರು ಈ ಮೆಗಾ ಲೋಕ
ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ರಾಜಿಯಾಗುವಂತಹ ಕ್ರಿಮಿನಲ್
ಪ್ರಕರಣಗಳು, ಇತ್ಯರ್ಥವಾಗುವಂತಹ ಸಿವಿಲ್, ಕೌಟುಂಬಿಕ, ಮೋಟಾರು ವಾಹನ ಅಪಘಾತ, ಚೆಕ್
ಬೌನ್ಸ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಮೆಗಾ
ಲೋಕ ಅದಾಲತ್ ಅಂಗವಾಗಿ ಪ್ರತಿ ನಿತ್ಯ ಜನತಾ ನ್ಯಾಯಾಲಯವನ್ನು ಏರ್ಪಡಿಸಲಾಗಿದೆ. ಈ ಜನತಾ
ನ್ಯಾಯಾಲಯದಲ್ಲಿ ಉಭಯ ಪಕ್ಷಕಾರರು  ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು.
ಅಲ್ಲದೇ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ
ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು
ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು
ಪೂರ್ವವಾಗಿ ಪಾವತಿಸಲಾಗುವುದು. ಇಲ್ಲಿ ಸೌಹಾರ್ದಯುತವಾಗಿ ಪ್ರಕರಣವು
ಇತ್ಯರ್ಥಗೊಳ್ಳುವುದರಿಂದ ಬಾಂಧ್ಯವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳಲಿದೆ. ಕಡಿಮೆ
ಖರ್ಚಿನಲ್ಲಿ ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು 
ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ನಾಗರತ್ನ ಅವರು ತಿಳಿಸಿದ್ದಾರೆ.
Please follow and like us:
error