ರಂಗಭೂಮಿಯ ಕಲೆಗೆ ಪ್ರೋತ್ಸಾಹಿಸುವುದು ಅಗತ್ಯ

ಕೊಪ್ಪಳ,ಮಾ.೨೧: ಸಮಾಜಕ್ಕಾಗಿ ನಿಸ್ವಾರ್ಥದ ಸೇವೆ ಸಲ್ಲಿಸುವ ಅಗತ್ಯವಿದೆ. ನಿಸ್ವಾರ್ಥದ ಸೇವೆಯಿಂದ ಸದೃಢವಾದಂತಹ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದರೆ ಇಂದಿನ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ಯಮದ ಹಾವಳಿಯಿಂದ ನಮ್ಮ ಹಳೆಯ ಪರಂಪರೆ
ಪ್ರತಿಬಿಂಬಿಸುವಂತಹ ರಂಗ ಕಲೆ ನಶಿಸಿ ಹೊಗುತ್ತಿರುವುದು ವಿಷಾದದ ಸಂಗತಿಯಾಗಿದ್ದು ನಮ್ಮ ಹಳೆಯ ಸಂಸ್ಕೃತಿ ಪರಂಪರೆ ಜೀವಂತವಾಗಿ ಉಳಿಸಲು ರಂಗಭೂಮಿಯ ಕಲೆಗೆ ಪ್ರೋತ್ಸಾಹಿಸುವುದು ಅಗತ್ಯವಾಗಿದ್ದು, ಇದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮ ನಾಡಿನ ಪ್ರತಿ ಯೊಬ್ಬ ನಾಗರಿಕನ ಮೇಲಿದೆ ಎಂದು ಸೈಯ್ಯದ್ ಪೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ಹೇಳಿದರು.
ಅವರು ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಯಲಾಟದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ,  ಮನುಷ್ಯ ಪಾತ್ರದಾರಿಯಾದರೆ ಆ ಪರಮಾತ್ಮ ಸೂತ್ರದಾರಿಯಾಗಿದ್ದು ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಂದಲ್ಲ ಒಂದು ನಾಟ್ಯ ನಟಿಸುv
ಲೇ ಇರುತ್ತಾನೆ. ಇಂತಹ ರಂಗ ಭೂಮಿಯ ನಾಟಕದಲ್ಲಿ ಬರುವಂತಹ ಒಳ್ಳೆಯ ಸನ್ನಿವೇಶವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಅದರಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬ 
ನುಷ್ಯ ರಂಗ ಭೂಮಿ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ ತಮ್ಮ ಜೀವನವನ್ನು ಶಾಂತಿಯ ಬದುಕಿನೊಂದಿಗೆ ಸಾಗಿಸಲು ಅನಕೂಲವಾಗುತ್ತದೆ ಎಂದು ಕೆ.ಎಂ.ಸೈಯ್ಯದ ಅಭಿಪ್ರಾಯ ಪಟ್ಟರು.ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿರುವ ರಾಜಕೀಯ ಡೊಂಬರಾಟ  ದಂತಹ ಬಯಲಾಟವಾಗಲಿ, ನಾಟಕವಾಗಲಿ ಯಾರು ಮಾಡುವುದು ಬೇಡ ಯಡಿಯೂರಪ್ಪ ದಿನಕ್ಕೊಂದು ಪಾತ್ರ, ದಿನಕ್ಕೊಂದು ಅಭಿನಯ ಮಾಡುತಿರುವುದು ಹಾಸ್ಯಾಸ್ಪದ ಇಂತಹ ಪಾತ್ರ ಯಾರು ಮಾಡುವುದು ಬೇಡ ಎಂದು ಕೆ.ಎಂ.ಸೈಯ್ಯದ್ ವ್ಯಂಗವಾಡಿದರು. ಸಮಾರಂಭದಲ್ಲಿ ಹಿಟ್ನಾಳ ಗ್ರಾಮದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಲಾಭಿಮಾನಿಗಳು, ಸಾರ್ವಜನಿಕರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 

Leave a Reply