ಬಾಗಲಕೋಟೆಯಲ್ಲಿ ಡಿ. ೦೮ ರಂದು ಪಪಾಯ ಕೃಷಿ ಕುರಿತು ಕಾರ್ಯಾಗಾರ.

ಕೊಪ್ಪಳ ಡಿ. ೦೫
(ಕ ವಾ) ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ಪಪಾಯ
ಕೃಷಿ ಕುರಿತು ಒಂದು ದಿನದ ಕಾರ್ಯಾಗಾರವನ್ನು ಡಿ. ೦೮ ರಂದು ಬೆಳಿಗ್ಗೆ ೧೦ ಗಂಟೆಗೆ
ಬಾಗಲಕೋಟೆ ತೋ.ವಿ.ವಿ. ವಿಸ್ತರಣಾ ನಿರ್ದೇಶನಾಲಯದ ಸಭಾ ಭವನದಲ್ಲಿ ಆಯೋಜಿಸಿದೆ.
ತೋವಿವಿ,
ಬಾಗಲಕೋಟದ ಕುಲಪತಿ ಡಾ. ಡಿ. ಎಲ್. ಮಹೇಶ್ವರ್ ಇವರು ಅಧ್ಯಕ್ಷತೆಯನ್ನು ವಹಿಸುವರು.
ಪ್ರಗತಿಪರ ರೈತ ಅಜಯಕುಮಾರ ಸರನಾಯಕರವರು ಕಾರ್ಯಾಗಾರವನ್ನು ಉದ್ಘಾಟಿಸುವರು. ಡಾ. ವಿ. ಐ.
ಬೆಣಗಿ, ವಿಸ್ತರಣಾ ನಿರ್ದೇಶಕರು, ಕೃವಿವಿ, ಧಾರವಾಡ, ಬಾಗಲಕೋಟ ತೋಟಗಾರಿಕೆ ಉಪ
ನಿರ್ದೇಶಕ ಡಾ. ಪ್ರಭುರಾಜ, ತೋವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ   ಗೋವಿಂದಪ್ಪ
ಗುಜ್ಜಣ್ಣನವರ, ಜಮಖಂಡಿಯ ಪ್ರಗತಿಪರ ರೈತ ಧನಪಾಲ ಎಲ್ಲಟ್ಟಿ ಇವರು ಮುಖ್ಯ ಅತಿಥಿಗಳಾಗಿ
ಭಾಗವಹಿಸುವರು.  
ಉದ್ಘಾಟನಾ ಕಾರ್ಯಾಕ್ರಮದ ನಂತರ ಪಪಾಯ ಬೆಳೆಗಾರರ ರೈತರಿಂದ-ರೈತರ
ಸಂವಾದ ಕಾರ್ಯಕ್ರಮ ನಡೆಯುವುದು.  ಮಧ್ಯಾಹ್ನ ತಾಂತ್ರಿಕ ಗೋಷ್ಠಿ ಜರುಗುವದು. ಪಪಾಯ
ತಳಿಗಳ ಕುರಿತು ಡಾ. ವಾಸು, ವಿಜ್ಞಾನಿಗಳು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ,
ಬೆಂಗಳೂರು, ಬೆಳೆ ಸಾಗುವಳಿ ಕುರಿತು ಡಾ. ಆನಂದ ನಂಜಪ್ಪನವರ, ರೋಗಗಳ ನಿರ್ವಹಣೆ ಕುರಿತು
ಡಾ. ರಾಘವೇಂದ್ರ ಆಚಾರಿ ಹಾಗೂ ಡಾ.ವ್ಹಿ.ಆಯ್. ಬೆಣಗಿ ಅವರು ಕೀಟಗಳ ನಿರ್ವಹಣೆ ಕುರಿತು
ಡಾ. ರಾಮನಗೌಡ, ಮೌಲ್ಯವರ್ಧನೆ ಕುರಿತು ಡಾ. ಎಸ್. ಎಲ್. ಜಗದೀಶ, ಮಾರುಕಟ್ಟೆ ಕುರಿತು
ಡಾ. ತನ್ವೀರ್ ಅಹ್ಮದ, ವಿಜ್ಞಾನಿಗಳು ಉಪನ್ಯಾಸ ನೀಡುವರು.  ಡಾ. ಜೆ. ವೆಂಕಟೇಶ,
ಸಂಶೋಧನಾ ನಿರ್ದೇಶಕರು, ತಾಂತ್ರಿಕ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.  ಅಲ್ಲದೆ ಪಪಾಯ
ಬೆಳೆಗೆ ಬೇಕಾಗುವ ಪರಿಕರಗಳ ಸರಬುದಾರರು, ಪಪಾಯ ಹಣ್ಣುಗಳ ಖರೀದಿದಾರರು, ಪಪಾಯ ಹಣ್ಣಿನ
ಸಂಸ್ಕರಣಾದಾರರು, ವಿಶೇಷವಾಗಿ ಥೈವಾನ ರೆಡ್‌ಲೇಡಿ ಬೀಜಗಳ, ಸಸಿಗಳ ಪೂರೈಕೆದಾರರು,
ಮುಂಬೈ, ಹೈದ್ರಾಬಾದ ಹಾಗೂ ಬೆಂಗಳೂರದಿಂದ ಪಪಾಯ ಖರೀದಿದಾರರು ಭಾಗವಹಿಸಿ ಮಾರುಕಟ್ಟೆ
ಅವಕಾಶಗಳ ಕುರಿತು ಮಾಹಿತಿ ಒದಗಿಸುವುರು.   ಈ ಕಾರ್ಯಾಗಾರದಲ್ಲಿ ಪಪಾಯ ಬೆಳೆ
ಕುರಿತು ವಿಶೇಷ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುವುದು. ಪ್ರದರ್ಶನದಲ್ಲಿ ಪಪಾಯ
ಬೆಳೆಯ ವಿವಿಧ ತಳಿಯ ಬೀಜಗಳು, ಸಸಿಗಳು, ಕೀಟಬಾಧೆಯ ಹಾಗೂ ರೋಗದ ವಿಶೇಷವಾಗಿ ರಿಂಗ ಸ್ಪಾಟ
ವೈರಸ್ ಬಾಧೆಯ ಮಾದರಿಗಳು, ಲಘುಪೋಷಕಾಂಶಗಳ ಕೊರತೆಯ ಮಾದರಿಗಳು, ಮೌಲ್ಯವರ್ದಿತ
ಪದಾರ್ಥಗಳು, ಮಾರುಕಟ್ಟೆಗೆ ಪಪಾಯ ಕಳುಹಿಸುವಾಗ ಬಳಸುವ ಪ್ಯಾಕಿಂಗ ವಸ್ತುಗಳ
ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಒಂದು ದಿನದ ಕಾರ್ಯಾಗಾರಕ್ಕೆ ಹೆಚ್ಚಿನ
ಸಂಖ್ಯೆಯಲ್ಲಿ ಪಪಾಯ ಬೆಳೆಗಾರರು, ಪಪಾಯ ಸಸಿ ಪೂರೈಕೆದಾರರು, ಪಪಾಯ ಖರೀದಿದಾರರು ಹಾಗೂ
ಸಂಸ್ಕರಣಾದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲಾಭ ಪಡೆದುಕೊಳ್ಳಬೇಕೆಂದು
ಕಾರ್ಯಾಗಾರದ ಆಯೋಜಕರು ಹಾಗೂ ತೋವಿವಿಯ ವಿಸ್ತರಣಾ ನಿರ್ದೇಶಕ ಡಾ. ಎ. ಬಿ. ಪಾಟೀಲ ಇವರು
ಕೋರಿದ್ದಾರೆ.

Please follow and like us:
error