ಕವಿಯ ಕಾವ್ಯಕುಶಲತೆ,ಪ್ರೌಡಿಮೆ ಅಭಿವ್ಯಕ್ತಿಸುವ ಶೈಲಿಯಲ್ಲಿದೆ – ಗೋರಂಟ್ಲಿ

ಕೊಪ್ಪಳ :  ನಿರಂತರ ಹಾಗೂ ವೈವಿದ್ಯನಯ ಓದಿನಿಂದ ಗಟ್ಟಿ ಬರಹ ಬರುತ್ತದೆ.  ಹಾಡುಗವನಗಳಲ್ಲಿ ಪ್ರಾಸಗಳು ಮುಖ್ಯ.. ಅಭಿವ್ಯಕ್ತಿಸುವ ರೀತಿ ,ಶೈಲಿಯಲ್ಲಿ ಕವಿಯ ಕಾವ್ಯ ಕುಶಲತೆ ,ಪ್ರೌಢಿಮೆ ಕಂಡುಬರುತ್ತದೆ.ಕವಿಸಮಯ ಬರಹಗಾರರಿಗೆ  ಉತ್ತಮ ನೆಲೆಗಟ್ಟನ್ನು  ರೂಪಿಸುತ್ತಿದೆ ಎಂದು ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿ ಪ್ರಾಂಗಣದಲ್ಲಿ  ಹಮ್ಮಿಕೊಂಡಿದ್ದ ೧೧೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಆರಂಭದಲ್ಲಿ  ಹಿರಿಯ ಸಾಹಿತಿ ಬುದ್ದಣ್ಣ ಹಿಂಗಮಿರೆ ನಿಧನಕ್ಕೆ ಸಂತಾಪ ಸೂಚಿಲಾಯಿತು. ಮೃತರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.  ಅನಸೂಯಾ  ಜಾಗೀರದಾರರ ಸ್ವಾಗತಗೀತೆಯೊಂದಿಗೆ ಕಾರ್‍ಯಕ್ರಮ ಆರಂಭವಾಯಿತು.  ನಂತರ ನಡೆದ ಕವಿಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಮಠದ- ಬಾಲಕಿ, ಪುಷ್ಪಲತಾ ಏಳುಬಾವಿ- ನೈದಿಲೆ, ಪಂಕಜ, ಅನಸೂಯಾ ಜಾಗೀರದಾರ- ಕಾಗದ ಕೆರೆಯ ಕಥೆ, ಶಾಂತಾದೇವಿ ಹಿರೇಮಠ- ರೈತ, ಮಹೇಶ ಬಳ್ಳಾರಿ- ಪ್ರತಿರೋಧ, ವಿಠ್ಠಪ್ಪ ಗೋರಂಟ್ಲಿ- ಹೆಜ್ಜೆ ಮೂಡದ ಹಾದಿ, ಕುರುವತ್ತಿಗೌಡ್ರ- ಬದಲಾಗಲಿ, ಬಸವರಾಜ ಸಂಕನಗೌಡ್ರ- ಮಳೆ ಮಾತು, ಡಾ.ಆರ್.ಎಂ.ಪಾಟೀಲ್- ಬಾರದು ಬಪ್ಪದು, ಶ್ರೀನಿವಾಸ ಚಿತ್ರಗಾರ- ಮಾತೇಕೇ?, ವೀರಣ್ಣ ಹುರಕಡ್ಲಿ- ಪಂಚಮಿ ಹಾಡು, ಶಾಂತು ಬಡಿಗೇರ- ಎನ್ನ ಮನದಲ್ಲಿ ನೀನು, ಶಿವಪ್ರಸಾದ ಹಾದಿಮನಿ-ಕಾಪಾಡು ಶಿವ ಕವನಗಳನ್ನು ವಾಚನ ಮಾಡಿದರು. ಸಿರಾಜ್ ಬಿಸರಳ್ಳಿ ಸೂಫಿ ಕಥೆಗಳ ವಾಚನ ಮಾಡಿದರು.
ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರು ತಮ್ಮ ತಂದೆಯವರ ಸ್ಮರಣಾರ್ಥ ಕೊಪ್ಪಳ ಜಿಲ್ಲಾ ಕೃತಿಗಾಗಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ  ಸ್ಥಾಪಿಸಿರುವ ದಿ.ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿಪ್ರಶಸ್ತಿ (ಕ್ಯಾಲೆಂಡರ್ ವರ್ಷ )ಯ ಬಗ್ಗೆ ಚರ್ಚಿಸಲಾಯಿತು. ದತ್ತಿಪ್ರಶಸ್ತಿಯನ್ನು ಸ್ಥಾಪಿಸಿದ ಡಾ.ಮಹಾಂತೇಶ ಮಲ್ಲನಗೌಡರಿಗೆ ಕವಿಸಮೂಹದ ಪರವಾಗಿ ಅಭಿನಂದಿಸಲಾಯಿತು.
ಕಾರ್‍ಯಕ್ರಮದಲ್ಲಿ ಬಸವರಾಜ್ ಶೀಲವಂತರ, ಹನ್ಮಂತಪ್ಪ ಅಂಡಗಿ, ಸುದೀಂದ್ರ,ಶಿವಾನಂದ ಹೊದ್ಲೂರ, ಹೇಮರಾಜ ಶರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್‍ಯಕ್ರಮದ ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಬಸವರಾಜ ಸಂಕನಗೌಡ್ರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 
Please follow and like us:
error

Related posts

Leave a Comment