ಕೊಪ್ಪಳ ಜ.೨೧ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಇದೇ ಪ್ರಥಮ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕೊಪ್ಪಳದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದು ಮೆರವಣಿಗೆಗೆ ಭಕ್ತಿ ಭಾವ ಮೂಡಿಸಿದರು, ಡೊಳ್ಳು ಕುಣಿತ ಕಲಾವಿದರೂ ಸೇರಿದಂತೆ ವಿವಿಧ ಕಲಾವಿದರು ಮೆರವಣಿಗೆಗೆ ಮೆರಗು ತಂದರು. ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯು ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ ಮೂಲಕ ನಗರದ ಸಾಹಿತ್ಯ ಭವನದವರೆಗೆ ಸಾಗಿಬಂದಿತು.
Please follow and like us: