ಜಾಗೃತಿಯಿಂದ ಮತಚಲಾಯಿಸಿ ತುಳಸಿ ಮದ್ದೆನೇನಿ

ಕೊಪ್ಪಳ :- ಕೊಪ್ಪಳದ ಸ್ಥಳೀಯ ಸರಕಾರಿ ಪ್ರಥಮ ದರ್ಜೆಕಾಲೇಜಿನ್‌ನ ೨೦೧೨-೧೩ ನೇ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್. ಶಿಬಿರಲ್ಲಿ ದತ್ತುಗ್ರಾಮ ಕೊಪ್ಪಳ ತಾಲೂಕಿನ ಓಜನಹಳ್ಳಿಯಲ್ಲಿ ದಿನಾಂಕ ೨೦-೦೩-೨೦೧೩ ರಂದು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ತುಳಸಿ ಮದ್ದೇನೇನಿ ಯವರು ಉದ್ಘಾಟಿಸಿ ಶಿಬರಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕರಿಗಳು ಶಿಬಿರಾರ್ಥಿಗಳಿಗೆ ಮತದಾನದ ಪವಿತ್ರತೆಯನ್ನೂ ಹಾಗೂ ದಕ್ಷತೆಯಿಂದ ಶ್ರಮವಹಿಸಿ ಕಾರ್ಯನಿರ್ವಹಿಸಿದರೆ ಸಾಧನೆ ಸುಲಭವೆನ್ನೂವದನ್ನು ತಿಳಿಸಿ ಪ್ರತಿಜ್ಞೆ ಭೊದನೆ ಮಾಡಿಸಿದರು ಗ್ರಾಮ ಪಂಚಾಯತಿಯ ಅಭಿವೃದಿಯ ಅಧಿಕಾರಿಗಳಾದ ಶ್ರೀಮತಿ ಮಂಜುಳಾ ಸೀಗನಹಳ್ಳಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರವಿ ಹಿರೇಮಠ ಉಪನ್ಯಾಸಕರಾದ ವೀರಣ್ಣ ಸಜ್ಜನ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್.ಎಸ್.ಎಸ್ ಸಂಯೋಜನಾಧಿಕಾರಿಯಾದ ಪ್ರೋಪ್ರಭುರಾಜ ನಾಯಕ್‌ರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಎನ್.ಎಸ್.ಎಸ್ ಶಿಬಿರಗಳು ನಡೆದು ಬಂದ ಹಾದಿಯನ್ನು ವಿವರಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರು ಶಿಬಿರದ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸಾರ್ವಜನಿಕರ ಮೆಚ್ಚುಗೆಗೆ ಶಿಬಿರಾರ್ಥಿಗಳು ಪಾತ್ರರಾಗಬೇಕೆಂದು ಎಂಬ ಕಿವಿಮಾತನ್ನು ಹೇಳಿದರು ಕಾರ್ಯಕ್ರಮದ ಆರಂಭದಲ್ಲಿ ಮೌನೆಶ  ಸ್ವಾತಿಸಿದರು ಹಾಗೂ ಕುಮಾರ ಯಮನೂರಪ್ಪ ಕಬಳಿ ಹೊರತಟ್ನಾಳ ಕಾರ್ಯಕ್ರಮ ನಿರೂಪಿಸಿದರು. 
Please follow and like us:
error