ವಿಜೃಂಭಣೆಯಿಂದ ಸ್ವಾತಂತ್ಯ್ರ ದಿನಾಚರಣೆ

ಡಾ. ಶ್ರೀ ವೀರೇಂದ್ರ ಹೆಗ್ಗಡೆ ಪಬ್ಲಿಕ್ ಸ್ಕೂಲ್ ನಲ್ಲಿ ವಿಜೃಂಬಣೆಯಿಂದ ಸ್ವಾತಂತ್ಯ್ರ ದಿನಾಚರಣೆ ಆಚರಿಸಲಾಯಿತು. 
ಕೊಪ್ಪಳ ಅಗಷ್ಟ ೨೧, ತಾಲೂಕಿನ ಓಜನಹಳ್ಳಿ ಗ್ರಾಮದ ಶ್ರೀ ವೀರೇಂದ್ರ ಹೆಗ್ಗಡೆ ಶಿಕ್ಷಣ ಮತ್ತು ಗ್ರಾಮೀಣಾಬಿವೃದ್ದಿ ಸಂಸ್ಥೆ (ರಿ) ಓಜನಹಳ್ಳಿ ಇವರ ಸಂಸ್ಥೆಯ ಅಡಿಯಲ್ಲಿ ಪ್ರಾರಂಭವಾದ. ಶ್ರೀ ವೀರೇಂದ್ರ ಹೆಗ್ಗಡೆ ಪಬ್ಲೀಕ್ ಸ್ಕೂಲ್ ನಲ್ಲಿ ಅಗಷ್ಟ ೧೫, ೨೦೧೩ ರಂದು ಬೆಳಗ್ಗೆ ೮: ೩೦ ಕ್ಕೆ ೬೭ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ವಾಯ್ ಅಂಗಡಿ ದ್ವಜಾರೊಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಉಮಾಪತಿ ಹಿರೇಮಠ ಆಗಮಿಸಿದ್ದರು, ಕಾರ್ಯದರ್ಶಿ ವಿಶ್ವನಾಥ ಅಂಗಡಿ, ಉರಿನ ಹಿರಿಯರಾದ ಹೇಮಣ್ಣ ಈಶ್ವರ ಗೌಡ್ರ, ಹನಮಂತಪ್ಪ ಚಿಲವಾಡಗಿ, ಮಲ್ಲಿಕಾರ್ಜುನ್ ಗದಗ ಮಂಜುನಾಥ ಇಂದರಗಿ, ಗವಿಸಿದ್ದಪ್ಪ ಗೊಂದಳೆ ಇನ್ನು ಮುಂತಾದವರು ಉಪಸ್ಥಿತರಿದ್ದರು. 
ಸುನಂದ ಮೆಳ್ಳಿಕೇರಿ ಪ್ರಾರ್ಥಿಸಿದರು. ಶಿಕ್ಷಕರಾದ ಶಶಿಕುಮಾರ ಬಿ. ನಿರೂಪಿಸಿದರು. ನಾಗರಾಜ ಬಿ ಸ್ವಾಗತಿಸಿದರು. ಶಾಂತ ಈ ವಂದಿಸಿದರು.  

Leave a Reply