ಮಾದ್ಯಮದವರ ಮೇಲೆ ಹಲ್ಲೆಗೆ ಖಂಡನೆ:ಜಿಲ್ಲಾಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ

ಕೊಪ್ಪಳ : ಬಸಾಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ನಡೆಯುತ್ತಿದ್ದ ಸಾಮೂಹಿಕ ನಕಲಿನ ಚಿತ್ರೀಕರಣಕ್ಕೆ ತೆರಳಿದ್ದ ಟಿವಿ೯ ಕ್ಯಾಮೆರಾಮನ್ ಮಾರುತಿ ಕಟ್ಟಿಮನಿ ಮೇಲೆ ಪರೀಕ್ಷಾ ಕೇಂದ್ರದ ಹೊನ್ನನಗೌಡ ಎಂಬುವರು ಹಲ್ಲೆ ಮಾಡಿ ತಳ್ಳಾಡಿ ಅಂಗಿ ಹರಿದು ಹಾಕಿ ಪರೀಕ್ಷಾ ಕೇಂದ್ರದ ಹೊರಗೆ ನೂಕಿದ್ದಾರೆ. ನಿಷ್ಪಕ್ಷಪಾತವಾಗಿ, ಸತ್ಯವನ್ನು ಹೊರಜಗತ್ತಿಗೆ ಭಿತ್ತರಿಸುವ ಕೆಲಸ ಮಾಡುವ ಪತ್ರಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಲೇ ಇವೆ. ಇದನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್‌ವತಿಯಿಂದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ನಿರ್ಭಿತಿಯಿಂದ ಪತ್ರಕರ್ತರು ಕೆಲಸ ಮಾಡವುದು ಅವಶ್ಯಕ. ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರ ವಿರುದ್ದ ಸೂಕ್ತ

ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಸವರಾಜ ಶೀಲವಂತರ, ದೇವು ನಾಗನೂರ ಸಮಾಜಕ್ಕೆ ಸತ್ಯವನ್ನು ತೋರಿಸುವ ಮತ್ತು ದುಷ್ಟ ಶಕ್ತಿಗಳ ಅಕ್ರಮಗಳನ್ನು ಹೊರಹಾಕುವಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಸರಕಾರ ಅಪರಾಧಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ಬಾಚಲಾಪೂರ, ದತ್ತು ಕಮ್ಮಾರ, ಹುಸೇನಪಾಶಾ, ದೊಡ್ಡೇಶ ಯಲಿಗಾರ, ಮಲ್ಲಿಕಾರ್ಜುನಸ್ವಾಮಿ, ದೇವು ನಾಗೂನೂರ, ನಾಭಿರಾಜ ದಸ್ತೆನವರ, ಗಂಗಾಧರ ಬಂಡಿಹಾಳ,ಸಂತೋಷ ದೇಶಪಾಂಡೆ, ತಿಪ್ಪನಗೌಡ ಪಾಟಿಲ್, ಕುಬೇರ್ ಮಜ್ಜಿಗೆ, ಸಿರಾಜ್ ಬಿಸರಳ್ಳಿ, ರವಿಕುಮಾರ, ಪ್ರಕಾಶ ಕಂದಕೂರ, ಪರಮೇಶರಡ್ಡಿ, ಶಂಕರ ಕೊಪ್ಪದ,ಸಮೀರ ಪಾಟೀಲ್, ನಾಗರಾಜ ಹಿರೇಮಠ, ಶಿವರಾಜ ನುಗಡೋಣಿ, ಶ್ರೀಪಾದ ಆಯಾಚಿತ್, ಮಾರುತಿ ಕಟ್ಟಿಮನಿ ಉಪಸ್ಥಿತರಿದ್ದರು.

Please follow and like us:
error